Sign In

By signing in or creating an account, you agree with Associated Broadcasting Company's Terms & Conditions and Privacy Policy.

Andhra Pradesh: ಬಸ್ ಕಾಲುವೆಗೆ ಉರುಳಿ 7 ಮಂದಿ ಸಾವು, 15 ಜನರಿಗೆ ಗಾಯ

ಮದುವೆಗೆ  ಜನರನ್ನು ಕೊಂಡೊಯ್ಯುತ್ತಿದ್ದ ಬಸ್​ ಕಾಲುವೆಗೆ ಉರುಳಿ 7 ಮಂದಿ ಮೃತಪಟ್ಟಿರುವ ಘಟನೆ ಮಂಗಳವಾರ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.

Andhra Pradesh: ಬಸ್ ಕಾಲುವೆಗೆ ಉರುಳಿ 7 ಮಂದಿ ಸಾವು, 15 ಜನರಿಗೆ ಗಾಯ
ಬಸ್Image Credit source: India TV
Follow us
ನಯನಾ ರಾಜೀವ್
|

Updated on: Jul 11, 2023 | 10:57 AM

ಮದುವೆಗೆ  ಜನರನ್ನು ಕೊಂಡೊಯ್ಯುತ್ತಿದ್ದ ಬಸ್​ ಕಾಲುವೆಗೆ ಉರುಳಿ 7 ಮಂದಿ ಮೃತಪಟ್ಟಿರುವ ಘಟನೆ ಮಂಗಳವಾರ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದಾರೆ. ಪೊಡಿಲಿಯಿಂದ ಕಾಕಿನಾಡಕ್ಕೆ ತೆರಳುತ್ತಿದ್ದ ಬಸ್ ದರ್ಶಿ ಬಳಿ ಸಾಗರ್ ನಾಲೆಗೆ ಉರುಳಿದೆ. ಬಸ್​ನಲ್ಲಿ 35-40 ಮಂದಿ ಇದ್ದರು.

ಮದುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕಾಕಿನಾಡಕ್ಕೆ ತೆರಳುತ್ತಿದ್ದರು.ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಇತರ ಇಲಾಖೆಗಳ ಸಮನ್ವಯದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಆರಂಭಿಸಿದರು.

ಮತ್ತಷ್ಟು ಓದಿ: Uttarakhand: ಗಂಗೋತ್ರಿ ಹೆದ್ದಾರಿಯಲ್ಲಿ ಗುಡ್ಡದಿಂದ ವಾಹನಗಳ ಮೇಲೆ ಉರುಳಿದ ಬಂಡೆಗಳು, ನಾಲ್ವರು ಸಾವು

ಪೊಲೀಸರ ಪ್ರಕಾರ, ಸರ್ಕಾರಿ ಸ್ವಾಮ್ಯದ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (APSRTC) ಬಸ್ ಅನ್ನು ಪ್ರಯಾಣಕ್ಕಾಗಿ ಬಾಡಿಗೆಗೆ ತೆಗೆದುಕೊಳ್ಳಲಾಗಿದೆ. ಬಸ್ ಚಾಲಕ ನಿದ್ರಿಸಿದ ಕಾರಣ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಮೃತರನ್ನು ಅಬ್ದುಲ್ ಅಜೀಜ್ (65), ಅಬ್ದುಲ್ ಹನಿ (60), ಶೇಖ್ ರಮೀಜ್ (48), ಮುಲ್ಲಾ ನೂರ್ ಜಹಾನ್ (58), ಮುಲ್ಲಾ ಜಾನಿ ಬೇಗಂ (65), ಶೇಖ್ ಶಬೀನಾ (35) ಮತ್ತು ಶೇಖ್ ಹಿನಾ (6) ಎಂದು ಗುರುತಿಸಲಾಗಿದೆ.

ಇನ್ನೊಂದು ಬಸ್ ಎದುರುಗಡೆಯಿಂದ ಬಂದಿದ್ದು, ಅದನ್ನು ತಪ್ಪಿಸಲು ಹೋಗಿ ರಸ್ತೆಡಯ ಬದಿಯ ಕಾಂಕ್ರೀಟ್ ಬ್ಲಾಕ್​ಗೆ ಡಿಕ್ಕಿ ಹೊಡೆದು ನಂತರ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ