
ನವದೆಹಲಿ, ಜುಲೈ 16: ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಹಿಂದಿ ಹೇರಿಕೆಯನ್ನು ವಿರೋಧಿಸುತ್ತಿರುವ ಬೆನ್ನಲ್ಲೇ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು (Chandrababu Naidu) ಹಿಂದಿ ಭಾಷೆ ಕಲಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ದೇಶದಲ್ಲಿ ಎದ್ದಿರುವ ಭಾಷಾ ವಿವಾದದ ನಡುವೆಯೂ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಹಿಂದಿ ಕಲಿಕೆಯನ್ನು (Hindi Language Row) ಬೆಂಬಲಿಸಿದ್ದಾರೆ. ತಮ್ಮ ಹೇಳಿಕೆಯನ್ನು ಬೆಂಬಲಿಸಲು ಅವರು ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ಉದಾಹರಣೆಯನ್ನು ನೀಡಿದ್ದಾರೆ.
ದೆಹಲಿಯಲ್ಲಿ ಮಾಜಿ ಪ್ರಧಾನಿಯ ಸ್ಮರಣಾರ್ಥ ನಡೆದ ಸ್ಮಾರಕ ಸಮಾರಂಭದಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು, “ನರಸಿಂಹ ರಾವ್ ಭಾರತ ಮಾತೆಯ ಶ್ರೇಷ್ಠ ಪುತ್ರರಲ್ಲಿ ಒಬ್ಬರು” ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಾಜಿ ಪ್ರಧಾನಿ ನರಸಿಂಹ ರಾವ್ ಅವರ ಬುದ್ಧಿಶಕ್ತಿ, ಸುಧಾರಣಾವಾದಿ ಉತ್ಸಾಹ, ಭಾರತದ ರಾಜಕೀಯ ಮತ್ತು ಆರ್ಥಿಕ ಭೂದೃಶ್ಯಕ್ಕೆ ನೀಡಿದ ಕೊಡುಗೆಗಳನ್ನು ಶ್ಲಾಘಿಸಿದರು.
ಇದನ್ನೂ ಓದಿ: ಮಂಗಳೂರು: ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ತುಳು ಭಾಷೆ ಬಳಕೆಗೆ ನಿರ್ಬಂಧ, ವ್ಯಾಪಕ ಆಕ್ರೋಶದ ಬೆನ್ನಲ್ಲೇ ಆದೇಶ ವಾಪಸ್
“ಇಂದು ನಾವೆಲ್ಲರೂ ಹಿಂದಿಯನ್ನು ಏಕೆ ಕಲಿಯಬೇಕು ಎಂಬುದರ ಕುರಿತು ಮಾತನಾಡುತ್ತಿದ್ದರೆ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರು ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ಸಾಕಾರಗೊಳಿಸುವ 17 ಭಾಷೆಗಳಲ್ಲಿ ಪಾಂಡಿತ್ಯ ಸಾಧಿಸಿದ್ದರು. ಅವರು ಹಿಂದಿಯನ್ನು ಮಾತ್ರವಲ್ಲದೆ ಇತರ ಭಾಷೆಗಳನ್ನು ಸಹ ಕಲಿತರು. ಅವರ ಈ ವ್ಯಕ್ತಿತ್ವದಿಂದಲೇ ಮಹಾನ್ ವ್ಯಕ್ತಿಯಾದರು” ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.
VIDEO | Here’s what Andhra Pradesh CM Chandrababu Naidu (@ncbn) said addressing a memorial held for former PM PV Narasimha Rao in Delhi.
“We have gathered here today to reflect on the life of one of the greatest sons of Bharat Mata and Bharat Ratna PV Narasimha Rao. I had a very… pic.twitter.com/3qIdQmxX2i
— Press Trust of India (@PTI_News) July 15, 2025
ತಮ್ಮ ಮತ್ತು ನರಸಿಂಹ ರಾವ್ ನಡುವಿನ ಆತ್ಮೀಯ ಮತ್ತು ಗೌರವಯುತ ಸಂಬಂಧವನ್ನು ಅವರು ನೆನಪಿಸಿಕೊಂಡರು. “ನನಗೆ ಅವರೊಂದಿಗೆ ಉತ್ತಮ ಸಂಬಂಧವಿತ್ತು. ನನಗೆ ಅವರ ಬಗ್ಗೆ ಚೆನ್ನಾಗಿ ತಿಳಿದಿತ್ತು. ತೆಲುಗು ಸಮುದಾಯವು ಅವರ ಬಗ್ಗೆ ಹೆಮ್ಮೆಪಡುತ್ತದೆ. ಅವರು ನಮ್ಮ ಮಹಾನ್ ರಾಷ್ಟ್ರದ ಭವಿಷ್ಯವನ್ನು ಪುನರ್ ರೂಪಿಸಿದ ನಿಜವಾದ ತೆಲುಗು ನಾಯಕ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಹಿಂದಿ ಭಾಷೆ ವಿರುದ್ಧ ಕರಾಳ ದಿನ; ನವೆಂಬರ್ 21ರಿಂದ ಚಳುವಳಿ ನಡೆಸಲು ವಾಟಾಳ್ ಕರೆ
ಅಲ್ಪಸಂಖ್ಯಾತ ಸರ್ಕಾರವನ್ನು ಮುನ್ನಡೆಸುತ್ತಿರುವಾಗ ಮಾಜಿ ಪಿಎಂ ನರಸಿಂಹ ರಾವ್ ಉದಾರೀಕರಣಕ್ಕೆ ಮುಂದಾದರು ಎಂದು ಆಂಧ್ರ ಮುಖ್ಯಮಂತ್ರಿ ಪ್ರಸ್ತಾಪಿಸಿದ್ದಾರೆ. ಮೂಲಸೌಕರ್ಯ ಅಭಿವೃದ್ಧಿಯನ್ನು ವೇಗಗೊಳಿಸಲು ಅಟಲ್ ಬಿಹಾರಿ ವಾಜಪೇಯಿ ಅವರಂತಹ ಇತರ ಮಾಜಿ ಪ್ರಧಾನಿಗಳನ್ನು ಕೂಡ ಚಂದ್ರಬಾಬು ನಾಯ್ಡು ಉಲ್ಲೇಖಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ