ಹೈದರಾಬಾದ್: ದೇವಸ್ಥಾನವೊಂದರ ಜಮೀನು ವ್ಯಾಜ್ಯ ವಿಷಯದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಮಾಜಿ ಸಚಿವಗೆ ಹೈದರಾಬಾದ್ ಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ. ಈ ಮಧ್ಯೆ, 6 ತಿಂಗಳ ಶಿಕ್ಷೆ ವಿಧಿಸಿದ ನಂತರ ಮೇಲ್ಮನವಿ ಸಲ್ಲಿಸಲು ನಾಂಪಲ್ಲಿ ಜನಪ್ರತಿನಿಧಿಗಳ ಕೋರ್ಟ್ ಸಮಯಾವಕಾಶ ನೀಡಿದೆ. ಏಕೀಕೃತ ಆಂಧ್ರಪ್ರದೇಶ ಸರ್ಕಾರದಲ್ಲಿ ಕಾರ್ಮಿಕ ಖಾತೆ ಮಾಜಿ ಸಚಿವ, 63 ವರ್ಷದ ದಾನಂ ನಾಗೇಂದರ್ ಜೈಲು ಶಿಕ್ಷೆಗೆ ಗುರಿಯಾದವರು.
ಪೊಲೀಸ್ ಅಧಿಕಾರಿಗಳು ಮತ್ತು ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿದ್ದ ಆರೋಪದ ಮೇಲೆ ದಾನಂ ನಾಗೇಂದರ್ ವಿರುದ್ಧ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ 2015ರಲ್ಲಿ ಪ್ರಕರಣ ದಾಖಲಾಗಿತ್ತು. ತನ್ನ ವಾಹನಕ್ಕೆ ಅಡ್ಡ ಬಂದಿದ್ದಾನೆಂದು ಪೊಲೀಸ್ ಕಾನ್ಸ್ಟೇಬಲ್ ಮೇಲೆ ಮಾಜಿ ಸಚಿವ ದಾನಂ ನಾಗೇಂದರ್ ಹಲ್ಲೆ ಮಾಡಿದ್ದರು.
ನೈಸ್ ರಸ್ತೆಯಲ್ಲಿ.. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ದರೋಡೆಗೆ ಯತ್ನಿಸ್ತಿದ್ದ ಖದೀಮ ಲಾಕ್
(Andhra Pradesh ex Labour Minister Danam Nagender jailed for 6 months)