Union Cabinet Expansion: ಇಂದು ಪ್ರಧಾನಿ ಮೋದಿ ಸಂಪುಟ ಸೇರಲಿರುವ ಹೊಸ ಸಚಿವರು ಹಾಗೂ ಬಡ್ತಿ ಪಡೆಯಲಿರುವ ಸಚಿವರ ವಿವರ ಇಲ್ಲಿದೆ…
ಈ ಬಾರಿ ಕೇಂದ್ರ ಸಂಪುಟಕ್ಕೆ ಉತ್ತರ ಪ್ರದೇಶದಿಂದಲೇ ಅತ್ಯಂತ ಹೆಚ್ಚು ಸಂಸದರು ಸೇರ್ಪಡೆಯಾಗುತ್ತಿದ್ದಾರೆ ಅಂದರೆ ಅಲ್ಲಿನ ಏಳು ಸಂಸದರಿಗೆ ಸ್ಥಾನ ಸಿಗಲಿದೆ. ಇದು ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿರುವ ಯೋಜನೆ ಎನ್ನಲಾಗುತ್ತಿದೆ.
ದೆಹಲಿ: ಅಂತೂ ಕೇಂದ್ರ ಸಂಪುಟ ವಿಸ್ತರಣೆಗೆ ಇಂದು ಕಾಲ ಕೂಡಿ ಬಂದಿದೆ. ಸಂಜೆ 7ಗಂಟೆಗೆ ಹೊಸ ಸಚಿವರು ಸಂಪುಟ ಸೇರಲಿದ್ದಾರೆ. ಹಾಗೇ ಈಗಾಗಲೇ 12 ಮಂದಿ ಸಚಿವರು ಇಂದು ರಾಜೀನಾಮೆ ಕೊಟ್ಟು ಸಂಪುಟದಿಂದ ಹೊರಬಂದಿದ್ದಾರೆ. ಇಂದು ಏನಿಲ್ಲವೆಂದರೂ ಸುಮಾರು 43 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದು, ಅವರ ಪಟ್ಟಿ ಲಭ್ಯವಾಗಿದೆ. ಇನ್ನು ಇಂದು ಹೊಸದಾಗಿ ಸೇರಲಿರುವ ಸಚಿವರೊಂದಿಗೆ, ಈಗಾಗಲೇ ಇರುವ ಕೆಲವು ಸಚಿವರಿಗೆ ಬಡ್ತಿಯೂ ದೊರೆಯಲಿದೆ ಎನ್ನಲಾಗಿದೆ. ಇನ್ನು ಈ ಬಾರಿ ಕೇಂದ್ರ ಸಂಪುಟಕ್ಕೆ ಉತ್ತರ ಪ್ರದೇಶದಿಂದಲೇ ಅತ್ಯಂತ ಹೆಚ್ಚು ಸಂಸದರು ಸೇರ್ಪಡೆಯಾಗುತ್ತಿದ್ದಾರೆ ಅಂದರೆ ಅಲ್ಲಿನ ಏಳು ಸಂಸದರಿಗೆ ಸ್ಥಾನ ಸಿಗಲಿದೆ. ಇದು ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿರುವ ಯೋಜನೆ ಎನ್ನಲಾಗುತ್ತಿದೆ. ಇನ್ನು ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಿಂದ ತಲಾ ನಾಲ್ವರು ಸಂಸದರು, ಈಶಾನ್ಯ ರಾಜ್ಯಗಳ ಐವರು ಸಂಸದರು ಇಂದು ಸಂಪುಟ ಸೇರಲಿದ್ದಾರೆ. ಅದರಲ್ಲೂ ಒಬಿಸಿ ಸಮುದಾಯದ 27 ಸಂಸದರಿಗೆ ಸ್ಥಾನ ಸಿಗಲಿದೆ ಎಂದು ಹೇಳಲಾಗಿದೆ.
ಇಲ್ಲಿದೆ ನೋಡಿ ಇಂದು ಹೊಸದಾಗಿ ಕೇಂದ್ರ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕಾರ ಮಾಡಲಿರುವವರ ಪಟ್ಟಿ: ಮಹಾರಾಷ್ಟ್ರದ ನಾರಾಯಣ್ ಟಾಟು ರಾಣೆ, ಜ್ಯೋತಿರಾದಿತ್ಯ ಸಿಂಧಿಯಾ, ಸರ್ಬಾನಂದ್ ಸೋನೋವಾಲ್, ಡಾ.ವೀರೇಂದ್ರ ಕುಮಾರ್, ರಾಮಚಂದ್ರ ಪ್ರಸಾದ್ ಸಿಂಗ್, ಅಶ್ವಿನಿ ವೈಷ್ಣವ್, ಪಶುಪತಿ ಕುಮಾರ್ ಪರಾಸ್, ರಾಜ್ಕುಮಾರ್ ಸಿಂಗ್, ಭೂಪೇಂದರ್ ಯಾದವ್, ಪಂಕಜ್ ಚೌಧರಿ, ಅನುಪ್ರಿಯಾ ಸಿಂಗ್ ಪಟೇಲ್, ಡಾ. ಸತ್ಯಪಾಲ್ ಸಿಂಗ್ ಭಾಗೇಶ್, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಭಾನು ಪ್ರತಾಪ್ ಸಿಂಗ್ ವರ್ಮಾ, ದರ್ಶನಾ ವಿಕ್ರಮ ಜಾರ್ದೋಶ್, ಮೀನಾಕ್ಷಿ ಲೇಖಿ, ಅನ್ನಪೂರ್ಣಾ ದೇವಿ, ಎ.ನಾರಾಯಣಸ್ವಾಮಿ, ಕೌಶಲ್ ಕಿಶೋರ್, ಅಜಯ್ ಭಟ್, ಬಿ.ಎಲ್.ವರ್ಮಾ, ಅಜಯ್ ಕುಮಾರ್, ಚೌಹಾಣ್ ದೇವುಸಿನ್ಹ್, ಭಗವಂತ್ ಖೂಬಾ, ಕಪಿಲ್ ಮೋರೇಶ್ವರ್ ಪಾಟೀಲ್, ಪ್ರತಿಮಾ ಭೌಮಿಕ್, ಡಾ. ಸುಭಾಷ್ ಸರ್ಕಾರ್, ಡಾ. ಭಗವತ್ ಕೃಷ್ಣರಾವ್ ಕಾರದ್, ಡಾ. ರಾಜ್ಕುಮಾರ್ ರಂಜನ್ ಸಿಂಗ್, ಡಾ. ಭಾರತಿ ಪ್ರವೀಣ್ ಪವಾರ್, ಬಿಶ್ವೇಶ್ವರ್ ತುಡು, ಶಂತನು ಠಾಕೂರ್, ಡಾ. ಮುಂಜಾಪರಾ ಮಹೇಂದ್ರ ಭಾಯ್, ಜಾನ್ ಬರ್ಲಾ, ಡಾ. ಎಲ್.ಮುರುಗನ್, ನಿತೀಶ್ ಪ್ರಾಮಾಣಿಕ್.
ಹಾಗೇ, ಈಗಾಗಲೇ ಮೋದಿ ಸಂಪುಟದಲ್ಲಿದ್ದು, ಇಂದು ಬಡ್ತಿ ಪಡೆಯಲಿರುವ ಸಚಿವರ ಪಟ್ಟಿ ಹೀಗಿದೆ: ಕಿರಣ್ ರಿಜಿಜು ಪರಶೋತ್ತಮ್ ರೂಪಾಲಾ ಜಿ.ಕಿಶನ್ ರೆಡ್ಡಿ ಅನುರಾಗ್ ಠಾಕೂರ್ ಹರ್ದೀಪ್ ಸಿಂಗ್ ಪುರಿ ಮನಸುಖ್ ಮಾಂಡವಿಯಾ
Union Cabinet Expansion These Mps will take oath as Union Ministers today