ಮದ್ಯದ ಅಮಲಿನಲ್ಲಿದ್ದ ಗಂಡಸರು ಹಣ ದೋಚಲು ಬಂದಾಗ ಮಹಿಳೆ ತಡೆದಿದ್ದಕ್ಕೆ ಅತ್ಯಾಚಾರ ನಡೆದಿದೆ: ವಿವಾದಾತ್ಮಕ ಹೇಳಿಕೆ ನೀಡಿದ ಆಂಧ್ರ ಪ್ರದೇಶದ ಗೃಹ ಸಚಿವೆ

ಮದ್ಯದ ಅಮಲಿನಲ್ಲಿದ್ದ ಗಂಡಸರು ಮಹಿಳೆಯ ಪತಿಯನ್ನು ದೋಚುವ ಉದ್ದೇಶದಿಂದ ದಾಳಿ ನಡೆಸಿದ್ದರು. ಈ ಹೊತ್ತಲ್ಲಿ ಮಹಿಳೆ ಮಧ್ಯಪ್ರವೇಶಿಸಿದಾಗ ಅನಿರೀಕ್ಷಿತವಾಗಿ ಅತ್ಯಾಚಾರ ನಡೆದಿದೆ ಎಂದಿದ್ದಾರೆ ಸಚಿವೆ.

ಮದ್ಯದ ಅಮಲಿನಲ್ಲಿದ್ದ ಗಂಡಸರು ಹಣ ದೋಚಲು ಬಂದಾಗ ಮಹಿಳೆ ತಡೆದಿದ್ದಕ್ಕೆ ಅತ್ಯಾಚಾರ ನಡೆದಿದೆ: ವಿವಾದಾತ್ಮಕ ಹೇಳಿಕೆ  ನೀಡಿದ ಆಂಧ್ರ ಪ್ರದೇಶದ ಗೃಹ ಸಚಿವೆ
ತಾನೆತಿ ವನಿತಾ
Updated By: ರಶ್ಮಿ ಕಲ್ಲಕಟ್ಟ

Updated on: May 05, 2022 | 4:02 PM

ಅಮರಾವತಿ: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಘಟನೆಗಳ ಬಗ್ಗೆಆಂಧ್ರಪ್ರದೇಶದ (Andhra Pradesh) ನೂತನ ಗೃಹ ಸಚಿವೆ ತಾನೆತಿ ವನಿತಾ (Taneti Vanitha) ಅವರು ಹೇಳಿಕೆಯೊಂದು ವಿವಾದ ಸೃಷ್ಟಿಸಿದೆ. ಮೇ 1 ರಂದು 25 ವರ್ಷದ ಗರ್ಭಿಣಿ ಮೇಲೆ ರೇಪಲ್ಲೆ ರೈಲು ನಿಲ್ದಾಣದಲ್ಲಿ (Repalle railway station) ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಬಗ್ಗೆ ಹೇಳಿಕೆ ನೀಡಿ ಸಚಿವೆ ಅತ್ಯಾಚಾರ ಉದ್ದೇಶಪೂರ್ವ ನಡೆದಿದ್ದಲ್ಲ, ಅನಿರೀಕ್ಷಿತ ಸಂದರ್ಭಗಳಲ್ಲಿ ಹಾಗೆ ಸಂಭವಿಸಿದೆ ಎಂದಿದ್ದಾರೆ . ಈ ಹಿಂದೆ ವೈಜಾಗ್‌ನಲ್ಲಿ ಅಪ್ರಾಪ್ತರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಸಚಿವೆ ವನಿತಾ ಅವರು ಮಗುವಿನ ಸುರಕ್ಷತೆಯ ಜವಾಬ್ದಾರಿ ತಾಯಿಯದ್ದು ಎಂದಿದ್ದರು. ಅತ್ಯಾಚಾರದ ಘಟನೆಗಳಿಗೆ ಸಚಿವೆ “ಮಾನಸಿಕ ಪರಿಸ್ಥಿತಿ” ಮತ್ತು ಬಡತನವನ್ನು ದೂಷಿಸಿದ್ದಾರೆ. ಆರೋಪಿಗಳು ಅತ್ಯಾಚಾರ ಮಾಡುವ ಉದ್ದೇಶವನ್ನು ಹೊಂದಿರಲಿಲ್ಲ. ಮದ್ಯದ ಅಮಲಿನಲ್ಲಿದ್ದ ಗಂಡಸರು ಮಹಿಳೆಯ ಪತಿಯನ್ನು ದೋಚುವ ಉದ್ದೇಶದಿಂದ ದಾಳಿ ನಡೆಸಿದ್ದರು. ಈ ಹೊತ್ತಲ್ಲಿ ಮಹಿಳೆ ಮಧ್ಯಪ್ರವೇಶಿಸಿದಾಗ ಅನಿರೀಕ್ಷಿತವಾಗಿ ಅತ್ಯಾಚಾರ ನಡೆದಿದೆ ಎಂದಿದ್ದಾರೆ ಸಚಿವೆ.
ಮಹಿಳೆ ಪತಿಯ ಮೇಲಿನ ಹಲ್ಲೆಯನ್ನು ತಡೆಯಲು ಯತ್ನಿಸಿದಳು, ಆಗ ಅನಿರೀಕ್ಷಿತ ರೀತಿಯಲ್ಲಿ ಕೆಲವು ಘಟನೆಗಳು ನಡೆದವು. ಘಟನೆ ನಡೆದಾಗ ರೈಲ್ವೆ ಪೊಲೀಸರು ಸಹಾಯಕ್ಕೆ ಸಿಗಲಿಲ್ಲ ಎಂದು ಸಂತ್ರಸ್ತೆಯ ಪತಿ ಹೇಳಿದ್ದರು.ಆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವೆ ರೈಲ್ವೇ ಪೋಲೀಸ್ ಪಡೆಗಳು ಲಭ್ಯವಾಗದಿರುವುದನ್ನು ದೂಷಿಸಲಾಗುವುದಿಲ್ಲ. ರೈಲ್ವೆ ನಿಲ್ದಾಣಗಳಲ್ಲಿ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದಿದ್ದಾರೆ.


ಪ್ರತಿಪಕ್ಷ ತೆಲುಗು ದೇಶಂ ಪಕ್ಷವು ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರ ಹೇಳಿಕೆಗಳು ಬೇಜವಾಬ್ದಾರಿ ಎಂದು ಬಣ್ಣಿಸಿದೆ. ಎರಡು ವಾರಗಳಲ್ಲಿ ಆಂಧ್ರ ಪ್ರದೇಶದ ರೈಲು ನಿಲ್ದಾಣಗಳಲ್ಲಿ ಎರಡು ಅತ್ಯಾಚಾರ ಘಟನೆಗಳು ನಡೆದಿವೆ.
ಏಪ್ರಿಲ್ 16 ರಂದು ಗುರಜಾಲ ರೈಲು ನಿಲ್ದಾಣದಲ್ಲಿ ಮಹಾರಾಷ್ಟ್ರದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ