2017ರ ಆಜಾದಿ ಮಾರ್ಚ್​ ಕೇಸ್​: ಗುಜರಾತ್​ ಶಾಸಕ ಜಿಗ್ನೇಶ್​ ಮೇವಾನಿಗೆ ಮೂರು ತಿಂಗಳು ಜೈಲು, 1000 ರೂ. ದಂಡ

ಜಿಗ್ನೇಶ್ ಮೇವಾನಿ ಕಳೆದ ಹಲವು ದಿನಗಳಿಂದಲೂ ಜೈಲಿನಲ್ಲಿಯೇ ಇದ್ದರು. ಮೊದಲು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಟ್ವಿಟರ್​ನಲ್ಲಿ ಅವಹೇಳನ ಮಾಡಿದ್ದಕ್ಕೆ ಅಸ್ಸಾಂ ಪೊಲೀಸರಿಂದ ಅರೆಸ್ಟ್ ಆಗಿದ್ದ ಅವರಿಗೆ ಜಾಮೀನು ಸಿಕ್ಕಿತ್ತು.

2017ರ ಆಜಾದಿ ಮಾರ್ಚ್​ ಕೇಸ್​: ಗುಜರಾತ್​ ಶಾಸಕ ಜಿಗ್ನೇಶ್​ ಮೇವಾನಿಗೆ ಮೂರು ತಿಂಗಳು ಜೈಲು, 1000 ರೂ. ದಂಡ
ಜಿಗ್ನೇಶ್ ಮೇವಾನಿ
Follow us
TV9 Web
| Updated By: Lakshmi Hegde

Updated on:May 05, 2022 | 3:46 PM

2017ರಲ್ಲಿ ನಡೆಸಿದ್ದ ಆಜಾದಿ ಮಾರ್ಚ್​ (ಆಜಾದಿ ಮೆರವಣಿಗೆ) ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಯವರಿಗೆ ಗುಜರಾತ್​ ನ್ಯಾಯಾಲಯವೊಂದು ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಕೇವಲ ಮೇವಾನಿಗೆ ಮಾತ್ರವಲ್ಲ, ಅವರೊಂದಿಗೆ ಇನ್ನೂ 9 ಮಂದಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. 2016ರಲ್ಲಿ ಗುಜರಾತ್​​ನ ಉನಾದಲ್ಲಿ ದಲಿತ  ಕುಟುಂಬದ ಏಳುಮಂದಿಯನ್ನು ಅಲ್ಲಿನ ಗೋರಕ್ಷಕರ ಗುಂಪೊಂದು ಥಳಿಸಿತ್ತು. ಇವರೆಲ್ಲ ಹಸುಗಳನ್ನು ಕಳ್ಳತನ ಮಾಡಿ, ಅದರ ಚರ್ಮವನ್ನು ಸುಲಿಯುವ ಕೆಲಸದವರು ಎಂಬ ಆರೋಪ ಮಾಡಿ ಥಳಿಸಲಾಗಿತ್ತು.  ಅಷ್ಟೇ ಅಲ್ಲ, ನಾಲ್ವರು ದಲಿತ ಪುರುಷರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿತ್ತು. ನಾವು ದಾಳಿ ಮಾಡಿದಾಗ ಇವರೆಲ್ಲರೂ ಹಸುವಿನ ಚರ್ಮ ಸುಲಿಯುತ್ತಿದ್ದರು ಎಂಬುದನ್ನೇ ದೂರಿನಲ್ಲಿ ಉಲ್ಲೇಖಿಸಿದ್ದರು. ಹೀಗಾಗಿ ದಲಿತ ಕುಟುಂಬದವರ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಅದನ್ನು ಬಲವಾಗಿ ವಿರೋಧಿಸಿದ್ದ ಜಿಗ್ನೇಶ್ ಮೇವಾನಿ ದಲಿತರಿಗೆ ಥಳಿಸಿದವರ ವಿರುದ್ಧ ಪ್ರತಿಭಟನೆಗೆ ಕರೆಕೊಟ್ಟಿದ್ದರು.  ಹಾಗೇ ಉನಾ ಥಳಿತ ಪ್ರಕರಣಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ 2017ರ ಜುಲೈನಲ್ಲಿ  ಮೆಹಸಾನಾದಿಂದ ಬನಸ್ಕಾಂತಾಕ್ಕೆ  ಆಜಾದಿ ಮೆರವಣಿಗೆ ನಡೆಸಿದ್ದರು. ಆದರೆ ಈ ಮಾರ್ಚ್​ಗಾಗಿ ಅವರು ಯಾವುದೇ ಅನುಮತಿಯನ್ನೂ ಪಡೆದಿರಲಿಲ್ಲ.  ಈ ಬಗ್ಗೆ ಕೇಸ್ ದಾಖಲಾಗಿ ಕೋರ್ಟ್​​ನಲ್ಲಿ ವಿಚಾರಣೆ ನಡೆಯುತ್ತಿತ್ತು.

ಜಿಗ್ನೇಶ್ ಮೇವಾನಿ ಕಳೆದ ಹಲವು ದಿನಗಳಿಂದಲೂ ಜೈಲಿನಲ್ಲಿಯೇ ಇದ್ದರು. ಮೊದಲು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಟ್ವಿಟರ್​ನಲ್ಲಿ ಅವಹೇಳನ ಮಾಡಿದ್ದಕ್ಕೆ ಅಸ್ಸಾಂ ಪೊಲೀಸರಿಂದ ಅರೆಸ್ಟ್ ಆಗಿದ್ದ ಅವರಿಗೆ ಜಾಮೀನು ಸಿಕ್ಕಿತ್ತು. ಜಾಮೀನು ಸಿಕ್ಕಿ ಹೊರಬರುತ್ತಿದ್ದಂತೆ, ಮಹಿಳಾ ಪೊಲೀಸ್​ ಅಧಿಕಾರಿ ಮೇಲೆ ಹಲ್ಲೆ ಯತ್ನ ಮಾಡಿದ್ದ ಆರೋಪದಡಿ ಮತ್ತೆ ಅಸ್ಸಾಂನಲ್ಲಿಯೇ ಜೈಲು ಸೇರಿದ್ದರು. ಈ ಪ್ರಕರಣದಲ್ಲಿ ಮೇ 1ರಂದು ಜಾಮೀನು ಸಿಕ್ಕಿತ್ತು.

ಅಸ್ಸಾಂನಿಂದ ಗುಜರಾತ್​​ಗೆ ಬಂದಿದ್ದ ಜಿಗ್ನೇಶ್​ ಮೇವಾನಿ ಮತ್ತೆ ಉನಾ ಪ್ರಕರಣದ ಬಗ್ಗೆ ಮಾತನಾಡಿದ್ದರು. 2016ರಲ್ಲಿ ದಲಿತರ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರ ವಿರುದ್ಧವೇ ದಾಖಲಾದ ಪ್ರಕರಣವನ್ನು ರಾಜ್ಯ ಸರ್ಕಾರ ಹಿಂಪಡೆಯದೆ ಇದ್ದಲ್ಲಿ ಜೂನ್​ 1ರಂದು ಗುಜರಾತ್ ಬಂದ್​ ನಡೆಸುವ ಎಚ್ಚರಿಕೆ ನೀಡಿದ್ದರು.  ಅಷ್ಟೇ ಅಲ್ಲ, ಮುಂದ್ರಾ ಬಂದರಿನಲ್ಲಿ ಭಾರಿ ಪ್ರಮಾಣದಲ್ಲಿ ಡ್ರಗ್ಸ್ ವಶಪಡಿಸಿಕೊಂಡಿದ್ದರ ಮತ್ತು 2022ರ  ಪರೀಕ್ಷಾ ಪತ್ರಿಕೆ ಸೋರಿಕೆ ಪ್ರಕರಣಗಳ ಬಗ್ಗೆ ತನಿಖೆ ನಡೆಸದೆ ಇದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದೂ ಹೇಳಿದ್ದರು.

ಇದನ್ನೂ ಓದಿ: Mandira Bedi: ಗಂಡ ಸತ್ತು ವರ್ಷ ಕಳೆದಿಲ್ಲ, ಬೇರೆ ಪುರುಷನ ಜತೆ ಹಿಂಗೆಲ್ಲ ಪೋಸ್​ ನೀಡಿದ್ದಕ್ಕೆ ಮಂದಿರಾ ಬೇಡಿ ಸಖತ್​ ಟ್ರೋಲ್​

Published On - 3:29 pm, Thu, 5 May 22

ಮಿಡಲ್ ಸ್ಟಂಪ್... ಮೊದಲ ಇನಿಂಗ್ಸ್​ನ ಹೀರೋನ ಝೀರೋ ಮಾಡಿದ ಬುಮ್ರಾ
ಮಿಡಲ್ ಸ್ಟಂಪ್... ಮೊದಲ ಇನಿಂಗ್ಸ್​ನ ಹೀರೋನ ಝೀರೋ ಮಾಡಿದ ಬುಮ್ರಾ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್