ಹೈದರಾಬಾದ್: ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷ (YSRCP) ನಗರಾಡಳಿತ ಸಂಸ್ಥೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ. 75 ಪುರಸಭೆಗಳಲ್ಲಿ ಪೈಕಿ 67 ರಲ್ಲಿ ವೈಎಸ್‌ಆರ್‌ಸಿಪಿ ಜಯಗಳಿಸಿದೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಈ ಪಕ್ಷ ಇನ್ನೂ ಐದು ಪುರಸಭೆಗಳಲ್ಲಿ ಮತ್ತು 11 ಮಹಾನಗರ ಪಾಲಿಕೆಗಳಲ್ಲಿ ಮುನ್ನಡೆ ಸಾಧಿಸಿದೆ.
ಹೀಗೆ ಮುನ್ನಡೆ ಮುಂದುವರಿದರೆ, ಕಳೆದ ತಿಂಗಳು ಮೂರು ಹಂತಗಳಲ್ಲಿ ಚುನಾವಣೆ ನಡೆದ 75 ಪುರಸಭೆಗಳಲ್ಲಿ 74 ರಲ್ಲಿ ವೈಎಸ್‌ಆರ್‌ಸಿಪಿ ಜಯಗಳಿಸಬಹುದು. ಅನಂತಪುರ, ಕಡಪ, ಕರ್ನೂಲ್, ಚಿತ್ತೂರ್ , ತಿರುಪತಿ, ಒಂಗೋಲ್, ಗುಂಟೂರು ಪುರಸಭೆಗಳಲ್ಲಿ ವೈಎಸ್‌ಆರ್‌ಸಿಪಿ ಜಯಗಳಿಸಿತ್ತು. ವೈಎಸ್‌ಆರ್‌ಸಿಪಿ ಉತ್ತಮ ಮುನ್ನಡೆ ಸಾಧಿಸಿರುವ ವಿಜಯವಾಡ ಮತ್ತು ವಿಶಾಖಪಟ್ಟಣಂ ಮಹಾನಗರ ಪಾಲಿಕೆಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಪಕ್ಷ ಉತ್ತಮ ಮುನ್ನಡೆ ಸಾಧಿಸಿದೆ.
11 ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆದಿದ್ದು, ಹೈಕೋರ್ಟ್ ಆದೇಶದ ಕಾರಣ ಏಲೂರು ಕಾರ್ಪೊರೇಷನ್ನಲ್ಲಿ ಮತ ಎಣಿಕೆ ಬಾಕಿ ಇದೆ. ತಿರುಪತಿಯ ಹಾಲಿ ಸಂಸದ ಇತ್ತೀಚೆಗೆ ನಿಧನರಾದ ಕಾರಣ ಲೋಕಸಭೆ ಉಪಚುನಾವಣೆಯ ಗೆಲುವು ವೈಎಸ್ಆರ್ಸಿಪಿಗೆ ನಿರ್ಣಾಯಕವಾಗಲಿದೆ.
#UPDATE | YSRCP party won 58 seats in Greater Visakhapatnam Municipal Corporation elections, TDP won 30 seats, Janasena party bagged 3 seats, and BJP, CPI (M) & CPI won one seat each, Independent candidates won 3 seats: Visakhapatnam District Collector Vinay Chand https://t.co/FZLPMZSm08
— ANI (@ANI) March 14, 2021
In the election for Greater Visakhapatnam Municipal Corporation (GVMC), YSRCP is leading on 55 seats, TDP on 29 seats, Jana Sena Party on 4 seats, BJP, CPI(M) & CPI on 1 seat each & Independent candidates on 3 seats: District Public Relations Office #AndhraPradesh
— ANI (@ANI) March 14, 2021
ವೈಎಸ್‌ಆರ್‌ಸಿಪಿ ವಕ್ತಾರ ಅಂಬಟಿ ರಾಂಬಾಬು ಈ ಬಗ್ಗೆ ಪ್ರತಿಕ್ರಿಯಿಸಿದ್ದು ಈ ಫಲಿತಾಂಶಗಳು ಸರ್ಕಾರದ ಅಭಿವೃದ್ಧಿ ಯೋಜನೆಯ ಮತ್ತು ಸರ್ಕಾರದ ಜನಪ್ರಿಯತೆಯನ್ನು ತೋರಿಸುತ್ತದೆ. ವೈಎಸ್‌ಆರ್‌ಸಿಪಿ ಆಡಳಿತದ ಎರಡು ವರ್ಷಗಳಲ್ಲಿ ನಡೆದ ಚುನಾವಣೆ ಫಲಿತಾಂಶವು ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಅವರ ಆಡಳಿತದ ಮಾನದಂಡವನ್ನು ತೋರಿಸುತ್ತದೆ. ಕೊರೊನಾ ಸಾಂಕ್ರಾಮಿಕ ರೋಗದ ಹೊರತಾಗಿಯೂ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ನಗರ ಪ್ರದೇಶಗಳಲ್ಲಿರುವ ಜನರು ವೈಎಸ್ಆರ್ಸಿಪಿಸರ್ಕಾರ ನೀತಿಯನ್ನು ಬೆಂಬಲಿಸಿದ್ದು ಭರ್ಜರಿ ಗೆಲುವು ಸಾಧಿಸಲು ಆಶೀರ್ವದಿಸಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: Andhra Politics: ಆಂಧ್ರ ಪ್ರದೇಶ ರಾಜಕಾರಣ: ಜಗನ್ ಮತ್ತು ಚುನಾವಣಾ ಆಯೋಗದ ಜಟಾಪಟಿ ನಡುವೆಯೇ ಮುಗಿಯಿತು ಪಂಚಾಯತ್ ಚುನಾವಣೆ
ಅಕ್ರಮ ಆಸ್ತಿ ಪ್ರಕರಣ: ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ ಜಾರಿ ನಿರ್ದೇಶನಾಲಯ ಕೋರ್ಟ್ ಸಮನ್ಸ್
Published On - 8:56 pm, Sun, 14 March 21