AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಒಂದು ಊಸರವಳ್ಳಿ; ಸ್ಟಾನ್​ಫೋರ್ಡ್ ಯೂನಿವರ್ಸಿಟಿಯಲ್ಲಿ ಕೈ ಪಕ್ಷವನ್ನು ಕುಟುಕಿದ ಅಣ್ಣಾಮಲೈ

Annamalai compares TN congress to chameleon at Stanford university program: ಸ್ಟ್ಯಾನ್‌ಫೋರ್ಡ್ ಸಂವಾದದಲ್ಲಿ ಅಣ್ಣಾಮಲೈ ಅವರು ಕಾಂಗ್ರೆಸ್‌ನ ಬಣ್ಣ ಬದಲಿಸುವ ರಾಜಕೀಯವನ್ನು 'ಊಸರವಳ್ಳಿ'ಗೆ ಹೋಲಿಸಿದರು. ಶಶಿ ತರೂರ್ ಸಮ್ಮುಖದಲ್ಲೇ ನಡೆದ ಈ ಭಾಷಣದಲ್ಲಿ, ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳ ಮೇಲೆ ಅವಲಂಬಿತವಾಗಿ ದಕ್ಷಿಣ ಭಾರತದಲ್ಲಿ ವಿಭಜಕ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಒಂದು ಊಸರವಳ್ಳಿ; ಸ್ಟಾನ್​ಫೋರ್ಡ್ ಯೂನಿವರ್ಸಿಟಿಯಲ್ಲಿ ಕೈ ಪಕ್ಷವನ್ನು ಕುಟುಕಿದ ಅಣ್ಣಾಮಲೈ
ಅಣ್ಣಾಮಲೈImage Credit source: Diya TV
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 11, 2026 | 10:35 AM

Share

ಚೆನ್ನೈ, ಮೇ 11: ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ (Stanford University) ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ (K Annamalai) ಅವರು ಕಾಂಗ್ರೆಸ್ ಪಕ್ಷವನ್ನು ‘ಊಸರವಳ್ಳಿ’ಗೆ (Chameleon) ಹೋಲಿಸಿ ವಾಗ್ದಾಳಿ ನಡೆಸಿದ್ದಾರೆ. ವಿಶೇಷವೆಂದರೆ, ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಅವರ ಸಮ್ಮುಖದಲ್ಲೇ ಅಣ್ಣಾಮಲೈ ಈ ಟೀಕೆ ಮಾಡಿದ್ದಾರೆ.

ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷವು ಡಿಎಂಕೆ ಭಾಷೆಯನ್ನೇ ಇಷ್ಟು ವರ್ಷ ಬಳಸುತ್ತಿತ್ತು, ಆದರೆ ಈಗ ರಾತ್ರೋರಾತ್ರಿ ನಟ ವಿಜಯ್ ಅವರ ಪಕ್ಷದತ್ತ ಒಲವು ತೋರುತ್ತಿದೆ. ಈ ಬದಲಾವಣೆಯನ್ನು ಕಂಡು “ಊಸರವಳ್ಳಿಯೂ ಕೂಡ ಇಷ್ಟು ವೇಗವಾಗಿ ಬಣ್ಣ ಬದಲಿಸುವುದಿಲ್ಲ” ಎಂದು ಅಣ್ಣಾಮಲೈ ಲೇವಡಿ ಮಾಡಿದ್ದಾರೆ.

ಅಣ್ಣಾಮಲೈ ಮಾತನಾಡಿರುವ ವಿಡಿಯೋ

ಪರಾವಲಂಬಿ ರಾಜಕೀಯ: ಕಾಂಗ್ರೆಸ್ ಸ್ವತಂತ್ರ ಅಸ್ತಿತ್ವವನ್ನು ಕಳೆದುಕೊಂಡಿದ್ದು, ಅಧಿಕಾರದಲ್ಲಿರುವ ಪ್ರಾದೇಶಿಕ ಪಕ್ಷಗಳ ಮೇಲೆ ಸವಾರಿ ಮಾಡುತ್ತಾ ತನ್ನ ನಿಲುವನ್ನು ಬದಲಾಯಿಸಿಕೊಳ್ಳುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಇದನ್ನೂ ಓದಿ: ಉದ್ಯೋಗಿಗಳೋ ಅಥವಾ ರೋಬೋಟ್‌ಗಳೋ?: ಕಂಪನಿಯ ವಿಚಿತ್ರ ನಿಯಮಕ್ಕೆ ‘ನೋ’ ಎಂದ ಯುವತಿ

ಕಾಂಗ್ರೆಸ್ ಪಕ್ಷ ಯಾವುದಾದರೂ ಒಂದು ದಕ್ಷಿಣ ರಾಜ್ಯವನ್ನು ಗೆದ್ದು ಬಿಟ್ಟರೆ ಸಾಕು, ದಕ್ಷಿಣ ಭಾರತ ಬೇರೆ, ಕೇರಳ ಬೇರೆ, ತಮಿಳುನಾಡು ಬೇರೆ, ಆಂಧ್ರ ಬೇರೆ, ತೆಲಂಗಾಣ ಬೇರೆ ಎಂದು ಯಾರಾದರೂ ಒಬ್ಬ ಕಾಂಗ್ರೆಸ್ ಸಂಸದ ಟ್ವೀಟ್ ಮಾಡಲು ಆರಂಭಿಸುತ್ತಾರೆ. ಶಶಿ ತರೂರ್ ಅವರು ಇಂತಹ ಸಂಸದರಿಗೆ ಆಪ್ತರಾಗಿದ್ದಾರೆ ಎಂದು ಅಣ್ಣಾಮಲೈ ಬೇಸರ ವ್ಯಕ್ತಪಡಿಸಿದ್ದಾರೆ.

ಶಶಿ ತರೂರ್ ಅವರು ವಿಶ್ವಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಗೌರವಾನ್ವಿತ ವ್ಯಕ್ತಿ. ಆದರೆ ಅವರು ಕಾಂಗ್ರೆಸ್ ಪಕ್ಷದ ಭಾಷೆ ಮಾತನಾಡಲು ಶುರು ಮಾಡಿದರೆ ವಿವಾದಗಳು ಸೃಷ್ಟಿಯಾಗುತ್ತವೆ. ಕೇರಳ ಕಾಂಗ್ರೆಸ್‌ನಲ್ಲಿನ ಮುಖ್ಯಮಂತ್ರಿ ಆಯ್ಕೆಯ ಗೊಂದಲವನ್ನು ಮುಚ್ಚಿಡಲು ಸ್ಟ್ಯಾನ್‌ಫೋರ್ಡ್‌ನಲ್ಲಿ ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಮತದಾರರ ಪಟ್ಟಿ ಮತ್ತು ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಲಕ್ಷಾಂತರ ಜನರ ಮತಗಳನ್ನು ತೆಗೆದುಹಾಕಲಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಅವರು ತಿರುಗೇಟು ನೀಡಿದರು.

ಹಳೆಯ ಕಾಲದ ಕಾಂಗ್ರೆಸ್: ಅಣ್ಣಾಮಲೈ

ಭಾರತವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ, ಆದರೆ ಕಾಂಗ್ರೆಸ್ ಇನ್ನೂ 1960ರ ದಶಕದಲ್ಲೇ ಉಳಿದುಕೊಂಡಿದೆ. ಇಂದಿನ ಯುವ ಪೀಳಿಗೆ ಅಭಿವೃದ್ಧಿ ಪರ ರಾಜಕೀಯವನ್ನು ಬಯಸುತ್ತಿದೆ. ಹಳೆಯ ಕಾಲದ ವೈಫಲ್ಯಗಳಿಗೆ ಈಗಿನ ಬಿಜೆಪಿ ಸರ್ಕಾರವನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ಅಣ್ಣಾಮಲೈ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಇದನ್ನೂ ಓದಿ: ವಿಜಯ್ ಮಂತ್ರಿಮಂಡಲ; ಎಂಜಿಆರ್ ಒಡನಾಡಿ, ವೈದ್ಯ, ಸಂಘಟನಾ ಚತುರ, ಯುವತಿ, ಚಿತ್ರ ನಟ ಮೊದಲಾದವರು…

ಚಮಿಲಿಯನ್ ಅಲ್ಲ ತಮಿಳಿಯನ್ ಅಂತ ಅಂದಿದ್ದು

ತಮ್ಮ ಮುಂದೆಯೇ ಕಾಂಗ್ರೆಸ್ ಅನ್ನು ಊಸರವಳ್ಳಿ ಎಂದು ಜರಿದ ಅಣ್ಣಾಮಲೈಗೆ ಶಶಿ ತರೂರ್ ಸೌಮ್ಯವಾಗಿಯೇ ತರಾಟೆಗೆ ತೆಗೆದುಕೊಂಡರು. ಅಣ್ಣಮಲೈ ಅವರು ತಮಿಳುನಾಡು ಕಾಂಗ್ರೆಸ್ ಅನ್ನು ಚಮಿಲಿಯನ್ ಅಲ್ಲ ತಮಿಳಿಯನ್ ಎಂದು ಹೇಳಿರಬಹುದು ಎಂದು ತರೂರ್ ತಮಾಷೆ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us