ಪೂರ್ವ ಲಡಾಖ್​ ಸೇನಾ ಸಂಘರ್ಷ; ಭಾರತ-ಚೀನಾ ನಡುವೆ ಇಂದು 13ನೇ ಸುತ್ತಿನ ಮಾತುಕತೆ

| Updated By: Lakshmi Hegde

Updated on: Oct 10, 2021 | 9:33 AM

ಕಳೆದ ಜೂನ್​ನಲ್ಲಿ ಭಾರತ ಮತ್ತು ಚೀನಾ ಸಂಘರ್ಷ ಆದಾಗಿನಿಂದ ಇದುವೆಗೆ ಎರಡೂ ದೇಶಗಳ ನಡುವೆ ಸುಮಾರು 12 ಸುತ್ತಿನ ಮಾತುಕತೆಗಳು ನಡೆದಿವೆ. ಆದರೆ ಸೇನಾ ಸಂಘರ್ಷ ನಿಲ್ಲುತ್ತಿಲ್ಲ. ಚೀನಿಯರ ಉಪಟಳವೂ ನಿಂತಿಲ್ಲ.

ಪೂರ್ವ ಲಡಾಖ್​ ಸೇನಾ ಸಂಘರ್ಷ; ಭಾರತ-ಚೀನಾ ನಡುವೆ ಇಂದು 13ನೇ ಸುತ್ತಿನ ಮಾತುಕತೆ
ಭಾರತ-ಚೀನಾ ಗಡಿ
Follow us on

ಪೂರ್ವ ಲಡಾಖ್​, ಅರುಣಾಚಲ ಪ್ರದೇಶ, ಉತ್ತರಾಖಂಡ್​ ಗಡಿ ಭಾಗಗಳಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಪದೇಪದೆ ಸಂಘರ್ಷ ಏರ್ಪಡುತ್ತಿದೆ. ದೊಡ್ಡಮಟ್ಟದ್ದು ಅಲ್ಲದೆ ಇದ್ದರೂ, ಆಗಾಗ ಸಣ್ಣಪುಟ್ಟ ಸಂಘರ್ಷ ನಡೆಯುತ್ತಿದೆ. ಅದರಲ್ಲೂ ಪೂರ್ವ ಲಡಾಖ್​​ನಲ್ಲಿ ಎರಡೂ ದೇಶಗಳ ನಡುವೆ ಜಟಾಪಟಿ ಕಳೆದ ಒಂದು ವರ್ಷಗಳಿಂದಲೂ ನಡೆಯುತ್ತಲೇ ಇದೆ. ಇತ್ತೀಚೆಗೆ ಮತ್ತೆ ಅಲ್ಲಿ ಭಾರತ-ಚೀನಾ ಸೈನಿಕರು ಮುಖಾಮುಖಿಯಾಗಿ, ಸಣ್ಣಮಟ್ಟದ ಜಟಾಪಟಿ ನಡೆದಿತ್ತು. ಹೀಗೆ ಉಭಯ ದೇಶಗಳ ನಡುವೆ ನಡೆಯುತ್ತಿರುವ ಸೇನಾ ಸಂಘರ್ಷವನ್ನು ಪರಿಹರಿಸುವ ಸಲುವಾಗಿ ಇಂದು ಮತ್ತೆ ಭಾರತ-ಚೀನಾ ನಡುವೆ 13ನೇ ಸುತ್ತಿನ ಮಾತುಕತೆ ನಡೆಯಲಿದೆ.  ಈ ಮಾತುಕತೆ ಸೇನಾ ಕಮಾಂಡರ್​​ಗಳ ಮಟ್ಟದಲ್ಲಿ ನಡೆಯಲಿದ್ದು, ಬೆಳಗ್ಗೆ 10.30ರಿಂದ ಪ್ರಾರಂಭವಾಗಲಿದೆ.

ಕಳೆದ ಜೂನ್​ನಲ್ಲಿ ಭಾರತ ಮತ್ತು ಚೀನಾ ಸಂಘರ್ಷ ಆದಾಗಿನಿಂದ ಇದುವೆಗೆ ಎರಡೂ ದೇಶಗಳ ನಡುವೆ ಸುಮಾರು 12 ಸುತ್ತಿನ ಮಾತುಕತೆಗಳು ನಡೆದಿವೆ. ಆದರೆ ಸೇನಾ ಸಂಘರ್ಷ ನಿಲ್ಲುತ್ತಿಲ್ಲ. ಚೀನಿಯರ ಉಪಟಳವೂ ನಿಂತಿಲ್ಲ. ಇಂದು 13ನೇ ಸುತ್ತಿನ ಕಮಾಂಡರ್​ ಹಂತದ ಮಾತುಕತೆ ಪೂರ್ವ ಲಡಾಖ್​​ನ ವಾಸ್ತವಿಕ ಗಡಿ ನಿಯಂತ್ರಣ ರೇಖೆ (LAC) ಯ ಚೀನಾ ಬದಿಯಲ್ಲಿರುವ ಮೋಲ್ಡೋ  ಪಾಯಿಂಟ್​​ನಲ್ಲಿ ನಡೆಯಲಿದೆ. ಈ ವೇಳೆ ಭಾರತ ಡೆಪ್‌ಸಾಂಗ್ ಬಲ್ಜ್ ಮತ್ತು ಡೆಮ್‌ಚಾಕ್‌ನಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಬೇಕು ಎಂದು ಒತ್ತಾಯಿಸುವ ಜತೆ, ಉಳಿದ ಗಡಿಗಳಲ್ಲಿ ನಡೆಯುತ್ತಿರುವ ಸಂಘರ್ಷಕ್ಕೂ ಶಾಶ್ವತ ಪರಿಹಾರ ಹುಡುಕುವ ಬಗ್ಗೆ ಒತ್ತಾಯಿಸಲಿದೆ.

ಜುಲೈ 31ರಂದು 12ನೇ ಸುತ್ತಿನ ಮಾತುಕತೆ ನಡೆದಿದೆ. ಇದಾದ ಬಳಿಕ ಗೋಗ್ರಾದಲ್ಲಿ ಎರಡೂ ಸೇನೆಗಳು ಬೇರ್ಪಟ್ಟಿದ್ದವು. ಆ ಪ್ರದೇಶದಲ್ಲಿ ಶಾಂತಿ ಸ್ಥಾಪನೆ ಮಾಡುವ ಸಂಬಂಧ 12 ನೇ ಸುತ್ತಿನ ಮಾತುಕತೆ ತುಂಬ ಮಹತ್ವದ್ದಾಗಿತ್ತು.

ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾ 2021: ಜಂಬೂಸವಾರಿಗೆ ದಿನಗಣನೆ, ಈ‌ ಬಾರಿ 6 ಸ್ತಬ್ಧಚಿತ್ರಗಳಿಗೆ ಅವಕಾಶ

ಸೌರವ್​ ಗಂಗೂಲಿ ಪಾತ್ರಕ್ಕಾಗಿ ವಿಕ್ಕಿ, ಸಿದ್ಧಾರ್ಥ್​​ ಜತೆ ಮಾತುಕತೆ; ಬಯೋಪಿಕ್​ನಲ್ಲಿ ಯಾರಾಗ್ತಾರೆ ದಾದಾ?​

Published On - 9:13 am, Sun, 10 October 21