ಹೈದರಾಬಾದಿನ ಫಾರ್ಮಾಸ್ಯುಟಿಕಲ್ ಸಂಸ್ಥೆಯಲ್ಲಿ ಔಷಧಿ ಉತ್ಪಾದನೆಗಿಂತ ಅವ್ಯವಹಾರಗಳೇ ಜಾಸ್ತಿ ನಡೆದಿವೆ!

ದಾಳಿಯ ಸಮಯದಲ್ಲಿ ಕೆಲವು ರಹಸ್ಯ ಸ್ಥಳಗಳು ಅಧಿಕಾರಿಗಳ ಗಮನಕ್ಕೆ ಬಂದಿದ್ದು ಅಲ್ಲಿ ಅಕೌಂಟ್ ಪುಸ್ತಕಗಳು ಮತ್ತು ನಗದು ಪತ್ತೆಯಾಗಿದೆ. ಇದುವರೆಗೆ ಪತ್ತೆಯಾಗಿರುವ ದಾಖಲೆರಹಿತ ಹಣ ರೂ. 500 ಕೋಟಿಗಳಿಗಿಂತ ಜಾಸ್ತಿಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೈದರಾಬಾದಿನ ಫಾರ್ಮಾಸ್ಯುಟಿಕಲ್ ಸಂಸ್ಥೆಯಲ್ಲಿ ಔಷಧಿ ಉತ್ಪಾದನೆಗಿಂತ ಅವ್ಯವಹಾರಗಳೇ ಜಾಸ್ತಿ ನಡೆದಿವೆ!
ಸಾಂದರ್ಭಿಕ ಚಿತ್ರ

ತಡವಾಗಿ ಲಭ್ಯವಾಗಿರುವ ಮಾಹಿತಿಯೊಂದ ಪ್ರಕಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅಕ್ಟೋಬರ್ 6ರಂದು ಹೈದರಾಬಾದಿನಲ್ಲಿರುವ ಒಂದು ದೊಡ್ಡ ಫಾರ್ಮಾಸ್ಯುಟಿಕಲ್ಸ್ ಗ್ರೂಪ್ ಮೇಲೆ ದಾಳಿ ನಡೆಸಿದ ಬಳಿಕ ಶೋಧನೆಯ ಸಮಯದಲ್ಲಿ ಸಿಕ್ಕ ಕಾಗದ ಪತ್ರಗಳನ್ನು ಜಪ್ತಿ ಮಾಡಿದ್ದಾರೆ. ಈ ಫಾರ್ಮಾಸ್ಯುಟಿಕಲ್ಸ್ ಸಂಸ್ಥೆಯು ಇಂಟರ್ಮೀಡಿಯಟ್ಸ್, ಸಕ್ರಿಯ ಔಷಧ ಪದಾರ್ಥಗಳು (ಎಪಿಐ) ಮತ್ತು ಇತರ ಔಷಧಿಗಳನ್ನು ತಯಾರಿಸುತ್ತದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ್ ಸಂಸ್ಥೆಯ ಹೆಚ್ಚಿನ ಉತ್ಪನ್ನಗಳು ಅಮೆರಿಕ, ಯುರೋಪ್, ದುಬೈ ಮತ್ತು ಆಫ್ರಿಕನ್ ದೇಶಗಳಿಗೆ ರಫ್ತಾಗುತ್ತವೆ. ತೆರಿಗೆ ಅಧಿಕಾರಿಗಳು 6 ರಾಜ್ಯಗಳ ಸುಮಾರು 50 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

ದಾಳಿಯ ಸಮಯದಲ್ಲಿ ಕೆಲವು ರಹಸ್ಯ ಸ್ಥಳಗಳು ಅಧಿಕಾರಿಗಳ ಗಮನಕ್ಕೆ ಬಂದಿದ್ದು ಅಲ್ಲಿ ಅಕೌಂಟ್ ಪುಸ್ತಕಗಳು ಮತ್ತು ನಗದು ಪತ್ತೆಯಾಗಿದೆ. ಡಿಜಿಟಲ್ ಮಾಧ್ಯಮ, ಪೆನ್ ಡ್ರೈವ್, ಡಾಕ್ಯುಮೆಂಟ್​ಗಳು ಮೊದಲಾದವುಗಳ ರೂಪದಲ್ಲಿ ದೋಷಾರರೋಪಾಣಾತ್ಮಕ ಸಾಕ್ಷ್ಯಗಳು ಪತ್ತೆಯಾಗಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪರಿವೀಕ್ಷಣೆ ತಂಡದಿಂದ ನಿರ್ವಹಿಸಲ್ಪಡುವ ಎಸ್ ಎ ಪಿ ಮತ್ತು @ಇಆರ್​ಪಿ ಸಾಫ್ಟ್ವೇರ್ ಗಳಿಂದ ದೋಷಯೋಗ್ಯ ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ.

ಪರಿಶೋಧನೆಯ ಸಮಯದಲ್ಲಿ ನಕಲಿ ಮತ್ತು ಅಸ್ತಿತ್ವದಲ್ಲಿರದ ಸಂಸ್ಥೆಗಳಿಂದ ಮಾಡಿದ ಖರೀದಿಗಳಲ್ಲಿ ಸಂಶಯಾಸ್ಪದ ಸಂಗತಿಗಳು ಮತ್ತು ಕೆಲವು ಖಾತೆಗಳ ಹೆಸರಲ್ಲಿ ಕೃತಕ ಹಣದುಬ್ಬರಕ್ಕೆ ಸಂಬಂಧಿಸಿದ ವೆಚ್ಚಗಳು ಪತ್ತೆಯಾಗಿವೆ.

ಇದಲ್ಲದೆ, ಭೂಮಿಯನ್ನು ಖರೀದಿಸಲು ಹಣದ ಪಾವತಿಸಿರುವ ದಾಖಲೆಗಳು ಸಹ ಕಂಡುಬಂದಿವೆ. ಕಂಪನಿಯ ಹಣದಲ್ಲಿ ವೈಯಕ್ತಿಕ ವೆಚ್ಚ ಮತ್ತು ಸರ್ಕಾರದಿಂದ ನಿಗದಿತ ನೋಂದಣಿ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಜಮೀನು ಖರೀದಿಸಿರುವ ಅವ್ಯವಹಾರಗಳು ಪತ್ತೆಯಾಗಿವೆ. ಸಂಸ್ಥೆಯು ಹಲವಾರು ಕಾನೂನು ಹೋರಾಟಗಳಲ್ಲಿ ಭಾಗಿಯಾಗಿರುವುದು ಸಹ ಶೋಧನೆಯ ಸಮಯದಲ್ಲಿ ಬೆಳಕಿಗೆ ಬಂದಿದೆ.

ನಮಗೆ ಲಭ್ಯವಾಗಿರುವ ಮಾಹಿತಿಯ ದಾಳಿಯ ಸಮಯದಲ್ಲಿ ಹಲವಾರು ಬ್ಯಾಂಕ್ ಲಾಕರ್​ಗಳು ಸಹ ಪತ್ತೆಯಾಗಿದ್ದು ಅವುಗಳಲ್ಲಿ 16 ಲಾಕರ್​ಗಳು ಚಾಲ್ತಿ ಸ್ಥಿತಿಯಲ್ಲಿದ್ದವು. ದಾಖಲೆ ಇಲ್ಲದ ರೂ. 142.87 ಕೋಟಿ ನಗದು ಹಣವನ್ನು ದಾಳಿಯ ಸಮಯದಲ್ಲಿ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದುವರೆಗೆ ಪತ್ತೆಯಾಗಿರುವ ದಾಖಲೆರಹಿತ ಹಣ ರೂ. 500 ಕೋಟಿಗಳಿಗಿಂತ ಜಾಸ್ತಿಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇತರ ಅವ್ಯವಹಾರಗಳ ಪರಿಶೀಲನೆ ಮತ್ತು ಸಂಸ್ಥೆಯ ಅಘೋಷಿತ ಅದಾಯವನ್ನು ಪತ್ತೆ ಮಾಡುವ ಕೆಲಸ ಕಾರ್ಯ ಇನ್ನೂ ಜಾರಿಯಲ್ಲದೆ.

ಇದನ್ನೂ ಓದಿ:  ಬಿಟ್ಟೂ ಬಿಡದೆ ರೇಡ್ ನಡೆಸ್ತಿರೊ ಐಟಿ ಅಧಿಕಾರಿಗಳು: ಬಿಎಸ್​​ವೈ ಆಪ್ತನ ಆಪ್ತ ಈಗ ದಾಳಿಗೆ ಗುರಿ! ಹೆಚ್ ​ಡಿ ಕುಮಾರಸ್ವಾಮಿಗೂ ಆಪ್ತ

Read Full Article

Click on your DTH Provider to Add TV9 Kannada