ಸೌರವ್​ ಗಂಗೂಲಿ ಪಾತ್ರಕ್ಕಾಗಿ ವಿಕ್ಕಿ, ಸಿದ್ದಾರ್ಥ್​​ ಜತೆ ಮಾತುಕತೆ; ಬಯೋಪಿಕ್​ನಲ್ಲಿ ಯಾರಾಗ್ತಾರೆ ದಾದಾ?​

ಸೌರವ್​ ಗಂಗೂಲಿ ಬಯೋಪಿಕ್​ನಲ್ಲಿ ರಣಬೀರ್​ ಕಪೂರ್​ ನಟಿಸುತ್ತಾರೆ ಎಂಬ ಮಾಹಿತಿ ಈ ಹಿಂದೆ ಹರಿದಾಡಿತ್ತು. ಆದರೆ ಈಗ ವಿಕ್ಕಿ ಕೌಶಲ್​ ಮತ್ತು ಸಿದ್ದಾರ್ಥ್ ಮಲ್ಹೋತ್ರಾ ಹೆಸರುಗಳು ಕೇಳಿಬರುತ್ತಿವೆ. ನಿರ್ಮಾಣದ ಹೊಣೆಯನ್ನು ಲವ್​ ರಂಜನ್​ ಹೊತ್ತುಕೊಂಡಿದ್ದಾರೆ.

ಸೌರವ್​ ಗಂಗೂಲಿ ಪಾತ್ರಕ್ಕಾಗಿ ವಿಕ್ಕಿ, ಸಿದ್ದಾರ್ಥ್​​ ಜತೆ ಮಾತುಕತೆ; ಬಯೋಪಿಕ್​ನಲ್ಲಿ ಯಾರಾಗ್ತಾರೆ ದಾದಾ?​
ವಿಕ್ಕಿ ಕೌಶಲ್​, ಸೌರವ್​ ಗಂಗೂಲಿ, ಸಿದ್ಧಾರ್ಥ್​ ಮಲ್ಹೋತ್ರಾ

ಮಾಜಿ ಕ್ರಿಕೆಟಿಗ ಸೌರವ್​ ಗಂಗೂಲಿ ಅವರ ಜೀವನವನ್ನು ಆಧರಿಸಿ ಸಿನಿಮಾ ನಿರ್ಮಾಣ ಆಗುವ ಬಗ್ಗೆ ಕಳೆದೊಂದು ವರ್ಷದಿಂದಲೂ ಭಾರಿ ಚರ್ಚೆ ಆಗುತ್ತಿದೆ. ಈಗಾಗಲೇ ಈ ಚಿತ್ರಕ್ಕೆ ನಟರ ಆಯ್ಕೆ ಪ್ರಕ್ರಿಯೆ ಕೂಡ ಶುರುವಾಗಿದೆ ಎಂಬ ಮಾತು ಬಾಲಿವುಡ್​ ಅಂಗಳದಿಂದ ಹೇಳಿಬರುತ್ತಿದೆ. ನಿರ್ಮಾಪಕ-ನಿರ್ದೇಶಕ ಲವ್​ ರಂಜನ್​ ಅವರು ಬಯೋಪಿಕ್​ನ ಹಕ್ಕುಗಳನ್ನು ಖರೀಸಿದಿದ್ದಾರೆ. ಸೌರವ್​ ಗಂಗೂಲಿ ಪಾತ್ರದಲ್ಲಿ ಬಾಲಿವುಡ್​ ನಟರಾದ ಸಿದ್ದಾರ್ಥ್​ ಮಲ್ಹೋತ್ರಾ ಅಥವಾ ವಿಕ್ಕಿ ಕೌಶಲ್​ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅದಕ್ಕೂ ಮೊದಲು ರಣಬೀರ್​ ಕಪೂರ್ ಹೆಸರು ಕೇಳಿಬಂದಿತ್ತು.

ಈ ಮೊದಲು ಕೇಳಿಬಂದ ಮಾಹಿತಿ ಪ್ರಕಾರ ನಿರ್ಮಾಪಕ ಕರಣ್​ ಜೋಹರ್​ ಅವರು ಸೌರವ್​ ಗಂಗೂಲಿ ಬಯೋಪಿಕ್​ಗೆ ಬಂಡವಾಳ ಹೂಡಬೇಕಿತ್ತು. ಒಂದು ವೇಳೆ ಅವರು ನಿರ್ಮಾಣ ಮಾಡಿದ್ದರೆ ರಣಬೀರ್​ ಕಪೂರ್​ಗೆ ನಾಯಕನಾಗಿ ನಟಿಸುವ ಅವಕಾಶ ನೀಡುತ್ತಿದ್ದರು. ಆದರೆ ಈಗ ನಿರ್ಮಾಣದ ಹೊಣೆಯನ್ನು ಲವ್​ ರಂಜನ್​ ಹೊತ್ತುಕೊಂಡಿರುವುದರಿಂದ ಅವರು ಸಿದ್ದಾರ್ಥ್​ ಮಲ್ಹೋತ್ರಾ ಮತ್ತು ವಿಕ್ಕಿ ಕೌಶಲ್​ ಕಡೆಗೆ ಆಸಕ್ತಿ ತೋರಿಸಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ ವಿಕ್ಕಿ ಕೌಶಲ್​ ಮತ್ತು ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಒಂದು ಸುತ್ತಿನ ಮಾತುಕತೆ ಮಾಡಲಾಗಿದೆ. ಸಿನಿಮಾ ಹೇಗೆ ಮೂಡಿಬರಲಿದೆ ಎಂಬುದನ್ನು ಕೂಡ ವಿವರಿಸಲಾಗಿದೆ. ಆದರೆ ಆ ನಟರಿಂದ ಯಾವ ರೀತಿ ಪ್ರತಿಕ್ರಿಯೆ ಬರಲಿದೆ ಎಂಬುದರ ಆಧಾರದ ಮೇಲೆ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂಬ ಗುಸುಗುಸು ಬಾಲಿವುಡ್​ ಅಂಗಳದಲ್ಲಿ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಯಾರೂ ಅಧಿಕೃತ ಹೇಳಿಕೆ ನೀಡಿಲ್ಲ.

ತಮ್ಮ ಬಯೋಪಿಕ್​ ಆಗುತ್ತಿರುವುದಕ್ಕೆ ಗಂಗೂಲಿ ಅವರಿಗೆ ಖುಷಿ ಇದೆ. ‘ಕ್ರಿಕೆಟ್ ನನ್ನ ಜೀವನ. ಈ ಕ್ರೀಡೆಯು ನನಗೆ ಆತ್ಮವಿಶ್ವಾಸ ನೀಡಿದೆ. ಎಲ್ಲರ ಮುಂದೆ ತಲೆಯೆತ್ತಿ ನಡೆಯುವಂತೆ ಮಾಡಿದೆ. ಇದೀಗ ಅದೇ ಕಥೆಯನ್ನು ಲವ್ ಫಿಲಂಸ್ ಚಿತ್ರವಾಗಿಸುತ್ತಿದೆ. ನನ್ನ ಜೀವನವನ್ನು ದೊಡ್ಡ ಪರದೆಯಲ್ಲಿ ತೋರಿಸುತ್ತಿರುವ ಬಗ್ಗೆ ನಾನು ಕೂಡ ಥ್ರಿಲ್ ಆಗಿದ್ದೇನೆ’ ಎಂದು ಅವರು ಈ ಹಿಂದೆ ಟ್ವೀಟ್​ ಮಾಡಿದ್ದರು.

ಇದನ್ನೂ ಓದಿ:

‘ಕತ್ರಿನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಸ್ವೀಟ್​ ಕೊಡಪ್ಪ’; ಮಗನ ಕಾಲೆಳೆದ ವಿಕ್ಕಿ ತಂದೆ-ತಾಯಿ

Kiara Advani: ‘ಕಿಯಾರಾ ಜೊತೆ ಬಲವಂತವಾಗಿ ಕಿಸ್​ ಮಾಡಬೇಕಾಯ್ತು’: ಎಲ್ಲವನ್ನೂ ಒಪ್ಪಿಕೊಂಡ ಶೇರ್​ಷಾ ಹೀರೋ ಸಿದ್ದಾರ್ಥ್​

Read Full Article

Click on your DTH Provider to Add TV9 Kannada