Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ಚೀನಾ ಮಧ್ಯೆ ಶೀಘ್ರ ಮತ್ತೊಂದು ಯುದ್ಧ ಸಾಧ್ಯತೆ: ಆತಂಕಕಾರಿ ವರದಿ ಬಹಿರಂಗ

ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ, 1962 ರ ಭಾರತ-ಚೀನಾ ಯುದ್ಧದ ಅನುಭವಿ ಜನರಲ್ ವಿಪಿ ಮಲಿಕ್ ಕೂಡ ಯುದ್ಧ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದಿದ್ದಾರೆ. ‘ನ್ಯೂಸ್ 9 ಪ್ಲಸ್’ ಶೋದಲ್ಲಿ ಭಾಗವಹಿಸಿದ ಅವರು, ಬ್ರಿಟನ್​ ಸಂಸ್ಥೆಯ ವರದಿಯ ಬಗ್ಗೆ ಏನು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ? ಯುದ್ಧ ಸಾಧ್ಯತೆಯ ಬಗ್ಗೆ ಅವರು ಹೇಳಿದ್ದೇನು ಎಂಬ ವಿವರ ಇಲ್ಲಿದೆ.

ಭಾರತ ಚೀನಾ ಮಧ್ಯೆ ಶೀಘ್ರ ಮತ್ತೊಂದು ಯುದ್ಧ ಸಾಧ್ಯತೆ: ಆತಂಕಕಾರಿ ವರದಿ ಬಹಿರಂಗ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Mar 09, 2024 | 4:28 PM

ನವದೆಹಲಿ, ಮಾರ್ಚ್​ 9: ಭಾರತ ಮತ್ತು ಚೀನಾ ಮಧ್ಯೆ 2025ರಿಂದ 2030 ರ ನಡುವಣ ಅವಧಿಯಲ್ಲಿ ಯಾವಾಗ ಬೇಕಾದರೂ ಮತ್ತೊಂದು ಯುದ್ಧ (Indo China War) ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಬ್ರಿಟನ್​ ಸಂಸ್ಥೆಯೊಂದರ (RUSI) ವರದಿ ಸುಳಿವು ನೀಡಿದೆ. ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ, ಜನರಲ್ ವಿಪಿ ಮಲಿಕ್ (Gen VP Malik) ಕೂಡ ಮತ್ತೊಂದು ಯುದ್ಧದ ಸಾಧ್ಯತೆಯನ್ನು ಒಪ್ಪಿಕೊಂಡಿದ್ದಾರೆ. ಇಷ್ಟೇ ಅಲ್ಲದೆ, ಸೇನೆಯು ಸದಾ ಕಟ್ಟೆಚ್ಚರದಿಂದ ಇರಬೇಕು ಎಂದಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಭಾರತ ಮತ್ತು ಚೀನಾ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಸೇನಾ ಮುಖಾಮುಖಿ ಎದುರಿಸುತ್ತಿವೆ. ಇದೇ ಸಂದರ್ಭದಲ್ಲೇ, 2030 ರ ವೇಳೆಗೆ ಭಾರತ ಮತ್ತು ಚೀನಾ ನಡುವೆ ಯುದ್ಧ ಸಂಭವಿಸಬಹುದು ಎಂದು ಬ್ರಿಟನ್ ಮೂಲದ ರಾಯಲ್ ಯುನೈಟೆಡ್ ಸರ್ವಿಸಸ್ ಇನ್‌ಸ್ಟಿಟ್ಯೂಟ್ (ಆರ್​ಯುಎಸ್​ಐ) ಎಚ್ಚರಿಸಿದೆ. ಎರಡನೇ ಚೀನಾ-ಭಾರತ ಯುದ್ಧವು 2025 ಮತ್ತು 2030 ರ ನಡುವೆ ಪೂರ್ವ ಲಡಾಖ್‌ನಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ವರದಿ ಉಲ್ಲೇಖಿಸಿದೆ.

ಈ ವಿಚಾರವಾಗಿ ‘ನ್ಯೂಸ್ 9 ಪ್ಲಸ್’ ಶೋದಲ್ಲಿ ಜನರಲ್ ವಿಪಿ ಮಲಿಕ್ ಉಲ್ಲೇಖಿಸಿದ್ದು, ಮತ್ತೊಂದು ಯುದ್ಧ ಸಾಧ್ಯತೆಯನ್ನು ಒಪ್ಪಿಕೊಂಡಿದ್ದಾರೆ. ಇವರು 1962 ರ ಭಾರತ-ಚೀನಾ ಯುದ್ಧದ ಅನುಭವಿ ಜನರಲ್ ಎಂಬುದು ಗಮನಾರ್ಹ.

ಯುದ್ಧವು ಯಾವಾಗ ಬೇಕಾದರೂ ಸಂಭವಿಸಬಹುದು. 1996 ರಲ್ಲಿ ಎಲ್​ಎಸಿ ಪ್ರದೇಶದಲ್ಲಿ ಶಾಂತಿಗಾಗಿ ನಾವು ಚೀನಾದೊಂದಿಗೆ ಸಹಿ ಮಾಡಿದ ಒಪ್ಪಂದವನ್ನು ಈಗಾಗಲೇ ಮುರಿದು ಹಾಕಲಾಗಿದೆ. ಚೀನಾ 2020 ರಲ್ಲಿ ಪೂರ್ವ ಲಡಾಖ್ ಸೆಕ್ಟರ್ ಮೇಲೆ ದಾಳಿ ಮಾಡಿದೆ. ಈಶಾನ್ಯದಲ್ಲಿ ಹಲವಾರು ಘರ್ಷಣೆಗಳು ನಡೆದಿವೆ. ಯುದ್ಧವು ಯಾವಾಗ ಬೇಕಾದರೂ ಸಂಭವಿಸಬಹುದು. ಹೀಗಾಗಿ ನಾವು ಜಾಗರೂಕರಾಗಿರಬೇಕು ಎಂದು ಮಲಿಕ್ ಹೇಳಿದ್ದಾರೆ.

ಚೀನಾದಿಂದ ಯುದ್ಧ ಬೆದರಿಕೆ ಇರುವ ಕಾರಣವೇ ಭಾರತ ಸರ್ಕಾರವು ಹಿಮಾಲಯದ ಗಡಿಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಗಮನಹರಿಸಿದೆ. ಗಡಿಯುದ್ದಕ್ಕೂ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದೆ. ನಮ್ಮ ಕಾರ್ಯಾಚರಣೆಯ ಯೋಜನೆಯನ್ನು ಬದಲಾಯಿಸಿದೆ. ಮತ್ತು ಇದಕ್ಕೆ ಮೂಲಸೌಕರ್ಯವು ಸಂಪೂರ್ಣವಾಗಿ ಅವಶ್ಯಕವಾಗಿದೆ ಎಂದು ಜನರಲ್ ಮಲಿಕ್ ಹೇಳಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಭಾರತವು ಗಡಿಯಲ್ಲಿ ಮೂಲಸೌಕರ್ಯ ಹೆಚ್ಚಿಸಲು ಮತ್ತು ಗಡಿ ರಸ್ತೆಗಳ ನಿರ್ಮಾಣಕ್ಕೆ ಅನುದಾನವನ್ನು 10 ಪಟ್ಟು ಹೆಚ್ಚಿಸಿದೆ. ರಸ್ತೆಗಳು, ಸೇತುವೆಗಳು, ಸುರಂಗಗಳು ಸೇರಿದಂತೆ ಇತರ ಮೂಲಸೌಕರ್ಯಗಳನ್ನು ಯುದ್ಧದ ಸಾಧ್ಯತೆಯ ಆಧಾರದ ಮೇಲೆಯೇ ತ್ವರಿತಗತಿಯಲ್ಲಿ ನಿರ್ಮಿಸಲಾಗುತ್ತಿದೆ. ಗಡಿಯುದ್ದಕ್ಕೂ ಭಾರತದ ಆಯಕಟ್ಟಿನ ಪ್ರಮುಖ ಸ್ಥಳಗಳಿಗೆ ಪಡೆಗಳ ವೇಗದ ಚಲನೆಯನ್ನು ಖಚಿತಪಡಿಸುವುದು ಈ ಯೋಜನೆಗಳ ಗುರಿಯಾಗಿದೆ.

ಇದನ್ನೂ ಓದಿ: ವಿಶ್ವದ ಅತಿ ಉದ್ದದ ಸೆಲಾ ಪಾಸ್ ಸುರಂಗ ಮಾರ್ಗ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ; ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ

ಚೀನಾ ಗಡಿ ಪ್ರದೇಶದಲ್ಲಿ ಮಹತ್ವದ್ದೆನ್ನಲಾದ ಅರುಣಾಚಲ ಪ್ರದೇಶದ ಸೆಲಾ ಪಾಸ್ (Sela Pass) ದ್ವಿಪಥ ಸುರಂಗ ಮಾರ್ಗವನ್ನು ಪ್ರಧಾನಿ ಮೋದಿ ಇಂದು (ಮಾರ್ಚ್ 9) ಲೋಕಾರ್ಪಣೆಗೊಳಿಸಿದ್ದಾರೆ. ಈ ಸುರಂಗ ಮಾರ್ಗ ಅರುಣಾಚಲ ಪ್ರದೇಶದ ತವಾಂಗ್ ಅನ್ನು ಅಸ್ಸಾಂನೊಂದಿಗೆ ಸಂಪರ್ಕಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ಇದನ್ನು ಸುಮಾರು 825 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು 13,000 ಅಡಿಗಳಷ್ಟು ವಿಶ್ವದ ಅತಿ ಉದ್ದದ ದ್ವಿ-ಪಥದ ಸುರಂಗವಾಗಿದೆ. ಸೆಲಾ ಸುರಂಗವು ಹಿಮಪಾತದಂಥ ಪ್ರತಿಕೂಲ ಹವಾಮಾನದ ಸಂದರ್ಭಗಳಲ್ಲಿ ಶೀಘ್ರ ಗಡಿ ಪ್ರದೇಶವನ್ನು ತಲುಪಲು ಸೇನೆಗೆ ಅನುವು ಮಾಡಿಕೊಡಲಿದೆ. ಗಡಿ ಪ್ರದೇಶಗಳಿಗೆ ಸೇನೆಯ ಸಂಪರ್ಕ ಸುಗಮಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉದ್ದೇಶಿಸಿರುವ ಹಲವು ನಿರ್ಣಾಯಕ ಯೋಜನೆಗಳಲ್ಲಿ ಒಂದಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್