ನಿಮ್ಮ ಪಕ್ಷದ ಮುಖ್ಯಸ್ಥರನ್ನಾಗಿ ಮುಸ್ಲಿಂ ನಾಯಕರನ್ನು ನೇಮಿಸಿ; ವಕ್ಫ್ ಕಾಯ್ದೆ ಬಗ್ಗೆ ಕಾಂಗ್ರೆಸ್‌ಗೆ ಪ್ರಧಾನಿ ಮೋದಿ ಸವಾಲು
ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ನಿಂದ ಮುಸ್ಲಿಮರಿಗೆ ಶೇ. 50ರಷ್ಟು ಚುನಾವಣಾ ಟಿಕೆಟ್‌ಗಳನ್ನು ನೀಡುವಂತೆ ಚಾಲೆಂಜ್ ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಂದು ಕಾಂಗ್ರೆಸ್ ಅನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ಓಲೈಕೆ ರಾಜಕೀಯ ಎಂದು ಆರೋಪಿಸಿದ್ದಾರೆ. ಹಾಗೇ, ಕಾಂಗ್ರೆಸ್ ಪಕ್ಷವು ಮುಸ್ಲಿಂ ನಾಯಕನನ್ನು ಅಧ್ಯಕ್ಷರನ್ನಾಗಿ ನೇಮಿಸುವಂತೆ ಸವಾಲು ಹಾಕಿತು. ತಿದ್ದುಪಡಿ ಮಾಡಿದ ವಕ್ಫ್ ಕಾಯ್ದೆಯನ್ನು ವಿರೋಧಿಸಿದ್ದಕ್ಕಾಗಿ ಮೋದಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ. ಕಾಂಗ್ರೆಸ್ ಯಾವಾಗಲೂ ಮುಸ್ಲಿಂ ಮೂಲಭೂತವಾದಿಗಳನ್ನು ಓಲೈಸಿದೆ ಮತ್ತು ಹೊಸ ಕಾನೂನಿನ ವಿರುದ್ಧದ ಅವರ ಪ್ರತಿಭಟನೆಯು ಅದನ್ನೇ ಸಾಬೀತುಪಡಿಸುತ್ತದೆ ಎಂದು ಹೇಳಿದ್ದಾರೆ.

ನವದೆಹಲಿ, ಏಪ್ರಿಲ್ 14: 2013ರಲ್ಲಿ ವಕ್ಫ್ ಕಾನೂನನ್ನು (Waqf Act) ತಿದ್ದುಪಡಿ ಮಾಡಿದ್ದಕ್ಕಾಗಿ ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಕಾಂಗ್ರೆಸ್ ಅನ್ನು ಟೀಕಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಈ ಕ್ರಮದ ಹಿಂದಿನ ಉದ್ದೇಶ ತುಷ್ಟೀಕರಣ ರಾಜಕೀಯದ ಮೂಲಕ ಚುನಾವಣೆಗಳನ್ನು ಗೆಲ್ಲುವುದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹರಿಯಾಣದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕಾಂಗ್ರೆಸ್ ಪಕ್ಷವು ದೇಶದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ನಿಜವಾಗಲೂ ಸಹಾನುಭೂತಿ ಹೊಂದಿದ್ದರೆ ತಮ್ಮ ಪಕ್ಷಕ್ಕೆ ಮುಸ್ಲಿಂ ಮುಖ್ಯಸ್ಥರನ್ನು ನೇಮಿಸುವಂತೆ ಸವಾಲು ಹಾಕಿದ್ದಾರೆ.
“ನಿಮಗೆ ಮುಸ್ಲಿಮರ ಬಗ್ಗೆ ಅಷ್ಟೊಂದು ಸಹಾನುಭೂತಿಯಿದ್ದರೆ, ಮುಸ್ಲಿಮರನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿ ಏಕೆ ಮಾಡಬಾರದು? ಚುನಾವಣೆಯಲ್ಲಿ ಮುಸ್ಲಿಮರಿಗೆ ಶೇ. 50ರಷ್ಟು ಸ್ಥಾನಗಳನ್ನು ನೀಡಿ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ಸಲ್ಲಿಸಿದ ನಂತರ ಹರಿಯಾಣದ ಹಿಸಾರ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದಾರೆ.
जलियांवाला बाग नरसंहार के लिए अंग्रेजी साम्राज्य से लोहा लेने वाले केरल के शंकरन नायर जी के बारे में आज इसलिए देशवासियों को जरूर जानना चाहिए…. pic.twitter.com/VpBMb9ZjK3
— Narendra Modi (@narendramodi) April 14, 2025
ಇದನ್ನೂ ಓದಿ: ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಈ ಹಿಂದೆ ವಕ್ಫ್ ಕಾನೂನು ರೂಪಿಸಿತ್ತು: ಮೋದಿ
ಸ್ವಾತಂತ್ರ್ಯದಿಂದ 2013ರವರೆಗೆ ವಕ್ಫ್ ಕಾನೂನು ಇತ್ತು. ಆದರೆ ಚುನಾವಣೆಗಳನ್ನು ಗೆಲ್ಲಲು, ಓಲೈಕೆ ಮತ್ತು ಮತಬ್ಯಾಂಕ್ ರಾಜಕೀಯವನ್ನು ಅನುಸರಿಸಲು ಕಾಂಗ್ರೆಸ್ 2013ರ ಕೊನೆಯಲ್ಲಿ ವಕ್ಫ್ ಕಾನೂನಿನಲ್ಲಿ ಆತುರದಿಂದ ತಿದ್ದುಪಡಿಗಳನ್ನು ಮಾಡಿತು. ಇದರಿಂದಾಗಿ ಅದು ಚುನಾವಣೆಯಲ್ಲಿ ಮತಗಳನ್ನು ಪಡೆಯಬಹುದು ಎಂದು ಮೋದಿ ಹೇಳಿದ್ದಾರೆ.
सरकार चलाने को लेकर कांग्रेस के झूठे मॉडल में सिर्फ कुर्सी की सोच है, वहीं बीजेपी का मॉडल बाबासाहेब के दिए संविधान की मर्यादाओं को सिर-आंखों पर रखकर चल रहा है। pic.twitter.com/tLbewGUxdy
— Narendra Modi (@narendramodi) April 14, 2025
ಇದನ್ನೂ ಓದಿ: ಬಂಗಾಳದಲ್ಲಿ ಹಿಂಸಾಚಾರಕ್ಕೆ ತಿರುಗಿದ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಕಾಂಗ್ರೆಸ್‌ನ ನಿಜವಾದ ಸತ್ಯವೆಂದರೆ ಅದು ಮುಸ್ಲಿಮರು ಸೇರಿದಂತೆ ಯಾವುದೇ ಸಮುದಾಯದ ಕಲ್ಯಾಣಕ್ಕಾಗಿ ಕೆಲಸ ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂದು ಮೋದಿ ಹೇಳಿದರು.
भाजपा की सरकार किसान भाई-बहनों के सुख-दुख की सबसे बड़ी साथी है। हरियाणा के साथ ही देशभर में उनके जीवन को आसान बना रही हमारी योजनाएं इसके बड़े उदाहरण हैं। pic.twitter.com/D2RlkqUho2
— Narendra Modi (@narendramodi) April 14, 2025
ವಕ್ಫ್ ಮಂಡಳಿಯು ದೇಶದಲ್ಲಿ ಲಕ್ಷಾಂತರ ಹೆಕ್ಟೇರ್ ಭೂಮಿಯನ್ನು ಹೊಂದಿದ್ದು, ಅದನ್ನು ಬಡವರು, ನಿರ್ಗತಿಕ ಮಹಿಳೆಯರು ಮತ್ತು ಮಕ್ಕಳ ಪ್ರಯೋಜನಕ್ಕಾಗಿ ಬಳಸಬಹುದಿತ್ತು ಎಂದು ಪ್ರಧಾನಿ ಮೋದಿ ಹೇಳಿದರು. “ಅದನ್ನು ಪ್ರಾಮಾಣಿಕವಾಗಿ ಬಳಸಿದ್ದರೆ, ಮುಸ್ಲಿಂ ಯುವಕರು ಪಂಕ್ಚರ್ ಟೈರ್‌ಗಳನ್ನು ಸರಿಪಡಿಸುವ ಮೂಲಕ ತಮ್ಮ ಜೀವನವನ್ನು ಕಳೆಯಬೇಕಾಗಿರಲಿಲ್ಲ” ಎಂದು ಮೋದಿ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ