ಶ್ರೀನಗರ: ಭಾರತ ಸೇನೆಯ ಚೀತಾ ಹೆಲಿಕಾಪ್ಟರ್ (Indian Army Cheetah helicopter) ಇಂದು ಉತ್ತರ ಕಾಶ್ಮೀರದ ಗುರೆಜ್ ವಲಯದಲ್ಲಿರುವ ಗಡಿ ನಿಯಂತ್ರಣಾ ರೇಖೆ ಬಳಿ ಪತನಗೊಂಡಿದೆ. ಗಡಿ ಭದ್ರತಾ ಪಡೆ ಸಿಬ್ಬಂದಿ ಕೆಲವರು ಅಸ್ವಸ್ಥಗೊಂಡಿದ್ದರು. ಅವರನ್ನು ಕರೆದುಕೊಂಡು ಬರುವ ಸಲುವಾಗಿ ಈ ಹೆಲಿಕಾಪ್ಟರ್ ಹೊರಟಿತ್ತು. ಆದರೆ ಗುರೆಜ್ ವಲಯದ ಗುರ್ಜನ್ ನಲ್ಲಾ ಬಳಿ ಪತನಗೊಂಡಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಹೆಲಿಕಾಪ್ಟರ್ ಪತನಕ್ಕೆ ಕಾರಣ ತಿಳಿದಿಲ್ಲ. ಇದರಲ್ಲಿ ಪೈಲಟ್ ಮತ್ತು ಸಹ ಪೈಲಟ್ ಇದ್ದು, ಒಬ್ಬ ಪೈಲಟ್ ಮೃತಪಟ್ಟಿದ್ದು ವರದಿಯಾಗಿದೆ. ಇನ್ನೊಬ್ಬರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪತನಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಆ ಪ್ರದೇಶ ಸಂಪೂರ್ಣ ಹಿಮಾಚ್ಛಾದಿತವಾಗಿತ್ತು. ಹೀಗಾಗಿ ಪತನಕ್ಕೆ ಕೆಟ್ಟ ವಾತಾವರಣವೇ ಕಾರಣವಾಗಿರಬಹುದು ಎಂದೂ ಹೇಳಲಾಗಿದೆ. ಭಾರತ-ಪಾಕಿಸ್ತಾನ ಗಡಿಯ ಬಳಿಯೇ ಈ ಅವಘಡ ನಡೆದಿದ್ದು, ಸ್ಥಳಕ್ಕೆ ಹಿರಿಯ ಸೇನಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲೇ ಕಂಗನಾಗೆ ಗೊತ್ತಾಗಿತ್ತು ಮುಂದಿನ ಭವಿಷ್ಯ; ಅಚ್ಚರಿ ವಿಚಾರ ಬಿಚ್ಚಿಟ್ಟ ಪ್ರಭಾಸ್
Published On - 4:02 pm, Fri, 11 March 22