ಮಿಲಿಟರಿ ಸಮವಸ್ತ್ರ ಹಾಕಿ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಡಿ; ಸೈನಿಕರು, ಮಾಜಿ ಸೈನಿಕರಿಗೆ ಸೇನೆಯಿಂದ ಸೂಚನೆ
ರೈತರಿಗೆ ಬೆಂಬಲ ನೀಡಿ ಪ್ರತಿಭಟನೆ ನಡೆಸುತ್ತಿರುವವರಲ್ಲಿ ಮಾಜಿ ಸೈನಿಕರೂ ಇದ್ದಾರೆ. ಸೈನ್ಯದಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಸಿಖ್, ಪಂಜಾಬ್ ರೆಜಿಮೆಂಟ್ ಯೋಧರಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಜಾಗೃತಿ ಮೂಡಿಸುವ ಕೆಲಸ ಆರಂಭವಾಗಿದೆ.
ದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ಅದೆಷ್ಟೋ ಜನರು ಬೆಂಬಲ ಸೂಚಿಸಿದ್ದಾರೆ. ಅಲ್ಲದೆ, ಕೆಲವು ಹಿರಿಯ, ನಿವೃತ್ತ ಸೈನಿಕರೂ ಸಹ ಸಮವಸ್ತ್ರದಲ್ಲೇ ಪಾಲ್ಗೊಂಡಿದ್ದು ವರದಿಯಾಗಿದೆ. ಈ ಹಿಂದೆ ಅಂಥ ಕೆಲವು ಫೊಟೋಗಳೂ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಹೀಗೆ ಸೇನಾ ಯೂನಿಫಾರ್ಮ್ ಹಾಕಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವವರಿಗೆ ಭಾರತೀಯ ಸೇನೆ ಒಂದು ಎಚ್ಚರಿಕೆಯ ಪತ್ರ ಬರೆದಿದೆ.
ನೀವು ಮಾಜಿ ಯೋಧರೇ ಆಗಿದ್ದರೂ, ಯೋಧರಾಗಿದ್ದರೂ ಕೇವಲ ಸೇನೆಗೆ ಸಂಬಂಧಪಟ್ಟ ಕಾರ್ಯಕ್ರಮಗಳಲ್ಲಿ, ಕರ್ತವ್ಯದಲ್ಲಿ ಇದ್ದಾಗ ಮಾತ್ರ ಸೇನಾ ಸಮವಸ್ತ್ರ ಧರಿಸಬೇಕು. ಅದು ಬಿಟ್ಟು, ಸಾರ್ವಜನಿಕ ಸಮಾರಂಭಗಳಲ್ಲಿ, ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವಾಗ ಯೂನಿಫಾರ್ಮ್ ಅಥವಾ ನಿಮಗೆ ಬಂದ ಮೆಡಲ್ಗಳನ್ನು ಎದೆ ಭಾಗದಲ್ಲಿ ಇಟ್ಟುಕೊಳ್ಳುವುದು ಸರಿಯಲ್ಲ ಎಂದು ಕೇಂದ್ರೀಯ ಸೈನಿಕ ಮಂಡಳಿಗಳಿಗೆ ಸೇನೆ ಪತ್ರ ಬರೆದಿದೆ.
ರೈತರಿಗೆ ಬೆಂಬಲ ನೀಡಿ ಪ್ರತಿಭಟನೆ ನಡೆಸುತ್ತಿರುವವರಲ್ಲಿ ಮಾಜಿ ಸೈನಿಕರೂ ಇದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಸೇನೆಯ ಸಿಖ್ ಮತ್ತು ಪಂಜಾಬ್ ರೆಜಿಮೆಂಟ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧರಿಗೆ ತಿಳಿ ಹೇಳಲಾಗಿದೆ. ರಜೆಯ ಮೇಲೆ ಹೋದ ಕೆಲ ಸೇನಾ ಸಿಬ್ಬಂದಿ ಪ್ರತಿಭಟನಾ ಸ್ಥಳದಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ, ‘ಯೂನಿಫಾರ್ಮ್ ಧರಿಸಿ ಯಾರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತಿಲ್ಲ’ ಎಂದು ಸೇನೆ ಖಡಾಖಂಡಿತವಾಗಿ ಹೇಳಿದೆ.
ಪ್ರತಿಭಟನಾ ನಿರತ ರೈತರಿಗಾಗಿ ಇಸ್ತ್ರಿ ಸೇವೆ; ಬಟ್ಟೆ ಬೇಗ ಒಣಗಿಸಲು ನೆರವು
Published On - 6:07 pm, Wed, 20 January 21