ದೆಹಲಿ: ಉತ್ತರಾಖಂಡ್ನಲ್ಲಿ ಬರುವ ವರ್ಷ ವಿಧಾನಸಭೆ ಚುನಾವಣೆ (Uttarakhand) ನಡೆಯಲಿರುವ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷ (Aam Aadmi Party) ಅಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದೆ. ಆಪ್ನ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ಇಂದು ಉತ್ತರಾಖಂಡ್ನ ಹಾಲ್ದ್ವಾನಿಗೆ ಭೇಟಿ ನೀಡಿದ್ದು ಒಂದು ಬಹುದೊಡ್ಡ ಘೋಷಣೆ ಮಾಡಿದ್ದಾರೆ. ಉತ್ತರಾಖಂಡ್ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಆರೇ ತಿಂಗಳಲ್ಲಿ ಒಂದು ಲಕ್ಷ ಉದ್ಯೋಗ ನೀಡುತ್ತೇವೆ. ಇದರ ಹೊರತಾಗಿಯೂ ಮಾಸಿಕ 5000 ರೂ.ಭತ್ಯೆ ನೀಡಲಾಗುವುದು ಎಂದು ಹೇಳಿದ್ದಾರೆ. ಇನ್ನೊಂದು ಮಹತ್ವದ ಘೋಷಣೆಯೆಂದರೆ, ರಾಜ್ಯದಲ್ಲಿ ಶೇ.80 ರಷ್ಟು ಉದ್ಯೋಗವನ್ನು ಸ್ಥಳೀಯ ಜನರಿಗೇ ಮೀಸಲಾಗಿಡಲಾಗುತ್ತದೆ ಎಂದಿದ್ದಾರೆ.
ಇದಕ್ಕೂ ಮೊದಲೇ ಎರಡು ಬಾರಿ ಡೆಹ್ರಾಡೂನ್ಗೆ ಅರವಿಂದ್ ಕೇಜ್ರಿವಾಲ್ ಭೇಟಿ ನೀಡಿದ್ದರು. ಹಿಂದೊಮ್ಮೆ ಭೇಟಿ ನೀಡಿದಾಗ, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಉತ್ತರಾಖಂಡ್ ರಾಜ್ಯವನ್ನು ಭಾರತದ ಅಧ್ಯಾತ್ಮ ರಾಜಧಾನಿಯನ್ನಾಗಿ ಘೋಷಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಹಾಗೇ ಈ ಬಾರಿ ಭೇಟಿ ನೀಡಿದ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಯುವಕರಿಗೆ ಉದ್ಯೋಗ ನೀಡುವುದು ಮೊದಲ ಆದ್ಯತೆ ಆಗಿರುತ್ತದೆ ಎಂದು ಹೇಳಿದ ಅರವಿಂದ್ ಕೇಜ್ರಿವಾಲ್, ಅದಕ್ಕೆಂದೇ ಒಂದು ಪೋರ್ಟಲ್ ನಿರ್ಮಿಸಲಾಗುತ್ತದೆ ಎಂದೂ ತಿಳಿಸಿದ್ದಾರೆ.
ಉತ್ತರಾಖಂಡ್ನಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಇದರಿಂದಾಗಿ ಇಲ್ಲಿನ ಯುವಜನತೆ ವಲಸೆ ಹೋಗುವಂತಾಗಿದೆ. ಹಾಗಾಗಿ ಇಲ್ಲಿನ ಯುವಕರಿಗೆ ಇಲ್ಲೇ ಕೆಲಸ ಸಿಗುವಂತಾಗಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಖಂಡಿತ ಇದನ್ನು ಸಾಧ್ಯವಾಗಿಸುತ್ತೇವೆ ಎಂದು ಉತ್ತರಾಖಂಡ್ಗೆ ಭೇಟಿ ನೀಡುವುದಕ್ಕೂ ಮೊದಲು ಟ್ವೀಟ್ನಲ್ಲಿ ಹೇಳಿದ್ದರು. ಉತ್ತರಾಖಂಡ್ ರಾಜ್ಯದಲ್ಲಿ ನಡೆಯಲಿರುವ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಆಪ್ ಎಲ್ಲ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಹಾಗೇ, ನಿವೃತ್ತ ಕರ್ನಲ್ ಅಜಯ್ ಕೊಠಿಯಾಲ್ ಅವರು ಮುಖ್ಯಮಂತ್ರಿ ಅಭ್ಯರ್ಥಿ ಎಂದೂ ಘೋಷಿಸಲಾಗಿದೆ.
ಇದನ್ನೂ ಓದಿ: ಕಾರ್ಯಕ್ರಮ ಮುಗಿಯಿತು: ಕೊವಿಡ್ ಲಸಿಕೆ ವಿತರಣೆ ದಾಖಲೆ ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿ
IPL 2021: ಎಲ್ಲರೂ ಬಲಿಷ್ಠರೇ…ಆದರೆ 8 ತಂಡಗಳಲ್ಲೂ ಇದೆ ವೀಕ್ನೆಸ್ ಪಾಯಿಂಟ್
(Arvind Kejriwal announces 1 lakh govt jobs within 6 months in Uttarakhand)
Published On - 4:40 pm, Sun, 19 September 21