ದೆಹಲಿ, ಫೆ.16: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಇಂದು ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆಗೆ ನಿರ್ಣಯ ಮಂಡಿಸಿದ್ದಾರೆ. ನಾಳೆ ಸದನದ ಕಲಾಪ ನಡೆಯಲಿದ್ದು, ಪ್ರಸ್ತಾವನೆಯನ್ನು ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಸರ್ಕಾರದ ಮೇಲೆ ಒಂದಲ್ಲ ಒಂದು ರೀತಿ ಆರೋಪಗಳನ್ನು ಮಾಡುತ್ತಿದ್ದಾರೆ. ನಮ್ಮ ಸದಸ್ಯರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಇದರ ನಡುವೆ ನಮ್ಮ ಶಾಸಕರು ಹಾಗೂ ನಾಯಕರು ಎಎಪಿ ಪಕ್ಷವನ್ನು ಬಿಟ್ಟು ಬೇರೆ ಪಕ್ಷ ಹೋಗುತ್ತಿದ್ದಾರೆ ಎಂಬ ಸುಳ್ಳು ಸುದ್ದಿಗಳನ್ನು ಮಾಡಲಾಗುತ್ತದೆ. ದೆಹಲಿ ಸರ್ಕಾರದಲ್ಲಿ ಸಂಖ್ಯಾ ಬಲ ಇಲ್ಲ ಎಂದು ಹೇಳುತ್ತಿದ್ದಾರೆ. ನಮ್ಮ ಶಾಸಕರು ನಮ್ಮಲ್ಲಿಯೇ ಇದ್ದರೆ, ಅವರು ಎಲ್ಲಿಯು ಹೋಗಿಲ್ಲ. ಇದನ್ನು ನಾವು ಜನರ ಮುಂದೆ ಸಾಬೀತು ಮಾಡಬೇಕಿದೆ. ಈ ಕಾರಣಕ್ಕೆ ನಾನು ವಿಶ್ವಾಸ ನಿರ್ಣಯವನ್ನು ಮಂಡಿಸುತ್ತೇನೆ ಎಂದು ಹೇಳಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವುದಾಗಿ ಅರವಿಂದ್ ಕೇಜ್ರಿವಾಲ್ ಈ ಹಿಂದೆ ಹೇಳಿದ್ದರು. ಭಾರತೀಯ ಜನತಾ ಪಕ್ಷವು (ಬಿಜೆಪಿ) ಆಮ್ ಆದ್ಮಿ ಪಕ್ಷದ ಶಾಸಕರನ್ನು ಭೇಟಿ ಮಾಡಿ ತಮ್ಮ ಬಳಿ ಸೆಳೆಯುತ್ತಿದ್ದಾರೆ ಮತ್ತು ಅವರು ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿದ್ದರೆ ಎಂಬ ಆರೋಪಗಳು ಕೆಲವು ದಿನಗಳ ಹಿಂದೆ ಬರುತ್ತಿತ್ತು. ಈ ಕಾರಣಕ್ಕೆ ನಾನು ಈ ಕ್ರಮವನ್ನು ಅನುಸರಿಸಬೇಕಿದೆ ಎಂದು ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ.
#WATCH | Delhi CM Arvind Kejriwal says, “We can see that parties are being broken & governments are being toppled in other states by slapping false cases. In Delhi, they intend to arrest AAP leaders under the pretext of liquor policy case. They want to topple the Delhi Government… https://t.co/vuJF4CK7qG pic.twitter.com/trbjaxxPLn
— ANI (@ANI) February 16, 2024
ಇನ್ನು ದೆಹಲಿ ಅಬಕಾರಿ ನೀತಿ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಕೇಜ್ರಿವಾಲ್‌ಗೆ ಪದೇ ಪದೇ ಸಮನ್ಸ್ ನೀಡುವ ವಿಷಯವನ್ನು ಕೂಡ ಈ ಸಭೆಯಲ್ಲಿ ಪ್ರಸ್ತಾಪಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಕೇಜ್ರಿವಾಲ್‌ಗೆ ಅವರಿಗೆ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಆರು ಬಾರಿ ಸಮನ್ಸ್ ನೀಡಿದೆ. ಇಂತಹ ಅನೇಕ ಸಮನ್ಸ್ಗಳನ್ನು ನೀಡಿ ಮುಖ್ಯಮಂತ್ರಿಗಳನ್ನು ಬಂಧಿಸುವ ಮೂಲಕ ದೆಹಲಿಯಲ್ಲಿ ಸರ್ಕಾರವನ್ನು ಉರುಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಎಎಪಿ ಹೇಳಿದೆ.
ಇದನ್ನೂ ಓದಿ: ಕೇಜ್ರಿವಾಲ್,ಸಂಜಯ್ ಸಿಂಗ್ ವಿರುದ್ಧದ ಸಮನ್ಸ್ ರದ್ದತಿಗೆ ಹೈಕೋರ್ಟ್ ನಿರಾಕರಣೆ
ದೆಹಲಿ ವಿಧಾನಸಭೆ ಕಲಾಪ ಫೆ.15ರಂದು ಪ್ರಾರಂಭವಾಗಿದೆ. ಫೆ.21ರವರಗೆ ನಡೆಯಲಿದೆ. ಇದರ ಮಧ್ಯೆ ಹಣಕಾಸು ಸಚಿವ ಅತಿಶಿ ಅವರು 2024ರ ಬಜೆಟ್ ಕೂಡ ಮಂಡಿಸಲಿದ್ದಾರೆ ಎಂದು ಹೇಳಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:01 pm, Fri, 16 February 24