ಸೋನಿಯಾ ಗಾಂಧಿ ಆಸ್ತಿ ಒಟ್ಟು ₹12 ಕೋಟಿ, ಇಟಲಿ ಮನೆ ಪಾಲು ₹27 ಲಕ್ಷ; ಸ್ವಂತ ಕಾರು ಇಲ್ಲ

ರಾಜ್ಯಸಭಾ ಚುನಾವಣಾ ಅಫಿಡವಿಟ್‌ನಲ್ಲಿ ಉಲ್ಲೇಖಿಸಿರುವಂತೆ ಸೋನಿಯಾ ಗಾಂಧಿ ಅವರ ಒಟ್ಟು ಆಸ್ತಿ ₹ 12.53 ಕೋಟಿ.ಇಟಲಿಯಲ್ಲಿರುವ ತಂದೆಯ ಆಸ್ತಿಯಲ್ಲಿ₹27 ಲಕ್ಷ ಮೌಲ್ಯದ ಷೇರುಗಳಿವೆ.ಇದಲ್ಲದೆ 88 ಕೆಜಿ ಬೆಳ್ಳಿ, 1,267 ಗ್ರಾಂ ಚಿನ್ನಾಭರಣಗಳನ್ನು ಹೊಂದಿದ್ದಾರೆ.ಅವರಿಗೆ ಸ್ವಂತ ಕಾರು ಇಲ್ಲ, ಸಾಮಾಜಿಕ ಜಾಲತಾಣ ಖಾತೆಯೂ ಇಲ್ಲ.₹ 90,000 ನಗದು ಹೊಂದಿರುವುದಾಗಿ ಕಾಂಗ್ರೆಸ್ ನಾಯಕಿ ಅಫಿಡವಿಟ್‌ನಲ್ಲಿ ಹೇಳಿದ್ದಾರೆ.

ಸೋನಿಯಾ ಗಾಂಧಿ ಆಸ್ತಿ ಒಟ್ಟು ₹12 ಕೋಟಿ, ಇಟಲಿ ಮನೆ ಪಾಲು ₹27 ಲಕ್ಷ; ಸ್ವಂತ ಕಾರು ಇಲ್ಲ
ಸೋನಿಯಾ ಗಾಂಧಿ
Follow us
ರಶ್ಮಿ ಕಲ್ಲಕಟ್ಟ
|

Updated on: Feb 16, 2024 | 6:50 PM

ದೆಹಲಿ ಫೆಬ್ರುವರಿ 16: ಕಾಂಗ್ರೆಸ್‌ನ (Congress) ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರು ರಾಜ್ಯಸಭಾ ಚುನಾವಣೆಗೆ (Rajya Sabha) ಅಫಿಡವಿಟ್‌ನಲ್ಲಿ ₹ 12.53 ಕೋಟಿ ಆಸ್ತಿಯನ್ನು ಘೋಷಿಸಿದ್ದಾರೆ. ಇಟಲಿಯಲ್ಲಿರುವ ತಂದೆಯ ಆಸ್ತಿಯಲ್ಲಿ ಸೋನಿಯಾ ಗಾಂಧಿ ಅವರಿಗೂ ₹27 ಲಕ್ಷ ಮೌಲ್ಯದ ಷೇರುಗಳಿವೆ. ಇದಲ್ಲದೆ 88 ಕೆಜಿ ಬೆಳ್ಳಿ, 1,267 ಗ್ರಾಂ ಚಿನ್ನಾಭರಣಗಳನ್ನು ಹೊಂದಿದ್ದಾರೆ. ನವದೆಹಲಿಯ ಡೇರಾ ಮಂಡಿ ಗ್ರಾಮದಲ್ಲಿ ಕಾಂಗ್ರೆಸ್ ನಾಯಕಿಗೆ ಮೂರು ಬಿಘಾ(1.20 ಎಕರೆ) ಕೃಷಿ ಭೂಮಿ ಹೊಂದಿದ್ದಾರೆ. ಅವರ ಆದಾಯವನ್ನು ಅವರ ಸಂಸದರ ವೇತನ, ರಾಯಧನ ಆದಾಯ, ಬಂಡವಾಳ ಲಾಭ ಇತ್ಯಾದಿ ಎಂದು ನಮೂದಿಸಲಾಗಿದೆ. ಸೋನಿಯಾ ಗಾಂಧಿ ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ₹ 90,000 ನಗದು ಹೊಂದಿರುವುದಾಗಿ ಉಲ್ಲೇಖಿಸಿದ್ದಾರೆ. 2019 ರಲ್ಲಿ, ಆಕೆಯ ಒಟ್ಟು ಸಂಪತ್ತು, ಆಗಿನ ಚುನಾವಣಾ ಅಫಿಡವಿಟ್‌ನಲ್ಲಿ ಬಹಿರಂಗಪಡಿಸಿದಂತೆ, 11.82 ಕೋಟಿ ಆಗಿತ್ತು.

ಸೋನಿಯಾ ಗಾಂಧಿಯವರ ಶೈಕ್ಷಣಿಕ ಅರ್ಹತೆ

ರಾಜ್ಯಸಭಾ ಚುನಾವಣಾ ಅಫಿಡವಿಟ್‌ನಲ್ಲಿ ಉಲ್ಲೇಖಿಸಿರುವಂತೆ, ಸೋನಿಯಾ ಗಾಂಧಿ ಅವರು 1964 ರಲ್ಲಿ ಸಿಯೆನಾದಲ್ಲಿ ಇಸ್ಟಿಟುಟೊ ಸಾಂಟಾ ತೆರೇಸಾದಿಂದ ಇಂಗ್ಲಿಷ್ ಮತ್ತು ಫ್ರೆಂಚ್‌ನಲ್ಲಿ ಮೂರು ವರ್ಷಗಳ ವಿದೇಶಿ ಭಾಷಾ ಕೋರ್ಸ್ ಅನ್ನು ಪೂರ್ಣಗೊಳಿಸಿದರು. 1965 ರಲ್ಲಿ, ಅವರು ಕೇಂಬ್ರಿಡ್ಜ್‌ನ ಲೆನಾಕ್ಸ್ ಕುಕ್ ಸ್ಕೂಲ್‌ನಿಂದ ಇಂಗ್ಲಿಷ್‌ನಲ್ಲಿ ಸರ್ಟಿಫಿಕೇಟ್ ಕೋರ್ಸ್ ಮಾಡಿದರು. ಸೋನಿಯಾ ಗಾಂಧಿಗೆ ಸ್ವಂತ ಕಾರು ಇಲ್ಲ, ಸಾಮಾಜಿಕ ಜಾಲತಾಣ ಖಾತೆಯೂ ಇಲ್ಲ.

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ ಸೋನಿಯಾ ಗಾಂಧಿ, ರಾಜಸ್ಥಾನದಿಂದ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಕಳೆದ ಐದು ಅವಧಿಗಳಲ್ಲಿ ತಾನು ಪ್ರತಿನಿಧಿಸುತ್ತಿದ್ದ ಕ್ಷೇತ್ರವಾದ ರಾಯಬರೇಲಿಯ ಜನರಿಗೆ ಪತ್ರ ಬರೆದಿರುವ ಸೋನಿಯಾ ಗಾಂಧಿ, ರಾಯ್ ಬರೇಲಿಯ ಜನರಿಲ್ಲದೆ ದೆಹಲಿಯಲ್ಲಿರುವ ತಮ್ಮ ಕುಟುಂಬ ಅಪೂರ್ಣವಾಗಿದೆ ಎಂದು ಹೇಳಿದ್ದಾರೆ. “ಸ್ವಾತಂತ್ರ್ಯದ ನಂತರದ ಮೊದಲ ಲೋಕಸಭೆ ಚುನಾವಣೆಯಲ್ಲಿ ನನ್ನ ಮಾವ ಫಿರೋಜ್ ಗಾಂಧಿ ಅವರನ್ನು ನಿಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿ ದೆಹಲಿಗೆ ಕಳುಹಿಸಿದ್ದೀರಿ. ನಂತರ ನನ್ನ ಅತ್ತೆ ಇಂದಿರಾ ಗಾಂಧಿ ಅವರನ್ನು ನಿಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ದೀರಿ. ಹಲವಾರು ಏರಿಳಿತಗಳು, ನಮ್ಮ ಈ ಸಂಬಂಧವು ಪ್ರೀತಿ ಮತ್ತು ಉತ್ಸಾಹದ ಹಾದಿಯಲ್ಲಿ ಮುಂದುವರಿಯಿತು. ಅದರ ಕಡೆಗೆ ನಮ್ಮ ಸಮರ್ಪಣೆ ಕ್ರಮೇಣ ಬಲಗೊಂಡಿತು ಎಂದು ಪತ್ರ ಬರೆದಿದ್ದಾರೆ. ತಮ್ಮ ವಯಸ್ಸು ಮತ್ತು ಅನಾರೋಗ್ಯದ ಕಾರಣ ಸೋನಿಯಾ ಗಾಂಧಿ ಅವರು ರಾಯ್ ಬರೇಲಿಯಿಂದ ಸ್ಪರ್ಧಿಸದಿರಲು ನಿರ್ಧರಿಸಿದ್ದರು.

ಇದನ್ನೂ ಓದಿ25 ವರ್ಷಗಳ ಕಾಲ ಲೋಕಸಭಾ ಸಂಸದೆ ಆಗಿದ್ದ ಸೋನಿಯಾ ಗಾಂಧಿ ಇನ್ನು ರಾಜ್ಯಸಭೆಗೆ, ಕಾಂಗ್ರೆಸ್​​ನಲ್ಲಿ ಮಹತ್ತರ ಬದಲಾವಣೆ

ಸೋನಿಯಾ ಗಾಂಧಿ ಅವರ ನಾಮನಿರ್ದೇಶನ ಪತ್ರದಲ್ಲಿ, ಅವರು ತಮ್ಮ ಸ್ಥಿರ ಆಸ್ತಿಯನ್ನು ಸಂಪೂರ್ಣವಾಗಿ ಬಹಿರಂಗಪಡಿಸಿಲ್ಲ ಎಂದು ಬಿಜೆಪಿ ಈಗ ದೂರಿದೆ. ಬಿಜೆಪಿ ನಾಯಕ ಯೋಗೇಂದ್ರ ಸಿಂಗ್ ತನ್ವಾರ್ ಅವರು ಚುನಾವಣಾಧಿಕಾರಿ, ರಾಜ್ಯಗಳ ಪರಿಷತ್ತಿನ (ರಾಜ್ಯಸಭೆ) ಚುನಾವಣಾಧಿಕಾರಿಗೆ ಪತ್ರ ಬರೆದಿದ್ದು, ಸೋನಿಯಾ ಗಾಂಧಿ ಇಟಲಿಯಲ್ಲಿ ತಮ್ಮ ಆಸ್ತಿ ಎಷ್ಟು ಎಂದುನಿರ್ದಿಷ್ಟತೆಯನ್ನು ಉಲ್ಲೇಖಿಸಿಲ್ಲ. ರೋಮ್, ಫ್ಲಾರೆನ್ಸ್, ಮಿಲನ್, ಟ್ರೆಂಟೊ, ಅಥವಾ ಯಾವುದೇ ಇತರ ನಗರದಲ್ಲಿ ನೆಲೆಗೊಂಡಿರುವ ಆಸ್ತಿಯ ನಿರ್ದಿಷ್ಟ ಸ್ಥಳದಂತಹ ನಿರ್ಣಾಯಕ ವಿವರಗಳನ್ನು ಒಂದುಗೂಡಿಸಲಾಗಿದೆ. ಹೆಚ್ಚುವರಿಯಾಗಿ, ಈ ಆಸ್ತಿಯಲ್ಲಿ ಶೇಕಡಾವಾರು ಪಾಲನ್ನು ಕುರಿತು ಸಂಬಂಧಿಸಿದ ಮಾಹಿತಿ ನೋಡಿದರೆ ಇದು 25% ಅಥವಾ ಅದಕ್ಕಿಂತ ಹೆಚ್ಚಿನದಾಗಿದೆ ಎಂಬುದನ್ನು ಬಹಿರಂಗಪಡಿಸಲಾಗಿಲ್ಲ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ