Sonia Gandhi: ರಾಯ್ ಬರೇಲಿ ಜನತೆಗೆ ಭಾವುಕ ಪತ್ರ ಬರೆದ ಸೋನಿಯಾ ಗಾಂಧಿ
ಲೋಕಸಭೆ ಬಿಟ್ಟು ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್ನ ಮಾಜಿ ಅಧ್ಯಕ್ಷೆ ಸೋನಿಐಆ ಗಾಂಧಿ ರಾಯ್ ಬರೇಲಿ ಜನತೆಗೆ ಭಾವುಕ ಪತ್ರ ಬರೆದಿದ್ದಾರೆ. ನೀವು ನನ್ನನ್ನು ನೋಡಿಕೊಂಡಂತೆ ನನ್ನ ಕುಟುಂಬವನ್ನು ಪ್ರತಿಯೊಂದು ಕಷ್ಟದಲ್ಲಿಯೂ ನೋಡಿಕೊಳ್ಳುವಿರಿ ಎಂಬುದು ನನಗೆ ತಿಳಿದಿದೆ ಎಂದು ಬರೆದಿದ್ದಾರೆ.
ಕಾಂಗ್ರೆಸ್ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ರಾಯ್ಬರೇಲಿ ಜನತೆಗೆ ಭಾವುಕ ಪತ್ರ ಬರೆದಿದ್ದಾರೆ. ರಾಜ್ಯಸಭಾ ಚುನಾವಣೆಗೆ ಸೋನಿಯಾ ಗಾಂಧಿ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಇದರೊಂದಿಗೆ ಸೋನಿಯಾ ರಾಯ್ ಬರೇಲಿ ಲೋಕಸಭಾ ಕ್ಷೇತ್ರವನ್ನು ತೊರೆದಿರುವುದು ಸ್ಪಷ್ಟವಾಗಿತ್ತು. ಇದೇ ವೇಳೆ ಸೋನಿಯಾ ಗಾಂಧಿ ಅವರು ರಾಯ್ ಬರೇಲಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.
ಈ ಪತ್ರದ ಮೂಲಕ ರಾಯ್ ಬರೇಲಿಯಲ್ಲಿ ತಾನು ಹೇಳಲು ಬಯಸಿದ್ದನ್ನೆಲ್ಲ ಹೇಳಿದ್ದಾರೆ. ‘‘ನಮ್ಮ ಸಂಬಂಧವು ತೀರಾ ಹಳೆಯದಾಗಿದೆ. ನನ್ನ ಅತ್ತೆಯಿಂದ ನಾನು ಇದನ್ನು ಅದೃಷ್ಟವಾಗಿ ಪಡೆದಿದ್ದೇನೆ. ರಾಯ್ ಬರೇಲಿಯೊಂದಿಗೆ ನಮ್ಮ ಕುಟುಂಬದ ಸಂಬಂಧಗಳು ತುಂಬಾ ಆಳವಾಗಿವೆ. ಸ್ವಾತಂತ್ರ್ಯಾ ನಂತರ ನಡೆದ ಮೊದಲ ಲೋಕಸಭೆ ಚುನಾವಣೆಯಲ್ಲಿ ನನ್ನ ಮಾವ ಫಿರೋಜ್ ಗಾಂಧಿ ಅವರನ್ನು ಇಲ್ಲಿಂದ ಗೆಲ್ಲಿಸಿ ದೆಹಲಿಗೆ ಕಳುಹಿಸಿದ್ದೀರಿ. ಅವರ ನಂತರ ನೀವು ನನ್ನ ಅತ್ತೆ ಇಂದಿರಾಗಾಂಧಿಯನ್ನು ನಿಮ್ಮವರನ್ನಾಗಿ ಮಾಡಿಕೊಂಡಿದ್ದೀರಿ. ಅಲ್ಲಿಂದ ಇಲ್ಲಿಯವರೆಗೂ ಬದುಕಿನ ಏರಿಳಿತ, ಕಷ್ಟದ ಹಾದಿಗಳಲ್ಲಿ ಪ್ರೀತಿ, ಉತ್ಸಾಹದಿಂದ ಈ ಸರಣಿ ಮುಂದುವರಿದಿದ್ದು, ನಮ್ಮ ನಂಬಿಕೆ ಗಟ್ಟಿಯಾಗಿದೆ’’.
‘‘ನನ್ನ ಅತ್ತೆಯನ್ನು ಮತ್ತು ನನ್ನ ಜೀವನ ಸಂಗಾತಿಯನ್ನು ಶಾಶ್ವತವಾಗಿ ಕಳೆದುಕೊಂಡ ನಂತರ, ನಾನು ನಿಮ್ಮ ಬಳಿಗೆ ಬಂದೆ ಮತ್ತು ನೀವು ನನಗೆ ನಿಮ್ಮ ತೋಳುಗಳಲ್ಲಿ ನನ್ನನ್ನು ಭದ್ರ ಮಾಡಿದಿರಿ’’.
ಮತ್ತಷ್ಟು ಓದಿ: ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್, ರಾಜಸ್ಥಾನದಿಂದ ಸೋನಿಯಾ ಸ್ಪರ್ಧೆ
‘‘ಕಳೆದೆರಡು ಚುನಾವಣೆಗಳಲ್ಲಿ ಕಷ್ಟದ ಸಂದರ್ಭದಲ್ಲೂ ಬಂಡೆಯಂತೆ ನನ್ನ ಬೆಂಬಲಕ್ಕೆ ನಿಂತಿದ್ದೀರಿ, ಇದನ್ನು ಮರೆಯಲು ಸಾಧ್ಯವೇ ಇಲ್ಲ. ನಾನು ಇಂದು ಏನಾಗಿದ್ದರೂ ನಿಮ್ಮಿಂದಾಗಿ ಎಂದು ಹೇಳಲು ನಾನು ಹೆಮ್ಮೆಪಡುತ್ತೇನೆ ಮತ್ತು ನಾನು ಯಾವಾಗಲೂ ಈ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ’’ ಎಂದು ಸೋನಿಯಾ ಬರೆದಿದ್ದಾರೆ.
ಈಗ ವಯಸ್ಸು ಕಳೆಯುತ್ತಿದ್ದಂತೆ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ, ನಾನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಈ ನಿರ್ಧಾರದ ನಂತರ ನನಗೆ ನೇರವಾಗಿ ನಿಮ್ಮ ಸೇವೆ ಮಾಡುವ ಅವಕಾಶ ಸಿಗುವುದಿಲ್ಲ, ಆದರೆ ನನ್ನ ಹೃದಯ ಮತ್ತು ಆತ್ಮ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ ಎಂಬುದು ಸತ್ಯ.
ಇಲ್ಲಿಯವರೆಗೆ ನೀವು ನನ್ನನ್ನು ನೋಡಿಕೊಂಡಂತೆ ನನ್ನ ಕುಟುಂಬವನ್ನು ಪ್ರತಿಯೊಂದು ಕಷ್ಟದಲ್ಲಿಯೂ ನೋಡಿಕೊಳ್ಳುವಿರಿ ಎಂಬುದು ನನಗೆ ತಿಳಿದಿದೆ ಎಂದು ಬರೆದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ