25 ವರ್ಷಗಳ ಕಾಲ ಲೋಕಸಭಾ ಸಂಸದೆ ಆಗಿದ್ದ ಸೋನಿಯಾ ಗಾಂಧಿ ಇನ್ನು ರಾಜ್ಯಸಭೆಗೆ, ಕಾಂಗ್ರೆಸ್​​ನಲ್ಲಿ ಮಹತ್ತರ ಬದಲಾವಣೆ

ಸೋನಿಯಾ ಗಾಂಧಿ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ್ದಾರೆ. ಅವರು ಪ್ರತಿನಿಧಿಸುತ್ತಿದ್ದ ರಾಯ್ ಬರೇಲಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಕಣಕ್ಕಿಳಿಸಲಾಗುತ್ತಿದೆಯೇ ಎಂದು ಜನರು ಕುತೂಹಲಿಗಳಾಗಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಭದ್ರಕೋಟೆಯಾದ ರಾಯ್ ಬರೇಲಿಯಲ್ಲಿ ಪ್ರಿಯಾಂಕಾ ಸ್ಪರ್ಧಿಸಿದರೆ ಅಲ್ಲಿ ಅವರಿಗೆ ಗೆಲುವು ಸುಲಭ. ಹೀಗಾದರೆ ಕಾಂಗ್ರೆಸ್ ಪಕ್ಷದಲ್ಲಿ ಮತ್ತೊಂದು ದೊಡ್ಡ ಬದಲಾವಣೆಗೆ ಇದು ನಾಂದಿ ಆಗುತ್ತದೆ ಎಂದು ವಿವರಿಸಿ ಹೇಳಬೇಕಿಲ್ಲ.

25 ವರ್ಷಗಳ ಕಾಲ ಲೋಕಸಭಾ ಸಂಸದೆ ಆಗಿದ್ದ ಸೋನಿಯಾ ಗಾಂಧಿ ಇನ್ನು ರಾಜ್ಯಸಭೆಗೆ, ಕಾಂಗ್ರೆಸ್​​ನಲ್ಲಿ ಮಹತ್ತರ ಬದಲಾವಣೆ
ಸೋನಿಯಾ ಗಾಂಧಿ- ಪ್ರಿಯಾಂಕಾ ಗಾಂಧಿ
Follow us
ರಶ್ಮಿ ಕಲ್ಲಕಟ್ಟ
|

Updated on:Feb 14, 2024 | 4:29 PM

ದೆಹಲಿ ಫೆಬ್ರುವರಿ 14: ಕಾಂಗ್ರೆಸ್‌ ಪಕ್ಷದ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರು ಈ ವರ್ಷ ಲೋಕಸಭಾ ಚುನಾವಣೆಯಲ್ಲಿ (Lok sabha) ಸ್ಪರ್ಧಿಸುವುದಿಲ್ಲ. ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿದ್ದ ಸೋನಿಯಾ ಗಾಂಧಿ ಇಂದು (ಬುಧವಾರ) ರಾಜ್ಯಸಭೆಗೆ (Rajya Sabha) ನಾಮಪತ್ರ ಸಲ್ಲಿಸಿದ್ದಾರೆ. ಈ ಬಾರಿ ಸೋನಿಯಾ ರಾಜಸ್ಥಾನದಿಂದ ರಾಜ್ಯಸಭೆಗೆ ಸ್ಪರ್ಧಿಸಲಿದ್ದಾರೆ. ಸೋನಿಯಾ ಗಾಂಧಿ ವಯಸ್ಸು 77. ಆದರೂ ಅವರು ರಾಜಕೀಯ ಜೀವನದಿಂದ ಹಿಂದೆ ಸರಿದಿಲ್ಲ. 25 ವರ್ಷಗಳ ಕಾಲ ಲೋಕಸಭಾ ಸಂಸದೆ ಆಗಿದ್ದ ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎನ್ನುವ ಮೂಲಕ ಅವರು ನಿವೃತ್ತಿ ಸ್ವೀಕರಿಸಿಲ್ಲ, ಬದಲಾಗಿ ರಾಜ್ಯಸಭೆಗೆ ಹೋಗುತ್ತಿದ್ದಾರೆ.

ಸೋನಿಯಾ ಗಾಂಧಿ ರಾಜಕೀಯ ಪಯಣ

ಸೋನಿಯಾ ಗಾಂಧಿ ಅವರು ತಮ್ಮ ಮೊದಲ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಠಿ ಮತ್ತು ಕರ್ನಾಟಕದ ಬಳ್ಳಾರಿಯಿಂದ ಸ್ಪರ್ಧಿಸಿದ್ದರು. ಅಲ್ಲಿ ಅವರು ಎರಡೂ ಕಡೆ ಗೆದ್ದಿದ್ದರು. 1999 ರಲ್ಲಿ ಪತಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಾದ ಎಂಟು ವರ್ಷಗಳ ನಂತರ ಸೋನಿಯಾ ರಾಜಕೀಯ ಪ್ರವೇಶಿಸಿದ್ದರು. 2004 ರಲ್ಲಿ ಅವರು ಕಾಂಗ್ರೆಸ್‌ನ ಎರಡನೇ ಭದ್ರಕೋಟೆಯಾದ ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಸ್ಪರ್ಧಿಸಿದರು.

ಕಾಂಗ್ರೆಸ್ ನಾಯಕಿ 1999 ರಿಂದ ರಾಜಕೀಯದಲ್ಲಿ ತೊಡಗಿದ್ದು ಕಳೆದ ದಶಕದ ರಾಜಕೀಯ ಮತ್ತು ಸಂಸದೀಯ ಚಾಣಾಕ್ಷತೆ ಮೂಲಕ ತಮ್ಮ ಪಕ್ಷಕ್ಕೆ ಸ್ಥಿರ ಮತ್ತು ಮಾರ್ಗದರ್ಶಿ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಸತ್ತಿನಲ್ಲಿ ಮತ್ತು ಹೊರಗೆ ಅವರು ಆಗಾಗ್ಗೆ ತಮ್ಮ ಸಹೋದ್ಯೋಗಿಗಳಿಗೆ ಸಲಹೆ ನೀಡುತ್ತಿದ್ದರು, ಆದರೆ ಸಾಮಾನ್ಯವಾಗಿ ಮೃದುಮಾತಿನ ಸೋನಿಯಾ ಗಾಂಧಿ ಅವರು ಕಳೆದ ವರ್ಷ ಸೆಪ್ಟೆಂಬರ್ ಮತ್ತು ಡಿಸೆಂಬರ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡು ಗುಡುಗಿದ್ದರು.

2018 ರಲ್ಲಿ ಅವರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. “ಪ್ರಧಾನಿ ಚೆನ್ನಾಗಿ ಉಪನ್ಯಾಸ ನೀಡುತ್ತಾರೆ. ಆದರೆ ಉಪನ್ಯಾಸಗಳಿಂದ ಹೊಟ್ಟೆ ತುಂಬಲು ಸಾಧ್ಯವಿಲ್ಲ. ನಿಮಗೆ ದಾಲ್ ಚಾವಲ್ (ಅನ್ನ, ಬೇಳೆ)ಬೇಕು. ಉಪನ್ಯಾಸಗಳು ರೋಗಿಗಳನ್ನು ಗುಣಪಡಿಸುವುದಿಲ್ಲ… ನಿಮಗೆ ಆರೋಗ್ಯ ಕೇಂದ್ರಗಳು ಬೇಕು ಎಂದಿದ್ದರು ಕಾಂಗ್ರೆಸ್ ನಾಯಕಿ.

2015 ರಲ್ಲಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ ಸೋನಿಯಾ, ಮುಖ್ಯ ಮಾಹಿತಿ ಆಯುಕ್ತರಂತಹ ಪ್ರಮುಖ ಹುದ್ದೆಗಳ ಚರ್ಚೆಯಲ್ಲಿ ಅವರ “ಪಾರದರ್ಶಕತೆಯ ಬಗ್ಗೆ ಅನೇಕ ಮೋಸದ ಭರವಸೆಗಳ” ವಿರುದ್ಧ ವಾದಿಸಿದರು. ಸೋನಿಯಾ ಗಾಂಧಿಯವರ ಸ್ಥಾನವು ವಿರೋಧ ಪಕ್ಷದ ಹಿರಿಯ ರಾಜಕಾರಣಿಯಾಗಿದ್ದು, ಅವರು ಆಗಾಗ್ಗೆ ದಾಳಿಗಳಿಗೆ ಗುರಿಯಾಗುತ್ತಾರೆ. ವಿಶೇಷವಾಗಿ ಅವರ ಇಟಾಲಿಯನ್ ಪರಂಪರೆ ಬಗ್ಗೆ ದಾಳಿ ನಡೆಸಲಾಗುತ್ತದೆ. ಈಗ ಮಿತ್ರರಾಗಿರುವ ಶರದ್ ಪವಾರ್ ಸೇರಿದಂತೆ ಅನೇಕರು ಅವರ ರಾಜಕೀಯ ರುಜುವಾತುಗಳನ್ನು ಪ್ರಶ್ನಿಸಿದ್ದಾರೆ. ಸೋನಿಯಾ ಗಾಂಧಿ ಮೇಲೆ ಈ ರೀತಿ ಹೆಚ್ಚು ವಾಗ್ದಾಳಿ ನಡೆಸಿದ್ದು ಬಿಜೆಪಿ.

ರಾಯ್ ಬರೇಲಿಯಲ್ಲಿ ಹಿಡಿತ

ಸೋನಿಯಾ ಗಾಂಧಿಯವರು 2004 ರಿಂದ ರಾಯ್ ಬರೇಲಿಯಲ್ಲಿ ಹಿಡಿತ ಸಾಧಿಸಿದ್ದು ಎಂದಿಗೂ ಶೇಕಡಾ 55 ಕ್ಕಿಂತ ಕಡಿಮೆ ಮತದಾನವಾಗಿಲ್ಲ. ಅವರು 2004 ಮತ್ತು 2009 ರಲ್ಲಿ ಕಾಂಗ್ರೆಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯಿಂದ ಸೋಲಿಸಿದಾಗಲೂ ಸೋನಿಯಾ ರಾಯ್ ಬರೇಲಿ ಗೆದ್ದಿದ್ದರು. ರಾಹುಲ್ ಗಾಂಧಿಯವರು ಅಮೇಠಿಯಲ್ಲಿ ಸೋತಾಗಲೂ ಸೋನಿಯಾ ರಾಯ್ ಬರೇಲಿ ಸ್ಥಾನ ಉಳಿಸಿಕೊಂಡಿದ್ದರು.

ಏಪ್ರಿಲ್/ಮೇ ಚುನಾವಣೆಗಳಲ್ಲಿ ಕಾಂಗ್ರೆಸ್ ಯಾರನ್ನು ಕಣಕ್ಕಿಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ. ಸೋನಿಯಾ ಗಾಂಧಿ ಅವರು ಪ್ರತಿನಿಧಿಸುತ್ತಿದ್ದ ಲೋಕಸಭಾ ಕ್ಷೇತ್ರಕ್ಕೆ ಅವರ ಕುಟುಂಬದವರನ್ನೇ ಕಣಕ್ಕಿಳಿಸುವ ಸಾಧ್ಯತೆ ಇದೆ. ಆದರೆ ರಾಹುಲ್ ಗಾಂಧಿ ಅಲ್ಲ. ಆದರೆ ಪ್ರಿಯಾಂಕಾ ಗಾಂಧಿಯನ್ನು ಇಲ್ಲಿಂದಲೇ ಕಣಕ್ಕಿಳಿಸಿ ರಾಜಕೀಯ ಪ್ರವೇಶ ಮಾಡಿಸುವ ಲೆಕ್ಕಾಚಾರವೂ ಕಾಂಗ್ರೆಸ್ ಪಕ್ಷಕ್ಕೆ ಇದ್ದಂತಿದೆ.

ಇದನ್ನೂ ಓದಿರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್​, ರಾಜಸ್ಥಾನದಿಂದ ಸೋನಿಯಾ ಸ್ಪರ್ಧೆ

ಪ್ರಿಯಾಂಕಾ ಗಾಂಧಿ ಪ್ರವೇಶ?

ಪ್ರಿಯಾಂಕಾ ಗಾಂಧಿ ವಾದ್ರಾ ಅವರ ರಾಜಕೀಯ ಜೀವನದ ಬಗ್ಗೆ ಹೇಳುವುದಾದರೆ ಅವರು ಯಾವತ್ತು ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ಆದರೆ ಸೋನಿಯಾ ಗಾಂಧಿ ಈ ಬಾರಿ ಲೋಕಸಭೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂಬ ಸುದ್ದಿ ಬಂದ ಮೇಲೆ ಪ್ರಿಯಾಂಕಾ ರಾಜಕೀಯ ಪ್ರವೇಶದ ಸುದ್ದಿ ವೇಗ ಪಡೆದುಕೊಂಡಿದೆ.

ಐದು ವರ್ಷಗಳ ಹಿಂದೆ ಅಂದರೆ- 2019 ರ ಚುನಾವಣೆಯ ಮೊದಲು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಯಾವುದೇ ಸಮಯದಲ್ಲಿ ಚುನಾವಣಾ ಪಾದಾರ್ಪಣೆ ಮಾಡಲು ಸಿದ್ಧ ಎಂದು ಹೇಳಿದ್ದರು. ಯುಪಿಯ ವಾರಣಾಸಿಯಿಂದ ಸ್ಪರ್ಧಿಸುತ್ತೀರಾ ಎಂದು ಕೇಳಿದಾಗ ಯಾಕೆ ಆಗಲ್ಲ? ಎಂದು ನಗುತ್ತಾ ಹೇಳಿದ್ದರು. ವಾರಣಾಸಿಯಲ್ಲಿ ಮೋದಿ ವಿರುದ್ಧ ಪ್ರಿಯಾಂಕಾ ಕಣಕ್ಕಿಳಿಯುತ್ತಾರೆ ಎಂದೇ ಆಗ ಊಹಿಸಲಾಗಿತ್ತು. ಇದೀಗ ಪ್ರಿಯಾಂಕಾ ಗಾಂಧಿಯ ಚುನಾವಣಾ ಪ್ರವೇಶದ ಬಗ್ಗೆ ಜನ ಕುತೂಹಲಿಗಳಾಗಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಭದ್ರಕೋಟೆಯಾದ ರಾಯ್ ಬರೇಲಿಯಲ್ಲಿ ಪ್ರಿಯಾಂಕಾ ಸ್ಪರ್ಧಿಸಿದರೆ ಅಲ್ಲಿ ಅವರಿಗೆ ಗೆಲುವು ಸುಲಭ. ಹೀಗಾದರೆ ಕಾಂಗ್ರೆಸ್ ಪಕ್ಷದಲ್ಲಿ ಮತ್ತೊಂದು ದೊಡ್ಡ ಬದಲಾವಣೆಗೆ ಇದು ನಾಂದಿ ಆಗುತ್ತದೆ ಎಂದು ವಿವರಿಸಿ ಹೇಳಬೇಕಿಲ್ಲ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:27 pm, Wed, 14 February 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ