AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನರಸಿಂಹ ರಾವ್ ಸೇರಿ ಮೂವರಿಗೆ ಭಾರತ ರತ್ನ; ನಾನಿದನ್ನು ಸ್ವಾಗತಿಸುತ್ತೇನೆ: ಸೋನಿಯಾ ಗಾಂಧಿ

ಮಾಜಿ ಪ್ರಧಾನಿಗಳಾದ ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಮತ್ತು ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಘೋಷಣೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮೂವರಿಗೆ ಭಾರತ ರತ್ನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ನರಸಿಂಹ ರಾವ್ ಸೇರಿ ಮೂವರಿಗೆ ಭಾರತ ರತ್ನ; ನಾನಿದನ್ನು ಸ್ವಾಗತಿಸುತ್ತೇನೆ: ಸೋನಿಯಾ ಗಾಂಧಿ
ಸೋನಿಯಾ ಗಾಂಧಿ
ರಶ್ಮಿ ಕಲ್ಲಕಟ್ಟ
|

Updated on: Feb 09, 2024 | 3:38 PM

Share

ದೆಹಲಿ ಫೆಬ್ರುವರಿ 09: ಮಾಜಿ ಪ್ರಧಾನಿಗಳಾದ ನರಸಿಂಹರಾವ್ (Narasimha Rao), ಚೌಧರಿ ಚರಣ್ ಸಿಂಗ್ ಮತ್ತು ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನ (Bharat Ratna)ಘೋಷಣೆ ಕುರಿತು ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದಾಗ ನಾನು ಆ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮೂರು ವಿಭಿನ್ನ ಪೋಸ್ಟ್‌ಗಳ ಮೂಲಕ ಮೂವರು ದಿಗ್ಗಜರ ಕೊಡುಗೆಯನ್ನು ಸ್ಮರಿಸಿದ್ದಾರೆ. ಲಾಲ್ ಕೃಷ್ಣ ಅಡ್ವಾಣಿ ಮತ್ತು ಕರ್ಪೂರಿ ಠಾಕೂರ್ ನಂತರ ಇಂದು (ಶುಕ್ರವಾರ) ಮೂವರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆ ಆಗಿದ್ದು ಈ ವರ್ಷ ಒಟ್ಟು ಐದು ಜನರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗುತ್ತಿದೆ.

“ದೇಶದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ನೀಡಿ ಗೌರವಿಸುತ್ತಿರುವುದು ನಮ್ಮ ಸರ್ಕಾರದ ಅದೃಷ್ಟವಾಗಿದೆ. ಈ ಗೌರವವು ದೇಶಕ್ಕೆ ಅವರ ಅನುಪಮ ಕೊಡುಗೆಗೆ ಸಮರ್ಪಿತವಾಗಿದೆ…” ಎಂದು ಪ್ರಧಾನಿ ಮೋದಿ ಅವರು ಚರಣ್ ಸಿಂಗ್ ಅವರಿಗೆ ಭಾರತ ರತ್ನ ಘೋಷಿಸಿದ್ದಾರೆ. ನರಸಿಂಹ ರಾವ್ ಬಗ್ಗೆ ಟ್ವೀಟ್ ಮಾಡಿದ ಮೋದಿ, “ನರಸಿಂಹರಾವ್ ಅವರ ಅವಧಿ ಪ್ರಧಾನ ಮಂತ್ರಿಯಾಗಿ ಭಾರತವನ್ನು ಜಾಗತಿಕ ಮಾರುಕಟ್ಟೆಗಳಿಗೆ ತೆರೆದು, ಆರ್ಥಿಕ ಅಭಿವೃದ್ಧಿಯ ಹೊಸ ಯುಗವನ್ನು ಉತ್ತೇಜಿಸುವ ಮಹತ್ವದ ಕ್ರಮಗಳಿಂದ ಗುರುತಿಸಲಾಗಿದೆ ಎಂದಿದ್ದಾರೆ.

ಭಾರತ ಸರ್ಕಾರವು ಡಾ. ಎಂ.ಎಸ್. ಸ್ವಾಮಿನಾಥನ್ ಅವರಿಗೆ ಕೃಷಿ ಮತ್ತು ರೈತರ ಕಲ್ಯಾಣದಲ್ಲಿ ನಮ್ಮ ದೇಶಕ್ಕೆ ನೀಡಿದ ಸ್ಮಾರಕ ಕೊಡುಗೆಗಳನ್ನು ಗುರುತಿಸಿ ಅವರಿಗೆ ಭಾರತ ರತ್ನ ನೀಡುತ್ತಿರುವುದು ಅಪಾರ ಸಂತೋಷದ ವಿಷಯವಾಗಿದೆ. ಸವಾಲಿನ ಸಮಯದಲ್ಲಿ ಭಾರತವು ಕೃಷಿಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಸಹಾಯ ಮಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಭಾರತೀಯ ಕೃಷಿಯನ್ನು ಆಧುನೀಕರಿಸುವಲ್ಲಿ ಹೆಚ್ಚಿ ಪ್ರಯತ್ನಗಳನ್ನು ಮಾಡಿದ್ದಾರೆ” ಎಂದು ಎಂಎಸ್ ಸ್ವಾಮಿನಾಥನ್ ಕುರಿತು ಪ್ರಧಾನಿ ಮೋದಿ ಬರೆದಿದ್ದಾರೆ.

ಪಿವಿ ನರಸಿಂಹ ರಾವ್, ಚೌಧರಿ ಚರಣ್ ಸಿಂಗ್ ಮತ್ತು ಎಂಎಸ್ ಸ್ವಾಮಿನಾಥನ್ ಅವರ ಕೊಡುಗೆಯನ್ನು ಪ್ರತಿಯೊಬ್ಬ ಭಾರತೀಯನೂ ಗೌರವಿಸುತ್ತಾನೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆಅವರು ಭಾರತದ ರತ್ನಗಳೇ ಆಗಿದ್ದರು, ಆಗಿಯೇ ಇರುತ್ತಾರೆ. ಆದರೆ ಸ್ವಾಮಿನಾಥನ್ ಅವರ ಸೂತ್ರದ ಆಧಾರದ ಮೇಲೆ ಎಂಎಸ್‌ಪಿಗೆ ಕಾನೂನು ಸ್ಥಾನಮಾನ ನೀಡುವಲ್ಲಿ ಮೋದಿ ಸರ್ಕಾರ ಮೌನವಾಗಿದೆ. ಪ್ರಧಾನಿ ಮೋದಿಯವರ ಹಠಮಾರಿತನದಿಂದಾಗಿ 700 ರೈತರು ತಮ್ಮ ಚಳವಳಿಯ ಸಂದರ್ಭದಲ್ಲಿ ಹುತಾತ್ಮರಾಗಿದ್ದರು. ಇಂದಿಗೂ ರೈತರು ದೆಹಲಿಗೆ ಮೆರವಣಿಗೆ ಮಾಡಲು ಸಿದ್ಧರಾಗಿದ್ದಾರೆ,” ಎಂದು ಜೈರಾಮ್ ರಮೇಶ್ ಬರೆದಿದ್ದಾರೆ.

ಇದನ್ನೂ ಓದಿ:Bharat Ratna Awards: ಮಾಜಿ ಪ್ರಧಾನಿಗಳಾದ ನರಸಿಂಹರಾವ್, ಚೌಧರಿ ಚರಣ್ ಸಿಂಗ್, ವಿಜ್ಞಾನಿ ಎಂಎಸ್ ಸ್ವಾಮಿನಾಥನ್​​ಗೆ ಭಾರತ ರತ್ನ

ಗಾಂಧಿ ಕುಟುಂಬ ಮತ್ತು ನರಸಿಂಹರಾವ್ ನಡುವಿನ ಭಿನ್ನಾಭಿಪ್ರಾಯದ ಮೇಲೆ ಮೋದಿ ಆಟವಾಡಲು ಪ್ರಯತ್ನಿಸುತ್ತಿದ್ದಾರೆ: ಟಿಎಂಸಿ ನಾಯಕ ತೃಣಮೂಲ ನಾಯಕ ಕುನಾಲ್ ಘೋಷ್ ಮಾತನಾಡಿ, ಭಾರತ ರತ್ನ ಘೋಷಣೆಗಳ ಬಗ್ಗೆ ಪಕ್ಷವು ಅಧಿಕೃತವಾಗಿ ನಂತರ ಪ್ರತಿಕ್ರಿಯಿಸುತ್ತದೆ. “ನಾನು ಯಾವುದೇ ಕಾಮೆಂಟ್ ಮಾಡಲು ಬಯಸುವುದಿಲ್ಲ ಆದರೆ ನರಸಿಂಹರಾವ್ ಅವರಿಗೆ ಭಾರತ ರತ್ನದ ಹಿಂದೆ ಏನಾದರೂ ರಾಜಕೀಯವಿದೆಯೇ? ಗಾಂಧಿ ಕುಟುಂಬಕ್ಕೂ ದಿವಂಗತ ನರಸಿಂಹರಾವ್ ಅವರಿಗೂ ಬಹಳ ಭಿನ್ನಾಭಿಪ್ರಾಯವಿದೆ. ಮೋದಿ ಅವರು ಅದನ್ನು ಬಳಸಿ ಆಟ ಆಡಲು ಪ್ರಯತ್ನಿಸುತ್ತಿದ್ದಾರೆಯೇ?” ಎಂದು ಕೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ