FutureCrime Summit 2024: ಯಶಸ್ವಿಯಾಗಿ ನಡೆಯಿತು ಮೊದಲ ಫ್ಯೂಚರ್ ಕ್ರೈಮ್ ಸಮಾವೇಶ; ಭವಿಷ್ಯದ ಅಪರಾಧಗಳ ಬಗ್ಗೆ ತಜ್ಞರಿಂದ ವಿಚಾರ ವಿನಿಮಯ

2 Days Summit In New Delhi Ends On Feb 9th: ತಂತ್ರಜ್ಞಾನ ಆವಿಷ್ಕರಣೆಗೊಂಡಂತೆಲ್ಲಾ ಅಪರಾಧಿಗಳಿಗೂ ಈ ಟೆಕ್ನಾಲಜಿ ಅಸ್ತ್ರವಾಗಿವೆ. ಹೊಸ ಮಾದರಿ ಅಪಾಯಗಳು ಎದುರಾಗುತ್ತಿವೆ. ಭವಿಷ್ಯದ ಅಪರಾಧಗಳೇನು, ಅದನ್ನು ಎದುರಿಸುವುದು ಹೇಗೆ ಎಂದು ಚರ್ಚಿಸಲು ಫ್ಯೂಚರ್​ಕ್ರೈಮ್ ಸಮಿಟ್ ನಡೆಸಲಾಗಿದೆ. ಫೆಬ್ರುವರಿ 8 ಮತ್ತು 9ರಂದು ದೆಹಲಿಯಲ್ಲಿ ಮೊದಲ ಆವೃತ್ತಿಯ ಫ್ಯೂಚರ್ ಕ್ರೈಮ್ ಸಮಿಟ್ ನಡೆದಿದೆ.

FutureCrime Summit 2024: ಯಶಸ್ವಿಯಾಗಿ ನಡೆಯಿತು ಮೊದಲ ಫ್ಯೂಚರ್ ಕ್ರೈಮ್ ಸಮಾವೇಶ; ಭವಿಷ್ಯದ ಅಪರಾಧಗಳ ಬಗ್ಗೆ ತಜ್ಞರಿಂದ ವಿಚಾರ ವಿನಿಮಯ
ಸೈಬರ್ ಸೆಕ್ಯೂರಿಟಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 09, 2024 | 4:30 PM

ನವದೆಹಲಿ, ಫೆಬ್ರುವರಿ 9: ಭವಿಷ್ಯದ ಅಪರಾಧಗಳ ಬಗ್ಗೆ ವಿಚಾರ ವಿನಿಮಯ ಮತ್ತು ಹೋರಾಟ ರೂಪಿಸಲು ಫ್ಯೂಚರ್ ಕ್ರೈಮ್ ಸಮಿಟ್ (FutureCrime Summit 2024) ರೂಪಿಸಲಾಗಿದೆ. ಇದರ ಮೊದಲ ಆವೃತ್ತಿ ರಾಷ್ಟ್ರರಾಜಧಾನಿಯಲ್ಲಿ ನಡೆದಿದೆ. ನಿನ್ನೆ ಫೆಬ್ರುವರಿ 8ಕ್ಕೆ ಆರಂಭಗೊಂಡ 2024ರ ಫ್ಯೂಚರ್​ಕ್ರೈಮ್ ಸಮಿಟ್ ಇಂದು ಸಂಜೆ ಮುಕ್ತಾಯಗೊಳ್ಳುತ್ತಿದೆ. ಕಾನಪುರ್ ಐಐಟಿಯ ಸಹಯೋಗದೊಂದಿಗೆ ಫ್ಯೂಚರ್ ಕ್ರೈಮ್ ರಿಸರ್ಚ್ ಫೌಂಡೇಶನ್ (FCRF) ಈ ಸಮಾವೇಶವನ್ನು ಆಯೋಜಿಸಿದೆ. ದೇಶದ ಸೈಬರ್ ಸೆಕ್ಯೂರಿಟಿ, ಡಿಜಿಟಲ್ ಫೋರೆನ್ಸಿಕ್ಸ್, ಹಣಕಾಸು ಅಪರಾಧ ನಿಯಂತ್ರಣ ಕ್ಷೇತ್ರದ ಸರ್ವೋತ್ಕೃಷ್ಟ ಪರಿಣಿತರು ಈ ಸಮಿಟ್​ನಲ್ಲಿ ಪಾಲ್ಗೊಂಡು ತಮ್ಮ ಅಮೂಲ್ಯ ಸಲಹೆ, ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ತಂತ್ರಜ್ಞಾನ ಆವಿಷ್ಕರಣೆಗೊಂಡಂತೆಲ್ಲಾ ಅಪರಾಧಗಳ ವಿಸ್ತಾರ ಮತ್ತು ಪರಿಭಾಷೆ ಬದಲಾಗುತ್ತಲೇ ಇರುತ್ತದೆ. ಅಪರಾಧಿಗಳು ಹೊಸ ಹೊಸ ತಂತ್ರಜ್ಞಾನ ಬಳಸಿ ಘಾತುಕ ಕೃತ್ಯ ಎಸಗುತ್ತಾರೆ. ಇವತ್ತು ಆನ್​ಲೈನ್​ನಲ್ಲಿ ಹಣ ವಂಚನೆ ಮಾಡುವುದು ಇತ್ಯಾದಿ ಸೈಬರ್ ಕ್ರೈಮ್ ಹೆಚ್ಚಾಗಿದೆ. ಭವಿಷ್ಯದಲ್ಲಿ ವೆಬ್3 ತಂತ್ರಜ್ಞಾನದ ಹವಾ ಇರಲಿದ್ದು, ಸೈಬರ್ ಕ್ರಿಮಿನಲ್​ಗಳಿಗೆ ಅದೂ ಕೂಡ ಅಸ್ತ್ರವಾಗಬಹುದು. ಹೀಗಾಗಿ, ವೆಬ್ 3.0 ಕಾನೂನು ಜಾರಿ, ಕ್ರಿಪ್ಟೋ ಕ್ರೈಮ್, ಬ್ಲಾಕ್​ಚೈನ್ ಫೋರೆನ್ಸಿಂಗ್, ಪ್ರೆಡಿಕ್ಟಿವ್ ಪೋಲಿಸಿಂಗ್ ಇತ್ಯಾದಿ ವಿಷಯಗಳತ್ತ ಪರಿಣಿತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಫ್ಯೂಚರ್​ಕ್ರೈಮ್ ಸಮಿಟ್ ಪರಿಣಾಮಕಾರಿ ವೇದಿಕೆ ಆಗಿದೆ.

ಇದನ್ನೂ ಓದಿ: ಹಲ್ದ್ವಾನಿ ಹಿಂಸಾಚಾರ ಪೂರ್ವ ಯೋಜಿತ: ಜಿಲ್ಲಾ ಮೆಜಿಸ್ಟ್ರೇಟ್

ರಕ್ಷಣಾ ಸಚಿವಾಲಯದ ಮುಖ್ಯ ಸಲಹೆಗಾರ ವಿನೋದ್ ಜಿ ಖಂಡರೆ, ಎಲೆಕ್ಟ್ರಾನಿಕ್ಸ್ ಸಚಿವಾಲಯದಲ್ಲಿ ನ್ಯಾಷನಲ್ ಸೈಬರ್ ಸೆಕ್ಯೂರಿಟಿ ಕೋ ಆರ್ಡಿನೇಟರ್ ಆಗಿರುವ ಲೆಫ್ಟಿನೆಂಟ್ ಜನರಲ್ ಎಂ.ಯು. ನಾಯರ್, ಆಂಧ್ರದ ಮಾಜಿ ಡಿಜಿಪಿ ಸಂತೋಷ್ ಮೆಹ್ರಾ, ಐಐಟಿ ಕಾನಪುರ್​ನ ಸಿಇಒ ಡಾ. ನಿಖಿಲ್ ಅಗರ್ವಾಲ್, ಉ.ಪ್ರ. ಮಾಜಿ ಡಿಜಿಪಿ ಡಾ. ವಿಕ್ರಮ್ ಸಿಂಗ್ ಮೊದಲಾದ ಪರಿಣಿತರು ಎರಡು ದಿನಗಳ ಈ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ. ಪೇಟಿಎಂ, ಟೆಕ್ ಮಹೀಂದ್ರ ಮೊದಲಾದ ಹಣಕಾಸು ಮತ್ತು ಫಿನ್​ಟೆಕ್ ಕಂಪನಿಗಳಿಂದ ಪರಿಣಿತರು ಬಂದು ಮಾತನಾಡಿದ್ದಾರೆ.

ಫ್ಯೂಚರ್​ಕ್ರೈಮ್ ಸಮಿಟ್ 2024ನ ಮೊದಲ ದಿನದಂದು (ಫೆ. 8) ನಡೆದ ಚರ್ಚಿತ ವಿಚಾರಗಳು

  • ಪ್ರಮುಖ ವಲಯಗಳಲ್ಲಿ ಪ್ರಬಲ ಸೈಬರ್ ಡಿಫೆನ್ಸ್ ನಿರ್ಮಿಸುವುದು
  • ಕ್ರಿಪ್ಟೋ ಕ್ರೈಮ್, ಬ್ಲಾಕ್​ಚೈನ್ ಫೋರೆನ್ಸಿಕ್ಸ್
  • ಪ್ರೆಡಿಕ್ಟಿವ್ ಪೊಲೀಸಿಂಗ್
  • ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಭವಿಷ್ಯದ ಅಪರಾಧಗಳು
  • ಅಂತರ್ಜಾಲದಲ್ಲಿ ವೈಯಕ್ತಿಕ ಸುರಕ್ಷತೆ, ಮಕ್ಕಳ ರಕ್ಷಣೆ ಇತ್ಯಾದಿ ವಿಚಾರಗಳು
  • ಡೀಪ್​ಫೇಕ್ ಅಪರಾಧಗಳು ಹಾಗೂ ನಿಗ್ರಹ ವಿಧಾನ
  • ವೆಬ್ 3 ಕಾನೂನು ಜಾರಿಯಲ್ಲಿನ ಸವಾಲುಗಳು
  • ಕ್ಲೌಡ್ ಫೋರೆನ್ಸಿಕ್ಸ್

ಇದನ್ನೂ ಓದಿ: ಟಿವಿ ಚಾನಲ್​ನಲ್ಲಿ ಬರೋ ಬಿಸಿನೆಸ್ ತಜ್ಞರಿಗೆ ದಂಡ ಕಕ್ಕಿಸಿದ ಸೆಬಿ; ಒಳಗೊಳಗೆ ನಡೆದಿರುತ್ತೆ ಡೀಲಿಂಗ್, ಹುಷಾರ್

ಎರಡನೆ ದಿನದಂದು ಚರ್ಚಿತವಾದ ವಿಷಯಗಳು

  • ಕ್ವಾಂಟಮ್ ಯುಗದಲ್ಲಿ ಸೈಬರ್ ಸೆಕ್ಯೂರಿಟಿ
  • ಸೈಬರ್ ಕ್ರೈಮ್​ನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್
  • ಮುಂದಿನ ತಲೆಮಾರಿನ ಸೈಬರ್ ದಾಳಿಗಳು
  • ಭವಿಷ್ಯದ ಅಪಾಯಗಳು
  • ಭವಿಷ್ಯದ ಸೈಬರ್ ಅಪರಾಧಗಳು ಹಾಗೂ ಕಾನೂನಿನ ತೊಡಕು
  • ರಾಷ್ಟ್ರೀಯ ಸೈಬರ್ ಸೆಕ್ಯೂರಿಟಿಗೆ ಡಿಜಿಟಲ್ ಅಪಾಯಗಳು
  • ಜನರೇಟಿವ್ ಎಐ, ಡಿಎಒ, ಡೀಫೈಗಳಿಂದ ಆಗುವ ಸಂಭಾವ್ಯ ಅಪಾಯ
  • ಬಿಎಫ್​ಎಸ್​ಐ ಸೆಕ್ಟರ್​ನಲ್ಲಿ ವಂಚನೆ
  • ಸೈಬರ್ ಫೋರೆನ್ಸಿಕ್ಸ್ ಕ್ಷೇತ್ರದ ಇತ್ತೀಚಿನ ಆವಿಷ್ಕರಣೆಗಳು
  • ಸೈಬರ್ ಥ್ರೆಟ್ ಇಂಟೆಲಿಜೆನ್ಸ್, ಸೋಷಿಯಲ್ ಮೀಡಿಯಾ ಅನಾಲಿಟಿಕ್ಸ್, ಒಎಸ್​​ಐಎನ್​ಟಿ ಟೂಲ್ಸ್ ಬಗ್ಗೆ ಚರ್ಚೆ
  • ತ್ವರಿತ ತಂತ್ರಜ್ಞಾನ ಆವಿಷ್ಕರಣೆಗಳ ಮಧ್ಯೆ ಡಾಟಾ ರಕ್ಷಣೆ ಹೇಗೆ?
  • ಡಾರ್ಕ್ ವೆಬ್ ತನಿಖೆ ವಿಚಾರಗಳು

ಫ್ಯೂಚರ್​ಕ್ರೈಮ್ ಸಮಿಟ್​ನ ಪ್ರಾಯೋಜಕರು

ಪ್ರೋಡಿಸ್ಕವರ್ ಫೋರೆನ್ಸಿಕ್ಸ್, ಎಕ್ಸ್​ಟೆರೋ, ಟ್ರೈನೆಕ್ಸಿಯಾ, ರೀ ಸೆಕ್ಯೂರಿಟಿ, ಇಸೆಕ್​ಫೋರ್ಟ್, ಇನ್ನೇಫು ಲ್ಯಾಬ್ಸ್, ಫೋರೆನ್ಸಿಕ್ಸ್ ಕೇರ್, ಎಂಎಸ್​ಎಬಿ, ಟೆಕ್​ಡಿಫೆನ್ಸ್, ಎಂಫಿಲ್ಟರ್​ಐಟಿ, ನ್ಯಾಂಗಿಯಾ ಆಂಡರ್ಸನ್ ಇಂಡಿಯಾ ಮತ್ತು ಆರ್ಮಾನ್​ಟೆಕ್ ಸಂಸ್ಥೆಗಳು ಈ ಶೃಂಗಸಭೆಯ ಪ್ರಾಯೋಜಕತ್ವ ವಹಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ