ಭಾರತ-ಪಾಕ್​ ಇಬ್ಭಾಗವಾಗಲು ಹಿಂದೂ ಮಹಾಸಭಾ ಕಾರಣ: ವೀರಪ್ಪ ಮೊಯ್ಲಿ ಆರೋಪ

ರಾಮಮಂದಿರ ಉದ್ಘಾಟಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು 11 ದಿನ ಉಪವಾಸ ಮಾಡಿದ್ದರೇ? ಎಂದು ಅನುಮಾನ ವ್ಯಕ್ತಪಡಿಸಿದ ಕೇಂದ್ರ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ವಿವಾದ ಸೃಷ್ಟಿಸಿದ್ದರು. ಇದೀಗ ಭಾರತ-ಪಾಕ್​ ಇಬ್ಭಾಗವಾಗಲು ಹಿಂದೂ ಮಹಾಸಭಾ ಕಾರಣ ಎಂದು ಹೇಳಿದ್ದಾರೆ.

ಭಾರತ-ಪಾಕ್​ ಇಬ್ಭಾಗವಾಗಲು ಹಿಂದೂ ಮಹಾಸಭಾ ಕಾರಣ: ವೀರಪ್ಪ ಮೊಯ್ಲಿ ಆರೋಪ
ವೀರಪ್ಪ ಮೊಯಿಲಿ, ಕಾಂಗ್ರೆಸ್ ಹಿರಿಯ ನಾಯಕ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Feb 14, 2024 | 4:07 PM

ಚಿಕ್ಕಬಳ್ಳಾಫುರ, (ಫೆಬ್ರವರಿ 14): ಭಾರತ-ಪಾಕ್​ (India And pakistan) ಇಬ್ಭಾಗವಾಗಲು ಹಿಂದೂ ಮಹಾಸಭಾ (Hindu mahasabha) ಕಾರಣ. ಭಾರತವನ್ನು ಇಬ್ಭಾಗ ಮಾಡಲು ಹೇಳಿದ್ದೇ ಹಿಂದೂ ಮಹಾಸಭಾ. ದೇಶ ಇಬ್ಭಾಗ ಮಾಡಿ ನಂತರ ನೆಹರು ಬಗ್ಗೆ ಹಿಂದೂಸಭಾ ಅಪಪ್ರಚಾರ ಮಾಡಿದೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಎಂ.ವೀರಪ್ಪ ಮೊಯ್ಲಿ (Veerappa Moily) ಗಂಭೀರ ಆರೋಪ ಮಾಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿಂದು ಮಾತನಾಡಿರುವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಭಾರತದಿಂದ ಪಾಕಿಸ್ತಾನ ಇಬ್ಬಾಗ ಮಾಡಲು ಹೇಳಿದವರೆ ಹಿಂದೂ ಮಹಾ ಸಭಾ. ದೇಶ ಹಿಬ್ಬಾಗ ಮಾಡಿ ನಂತರ ಜವಾಹರ್ ಲಾಲ್ ನೆಹರು ಬಗ್ಗೆ ಹಿಂದೂ ಸಭಾ ಅಪಪ್ರಚಾರ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: 11 ದಿನ ಉಪವಾಸ ಮಾಡಿದ್ರೆ ಮನುಷ್ಯ ಬದುಕಲು ಸಾಧ್ಯವಿಲ್ಲ, ಮೋದಿ ವ್ರತದ ಮೇಲೆ ಮಾಜಿ ಸಿಎಂ ಅನುಮಾನ 

ಭಾರತ ಒಂದು ರಾಷ್ಟ್ರವಾಗಿದ್ದು ಮಹಾರಾಜ ಮಹಾನಂದನ ಕಾಲದಲ್ಲಿ. ಮಹಾನಂದನಿಗೆ ಯಾವ ಬ್ರಾಹ್ಮಣ, ಮಹರ್ಷಿಯ ಸಹಾಯ ಇರಲಿಲ್ಲ. ಮಹಾನಂದ ಅತ್ಯಂತ ಕೆಳಜಾತಿಯವರಾಗಿದ್ದರು. ಮಹಾನಂದ ಕೀಳು ಕುಲದಲ್ಲಿ ಹುಟ್ಟಿದವನು ಎಂದು ಹಿಯಾಳಿಸುತ್ತಿದ್ದೇವೆ. ಮಹಾನಂದನ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದರು

ಇನ್ನು ಇದೇ ವೇಳೆ ಬಿಜೆಪಿ ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳ ಗುರಿ ಇಟ್ಟುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮೊಯ್ಲಿ ರಾಜ್ಯದಲ್ಲಿ ಬಿಜೆಪಿ 28 ಕ್ಷೇತ್ರ ಗೆಲ್ಲಬೇಕು ಎಂದು ಅಮೀತ್ ಶಾ ಹೇಳಿದ್ರೆ ಅದಕ್ಕೆ ವಿರುದ್ದವಾಗ ಜನತೀರ್ಪು ಬರುತ್ತೆ. ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶವೇ ಕಾರಣ ಎಂದಯ ವ್ಯಂಗ್ಯವಾಡಿದರು.

ಮೋದಿ ಉಪವಾಸದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಮೊಯ್ಲಿ

ಇತ್ತೀಚೆಗಷ್ಟೇ ವೀರಪ್ಪ ಮೊಯ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಉಪವಾಸದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅಯೋಧ್ಯೆ ರಾಮಮಂದಿರ ಉದ್ಘಾಟಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು 11 ದಿನ ಉಪವಾಸ ಮಾಡಿದ್ದರೇ? 11 ದಿನಗಳ ಉಪವಾಸ ಆಚರಿಸಿದರೆ ಮನುಷ್ಯ ಜೀವಂತವಾಗಿರುವುದು ಅಸಾಧ್ಯವೆಂದು ವೈದ್ಯರು ಹೇಳಿದ್ದಾರೆ. ವೈದ್ಯರ ಅಭಿಪ್ರಾಯದಂತೆ, ಒಬ್ಬ ವ್ಯಕ್ತಿಯು ಕೇವಲ ತೆಂಗಿನ ನೀರು ಕುಡಿದು ಬದುಕುವುದು ಅಸಾಧ್ಯ. ಆದರೆ ಪ್ರಧಾನಿ ಮೋದಿ ತಾವು 11 ದಿನ ಉಪವಾಸ ಮಾಡುತ್ತಿದ್ದೆ ಮತ್ತು ಅನೇಕ ಸ್ಥಳಗಳಿಗೆ ಭೇಟಿ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ನರೇಂದ್ರ ಮೋದಿ ಅವರು ಉಪವಾಸ ಇದ್ದಂತೆ ಕಾಣಲಿಲ್ಲ ಎಂದು ಹೇಳಿದ್ದರು. ವೀರಪ್ಪ ಮೊಯ್ಲಿ ಅವರ ಈ ಹೇಳಿಕೆ ರಾಷ್ಟ್ರ ಮಟ್ಟದಲ್ಲೂ ಸದ್ದು ಮಾಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ