AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ರಾಮನ ಶ್ಲೋಕ ಹೇಳುತ್ತೇನೆ, ನೀವು ಹೇಳ್ತೀರಾ? ಆರ್​ ಅಶೋಕ್​ಗೆ ಶಾಸಕ ರವಿ ಗಣಿಗ ಸವಾಲು

ನಾನು ರಾಮನ ಶ್ಲೋಕ ಹೇಳುತ್ತೇನೆ, ನೀವು ಹೇಳುತ್ತೀರಾ ಎಂದು ವಿಪಕ್ಷ ನಾಯಕ ಅಶೋಕ್​ಗೆ ಶಾಸಕ ರವಿ ಗಣಿಗ ಸವಾಲು ಹಾಕಿದ್ದಾರೆ. ಹೀಗಾಗಿ ವಿಧಾನಸಭೆಯಲ್ಲಿ ಶ್ರೀರಾಮನ ವಿಚಾರವಾಗಿ ಆರ್.ಅಶೋಕ್​, ಶಾಸಕ ರವಿ ಗಣಿಗ ಮಧ್ಯೆ ಜಟಾಪಟಿ ನಡೆದಿದೆ. ರಾಮನನ್ನ ನಾವು ಪೂಜೆ ಮಾಡುತ್ತೇವೆ, ನೀವೂ ಮಾಡುತ್ತೀರಿ, ಆದರೆ ನೀವು ಸ್ವಲ್ಪ ಜಾಸ್ತಿ ಪ್ರಚಾರ ಕೊಡ್ತೀರಿ, ನಾವು ಕೊಡಲ್ಲ ಅಷ್ಟೇ ಎಂದು ಕಿಡಿಕಾರಿದ್ದಾರೆ.

ನಾನು ರಾಮನ ಶ್ಲೋಕ ಹೇಳುತ್ತೇನೆ, ನೀವು ಹೇಳ್ತೀರಾ? ಆರ್​ ಅಶೋಕ್​ಗೆ ಶಾಸಕ ರವಿ ಗಣಿಗ ಸವಾಲು
ಶಾಸಕ ರವಿ ಗಣಿಗ, ವಿಪಕ್ಷ ನಾಯಕ ಅಶೋಕ್
ಕಿರಣ್​ ಹನಿಯಡ್ಕ
| Edited By: |

Updated on:Feb 19, 2024 | 3:58 PM

Share

ಬೆಂಗಳೂರು, ಫೆಬ್ರವರಿ 14: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಮ ರಾಜಕೀಯ ಜೋರಾಗುತ್ತಿದೆ. ಇತ್ತ ವಿಧಾನಸಭೆಯಲ್ಲಿ ಶ್ರೀರಾಮನ ವಿಚಾರವಾಗಿ ವಿಪಕ್ಷ ನಾಯಕ ಅಶೋಕ್ (R Ashok)​ ಮತ್ತು ಶಾಸಕ ರವಿ ಗಣಿಗ ನಡುವೆ ಜಟಾಪಟಿ ನಡೆದಿದೆ. ನಾನು ರಾಮನ ಶ್ಲೋಕ ಹೇಳುತ್ತೇನೆ, ನೀವು ಹೇಳುತ್ತೀರಾ ಎಂದು ವಿಪಕ್ಷ ನಾಯಕ ಅಶೋಕ್​ಗೆ ಶಾಸಕ ರವಿ ಗಣಿಗ ಸವಾಲು ಹಾಕಿದ್ದಾರೆ. ರಾಮ-ಸೀತೆ ಬಗ್ಗೆ ಕೆಟ್ಟದಾಗಿ ಯಾರೂ ಮಾತಾಡಬಾರದು. ಕೆಟ್ಟದಾಗಿ ಮಾತಾಡಿದ್ದರೆ ಅದು ಕಡತಕ್ಕೆ ಹೋಗಬಾರದು. ರಾಮನನ್ನ ನಾವು ಪೂಜೆ ಮಾಡುತ್ತೇವೆ, ನೀವೂ ಮಾಡುತ್ತೀರಿ. ಆದರೆ ನೀವು ಸ್ವಲ್ಪ ಜಾಸ್ತಿ ಪ್ರಚಾರ ಮಾಡುತ್ತೀರಿ, ನಾವು ಮಾಡಲ್ಲ ಅಷ್ಟೇ ಎಂದು ಸದನದಲ್ಲಿ ಕಾಂಗ್ರೆಸ್​ ಶಾಸಕ ದೇಶಪಾಂಡೆ ಕೈ ಮುಗಿದು ಹೇಳಿದ್ದಾರೆ.

ಸರ್ಕಾರ ಚಕ್ರ ಕಿತ್ತು ಹೋದ ಗಾಡಿಯ ಥರ ಆಗಿದೆ: ಆರ್​. ಅಶೋಕ್ ಲೇವಡಿ

ವಿಪಕ್ಷ ನಾಯಕ ಆರ್​​ ಅಶೋಕ್ ಮಾತನಾಡಿ, ಸರ್ಕಾರ ಚಕ್ರ ಕಿತ್ತು ಹೋದ ಗಾಡಿಯ ಥರ ಆಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ನಡುವೆ ಕಿತ್ತಾಟ ಇದೆ. ಗೃಹ ಸಚಿವ ಪರಮೇಶ್ವರ್, ಸಚಿವ  ಎಂ.ಬಿ.ಪಾಟೀಲ್​ ಗೊಂದಲಕ್ಕೊಳಗಾಗಿದ್ದಾರೆ. ನಾವು ಎತ್ತ ಹೋಗೋದು ಅಂತಾ ಗೊಂದಲ ಆಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಆಡಳಿತದಲ್ಲಿ ಕ್ರೈಮ್ ಸಿಟಿಯಾಗುತ್ತಿದೆ ಬೆಂಗಳೂರು: ಪ್ರತಿಪಕ್ಷ ನಾಯಕ ಆರ್ ಅಶೋಕ ವಾಗ್ದಾಳಿ

ಐದಲ್ಲ, ಐವತ್ತು ಗ್ಯಾರಂಟಿ ಕೊಡಿ, ನಮ್ಮ ಅಭ್ಯಂತರ ಇಲ್ಲ. ಆದರೆ ಗ್ಯಾರಂಟಿ ಕೊಟ್ಟಿದ್ದೇವೆ ಅಂತಾ ಮೋಸ ಮಾಡುತ್ತಿದ್ದೀರಾ. ಉಚಿತ ಬಸ್​ನಿಂದ ಶಾಲಾ ಮಕ್ಕಳಿಗೆ ಸಮಸ್ಯೆಯಾಗಿದೆ. ಮಕ್ಕಳು ನಡೆದುಕೊಂಡು, ಜೆಸಿಬಿಗಳಲ್ಲಿ ಹೋಗುತ್ತಿದ್ದಾರೆ. ಮಹಿಳೆಯರಿಗೆ ಎರಡು ಸಾವಿರ ರೂ. ಹಣ ಸರಿಯಾಗಿ ಸಿಕ್ಕಿಲ್ಲ. ಒಂದು ತಿಂಗಳು ಕೊಟ್ಟರೆ, ಮೂರು ತಿಂಗಳು ಹಣ ಹಾಕಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಕೆರಗೋಡು ಹನುಮಧ್ವಜ ವಿಚಾರವಾಗಿ ವಾಕ್ಸಮರ

ಮಂಡ್ಯ ಜಿಲ್ಲೆಯ ಕೆರಗೋಡು ಹನುಮಧ್ವಜ ವಿಚಾರವಾಗಿ ವಾಕ್ಸಮರ ನಡೆದಿದ್ದು, ಹನುಮಧ್ವಜವನ್ನು ಪೊಲೀಸರ ಮೂಲಕ ಸರ್ಕಾರ ತೆಗೆಸಿದೆ ಎಂದು ಆರ್‌.ಅಶೋಕ್ ಆರೋಪಿಸಿದ್ದಾರೆ. ಆರ್​. ಅಶೋಕ್ ಆರೋಪಕ್ಕೆ ಕಾಂಗ್ರೆಸ್​ ಸದಸ್ಯರಿಂದ ಆಕ್ಷೇಪ, ಗದ್ದಲ, ಕೋಲಾಹಲ ಉಂಟಾಗಿತ್ತು.

ಇದನ್ನೂ ಓದಿ: Karnataka Budget Session: ಕಾನೂನು ಸುವ್ಯವಸ್ಥೆ ಮೇಲೆ ಚರ್ಚೆಗೆ ಆಗ್ರಹಿಸಿದ ಅಶೋಕ, ನಿಯಮದ ತೊಡಕು ವಿವರಿಸಿದ ಪರಮೇಶ್ವರ್

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿರಿಂದ ಆಕ್ಷೇಪ ವ್ಯಕ್ತಪಡಿಸಿದ್ದು, ರಾಷ್ಟ್ರಧ್ವಜ ಕಿತ್ತುಹಾಕುವ ಹೇಳಿಕೆ ಕೊಡುತ್ತೀರ, ತಾಲಿಬಾನ್ ಧ್ವಜ ಅಂತೀರಿ, ನಿಮ್ಮದು ಸಂವಿಧಾನ ವಿರೋಧಿ ಹೇಳಿಕೆ ಅಲ್ವಾ ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.

ಈ ವೇಳೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಕಿಡಿಕಾರಿದ್ದು, ನಿಮಗೆ ಹನುಮ ಧ್ವಜ ಬೇಕಾ?, ರಾಷ್ಟ್ರ ಧ್ವಜ ಬೇಕಾ ಅಂತಾ ಹೇಳಲಿ ಎಂದು ಆರ್‌.ಅಶೋಕ್‌ಗೆ ಆಗ್ರಹಿಸಿದ್ದಾರೆ. ಈ ವೇಳೆ ರಾಷ್ಟ್ರಧ್ವಜದ ವಿರುದ್ಧ ಬಿಜೆಪಿ ಹೋರಾಟವೇ ಎಂದು ರವಿ ಗಣಿಗ ಹೇಳಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ಯುಟಿ ಖಾದರ್​, ರಾಷ್ಟ್ರಧ್ವಜಕ್ಕೆ ಯಾರೂ ಅಪಮಾನ ಮಾಡಬಾರದು. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದರೆ ಕ್ರಮ ಆಗಲಿ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:01 pm, Wed, 14 February 24