AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Delhi World Book Fair 2024: ದೆಹಲಿಯಲ್ಲಿ ವಿಶ್ವ ಪುಸ್ತಕ ಮೇಳ, ಇಲ್ಲಿ ಭಾಷೆಗಳಿಗೆ ಯಾವುದೇ ಅಡ್ಡಿಯಿಲ್ಲ

World Book Fair 2024: ಈ ವಾರ ದೆಹಲಿಯಲ್ಲಿ ವಿಶ್ವ ಪುಸ್ತಕ ಮೇಳ ನಡೆಯಲಿದೆ. ಅನೇಕ ಸಾಹಿತಿಗಳು, ಪ್ರತಕರ್ತರು, ಚಿಂತಕರು ಈ ಕಾರ್ಯಕ್ರದಲ್ಲಿ ಭಾಗಿಸಿದರು. ಒಂದು ರೀತಿಯಲ್ಲಿ ಇದು ಚಿಂತಕರ ಚಾವಡಿಯಾಗಿದೆ. ಇಲ್ಲಿ ಎಲ್ಲ ರೀತಿಯ ಪುಸ್ತಕಗಳನ್ನು ಓದಬಹುದು. ಮಕ್ಕಳು, ಕಿರಿಯರು ಹಿರಿಯರು ಎಲ್ಲರಿಗೂ ಓದುವ ಪುಸ್ತಕಗಳನ್ನು ಪ್ರದರ್ಶನ ಮಾಡಲಾಗಿದೆ. ಅನೇಕ ಸಂವಾದ ಕಾರ್ಯಕ್ರಮಗಳನ್ನು ಇಲ್ಲಿ ಮಾಡಲಾಗಿದೆ.

Delhi World Book Fair 2024: ದೆಹಲಿಯಲ್ಲಿ ವಿಶ್ವ ಪುಸ್ತಕ ಮೇಳ, ಇಲ್ಲಿ ಭಾಷೆಗಳಿಗೆ ಯಾವುದೇ ಅಡ್ಡಿಯಿಲ್ಲ
ಅಕ್ಷಯ್​ ಪಲ್ಲಮಜಲು​​
|

Updated on: Feb 16, 2024 | 4:10 PM

Share

ದೆಹಲಿಯಲ್ಲಿ ವಿಶ್ವ ಪುಸ್ತಕ ಮೇಳ (World Book Fair 2024) ನಡೆಯುತ್ತಿದೆ. ಇಲ್ಲಿ ಎಲ್ಲ ರೀತಿಯ ಪುಸ್ತಕಗಳನ್ನು ನೀವು ಪಡೆಯಬಹುದು. ಎಲ್ಲಾ ಪ್ರಕಾರಗಳ, ಎಲ್ಲ ಭಾಷೆಗಳ, ಎಲ್ಲ ವಿಷಯಗಳನ್ನು ಒಳಗೊಂಡಂತೆ ಇಲ್ಲಿ ಪ್ರದರ್ಶನ ಮಾಡಲಾಗಿದೆ. ಕಾಲ್ಪನಿಕ, ಮಕ್ಕಳ ಪುಸ್ತಕಗಳು, ಆಧ್ಯಾತ್ಮಿಕತೆ, ಯೋಗ, ಆರೋಗ್ಯ, ಪುರಾಣ, ವಿಜ್ಞಾನ ಮತ್ತು ತಂತ್ರಜ್ಞಾನ, ವ್ಯಕ್ತಿತ್ವ ಅಭಿವೃದ್ಧಿ, ವ್ಯಾಪಾರ, ಜೀವನಚರಿತ್ರೆ ಮತ್ತು ಆತ್ಮಚರಿತ್ರೆ, ದೇಶಭಕ್ತಿ, ಕಲೆ, ಸಂಸ್ಕೃತಿ, ಸ್ವ-ಸಹಾಯ, ಪಠ್ಯಪುಸ್ತಕಗಳು ಇನ್ನು ಅನೇಕ ಬಗೆಯ ಪುಸ್ತಕಗಳು ಇಲ್ಲಿ ಲಭ್ಯವಿದೆ.

ಕಿರಿಯರಿಂದ ಹಿರಿಯರವರೆಗೆ, ಪೋಷಕರಿಂದ ಶಿಕ್ಷಕರವರೆಗೆ, ಮಕ್ಕಳಿಂದ ಅವರ ಅಜ್ಜಿಯರವರೆಗೆ  ಎಲ್ಲಾ ವಯಸ್ಸಿನ ಓದುಗರು ಪುಸ್ತಕ ಮೇಳಕ್ಕೆ ಭೇಟಿ ನೀಡುತ್ತಿದ್ದಾರೆ. ಇದಕ್ಕಾಗಿ ದೊಡ್ಡ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ಈ ವಾರಾದ್ಯಂತವರೆಗೆ ಈ ಪುಸ್ತಕ ಮೇಳ ನಡೆಯಲಿದೆ. ಇದಕ್ಕಾಗಿ ಐದು ವೇದಿಗಳನ್ನು ನಿರ್ಮಾಣ ಮಾಡಲಾಗಿದೆ.

ಇಲ್ಲಿ ಅನೇಕ ರೀತಿಯ ಓದುಗರು ಬರುತ್ತಾರೆ ಅವರನ್ನು ಆರ್ಕಷಿಸುವ ಪುಸ್ತಕಗಳನ್ನು ಇಲ್ಲಿ ಪ್ರದರ್ಶನ ಮಾಡಲಾಗಿದೆ. ಜತೆಗೆ ಸಂಸ್ಕೃತಿಗಳ ಬಗ್ಗೆ ತಿಳಿಸುವ ಪುಸ್ತಕಗಳು ಕೂಡ ಇಲ್ಲಿದೆ. ಹಾಗೂ ಬೇರೆ ಬೇರೆ ಪ್ರಕಾಶಕರು ಬರೆದಿರುವ ಪುಸ್ತಕಗಳನ್ನು ಇಲ್ಲಿ ಪ್ರದರ್ಶನ ಮಾಡಲಾಗಿದೆ. ಈ ಬಾರಿ ಮಕ್ಕಳು ಮತ್ತು ಯುವಕರಲ್ಲಿ ಪುಸ್ತಕಗಳ ಬಗ್ಗೆ ಆಸಕ್ತಿ ಹೆಚ್ಚಾಗಿದೆ. ಮಕ್ಕಳು ರಾಮಾಯಣ ಮತ್ತು ಮಹಾಭಾರತಗಳನ್ನು ಓದಲು ಬಯಸುತ್ತಾರೆ ಮತ್ತು ಯುವಕರು ತಮ್ಮ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಪ್ರಾದೇಶಿಕ ಭಾಷೆಗಳಲ್ಲಿ ಪ್ರಕಟವಾದ ಪುಸ್ತಕಗಳನ್ನು ಕೇಳುತ್ತಿದ್ದಾರೆ ಎಂದು ಪುಸ್ತಕ ಮಾರಾಟಗಾರು ಹೇಳುತ್ತಾರೆ.

ನವದೆಹಲಿ ವಿಶ್ವ ಪುಸ್ತಕ ಮೇಳದಲ್ಲಿ ಭಾಷೆ ಅಡ್ಡಿಯಿಲ್ಲ

ಇಂಟರ್ನ್ಯಾಷನಲ್ ಈವೆಂಟ್ಸ್ ಕಾರ್ನರ್‌ನಲ್ಲಿ, ಸ್ಪೇನ್‌ ನಿಯೋಗದಿಂದ ಸ್ಪ್ಯಾನಿಷ್ ಭಾಷೆ ಮತ್ತು ಪ್ರಕಾಶನದ ಕುರಿತು ಸಂವಾದಾತ್ಮಕ ಅಧಿವೇಶನವನ್ನು ಆಯೋಜಿಸಲಾಯಿತು. ಮಧ್ಯಾಹ್ನ, ಆಸ್ಟ್ರಿಯನ್ ರಾಯಭಾರ ಕಚೇರಿಯು ಜಾಗತಿಕ ಮತ್ತು ಡಿಜಿಟಲ್ ಯುಗದಲ್ಲಿ ಆಸ್ಟ್ರಿಯನ್ ಸಾಹಿತ್ಯದ ವಿಕಸನ ಸ್ವರೂಪದ ಕುರಿತು ಚರ್ಚೆಯನ್ನು ಆಯೋಜಿಸಿತು. ಇನ್ಸ್ಟಿಟ್ಯೂಟ್ ಫಾರ್ ಲಿಟರರಿ ಟ್ರಾನ್ಸ್ಲೇಶನ್, ರಷ್ಯಾ ಕ್ಲಾಸಿಕ್ ರಷ್ಯನ್ ಸಾಹಿತ್ಯದ ಓದುಗರಿಂದ ಅನೇಕ ಪ್ರಶ್ನೋತ್ತರ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು.

ಮಕ್ಕಳಿಗಾಗಿ ಹೊಸ ರೂಪದ ಪುಸ್ತಕಗಳ ಪರಿಚಯ

ಮಕ್ಕಳ ಪ್ರಕಾಶಕರನ್ನು ಒಳಗೊಂಡ ಪುಸ್ತಕಗಳನ್ನು ಪ್ರದರ್ಶನ ಮಾಡಲಾಗಿತ್ತು. ಇದರಲ್ಲಿ ಪ್ರಾದೇಶಿಕ ಭಾಷೆಗಳಿಗೆ ಪ್ರಾಮುಖ್ಯತೆ ನೀಡಲಾಗಿತ್ತು. ಬುಂದೇಲಖಂಡಿ, ಗೊಂಡಿ ಮತ್ತು ಕುರ್ಕು ಮುಂತಾದ ಉಪಭಾಷೆಗಳಲ್ಲಿ ನವೀನ ಕಥೆಗಳು ಮತ್ತು ಕವಿತೆಗಳನ್ನು ರಚಿಸಲಾಗಿದೆ. ಇದನ್ನು ಕೂಡ ಇಲ್ಲಿ ಪ್ರದರ್ಶನ ಮಾಡಲಾಗಿತ್ತು. ದಯೆ ಮತ್ತು ಸಹಾನುಭೂತಿಯ ಸಂದೇಶವನ್ನು ಸಾರುವ ಮಕ್ಕಳ ಪುಸ್ತಕಗಳನ್ನು ಇಲ್ಲಿ ಕಾಣಬಹುದು. ಯುವ ಪ್ರೇಕ್ಷಕರಿಗೆ ಜೀವನದಲ್ಲಿ ನೈತಿಕ ಮೌಲ್ಯಗಳ ಮಹತ್ವವನ್ನು ತಿಳಿಸಲು ಶಕುಂತಲಾ ಕಲ್ರಾ ಅವರು “ಪತಂಗ್ ಔರ್ ದೋರಿ”, “ಮೇರಿ ಅಮ್ಮಾ ಮೇರೆ ಪಾಪಾ” ಎಂಬ ಹಿಂದಿ ಕವನಗಳನ್ನು ಪ್ರದರ್ಶನ ನೀಡಲಾಗಿತ್ತು.

ಲೇಖಕರ ಸಂವಾದ ಕಾರ್ಯಕ್ರಮದಲ್ಲಿ ಬ್ಯುಸಿನೆಸ್ ವರ್ಲ್ಡ್‌ನ ಅಧ್ಯಕ್ಷ ಮತ್ತು ಮುಖ್ಯ ಸಂಪಾದಕ ಡಾ. ಅಣ್ಣುರಾಗ್ ಬಾತ್ರಾ ಅವರು ‘ಕೃತಕ ಬುದ್ಧಿಮತ್ತೆಯ ಆಧುನಿಕ ಯುಗದಲ್ಲಿ ಪತ್ರಕರ್ತರ ಜೀವನ’ ವಿಷಯದ ಬಗ್ಗೆ ಚರ್ಚೆ ನಡೆಸಿದರು. ಬುದ್ಧಿಮತ್ತೆಯು ಅನೇಕ ವಿಚಾರಗಳಲ್ಲಿ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ. ಭಾರತವು ತನ್ನ ಡಿಜಿಟಲ್ ಮೂಲಸೌಕರ್ಯ ಪರಾಕ್ರಮದಲ್ಲಿ ಹೇಗೆ ವಿಕಸನಗೊಂಡಿದೆ ಎಂಬ ಬಗ್ಗೆ ತಿಳಿಸಿದರು. ಇನ್ನು ಈ ಪುಸ್ತಕ ಮೇಳ ಪುಸ್ತಕಗಳು ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಉತ್ತಮ ಮಾರ್ಗವಾಗಿದೆ ಎಂದರು.

ಇದನ್ನೂ ಓದಿ: ನಾಳೆ ಭಾರತದ ಹವಾಮಾನ ಉಪಗ್ರಹವನ್ನು ಹೊತ್ತು ನಭಕ್ಕೆ ಚಿಮ್ಮಲಿದೆ Naughty Boy

ಪುಸ್ತಕ ಬಿಡುಗಡೆ ಕಾರ್ಯಕ್ರಮ – ‘ಕ್ರಾಂತದರ್ಶಿ ಮಹಾತ್ಮ ಬಸವೇಶ್ವರ’

ಡಾ. ಶ್ಯಾಮ ಘೋನ್ಸೆ ಅವರ ಪುಸ್ತಕ ‘ಕ್ರಾಂತದರ್ಶಿ ಮಹಾತ್ಮ ಬಸವೇಶ್ವರ’ ಮತ್ತು ವರ್ಷಾ ಪರ್ಗಟ್ ಅವರ ‘ಶ್ರೀ ಕೃಷ್ಣ’ ಪುಸ್ತಕವನ್ನು ಶ್ರೀ ವಿನೋದ್ ತಾವಡೆ ಅವರು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಸುಧೀರ್ ಸಚ್ಚಿದಾನಂದ ಮುಂಗಂಟಿವಾರ್, ಅರಣ್ಯ, ಸಾಂಸ್ಕೃತಿಕ ವ್ಯವಹಾರಗಳು ಮತ್ತು ಮೀನುಗಾರಿಕೆ ಸಚಿವರು ಸಮ್ಮುಖದಲ್ಲಿ ಇದನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಿನೋದ್ ತಾವ್ಡೆ ಅವರು, ಪ್ರತಿಯೊಬ್ಬ ಮಹಾನ್ ವ್ಯಕ್ತಿಯ ಚಿಂತನೆಗಳು ತಮ್ಮಲ್ಲಿ ಸ್ಫೂರ್ತಿದಾಯಕವಾಗಿವೆ. ಮಹಾತ್ಮ ಬಸವೇಶ್ವರರ ಅನೇಕ ವಚನಗಳು ಇಂದಿನ ಕಾಲಕ್ಕೂ ಪ್ರಸ್ತುತವಾಗಿವೆ. ಇಂದಿನ ಯುವಕರು ಉತ್ತಮ ಸಾಹಿತ್ಯವನ್ನು ಓದುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು