ದೆಹಲಿ: ಪಂಜಾಬ್ ರೈತರ ಚಳವಳಿಗೆ ಬೆಂಬಲ ನೀಡಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಾಳೆ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಆಪ್ ಕಾರ್ಯಕರ್ತರಿಗೂ ಉಪವಾಸದಲ್ಲಿ ಭಾಗಿಯಾಗಲು ಕರೆ ಕೊಟ್ಟಿದ್ದಾರೆ.
ನಮ್ಮ ಬಳಿ ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ತೆರಳಿ ಬೆಂಬಲ ಸೂಚಿಸಲು ಸಾಧ್ಯವಾಗದಿರಬಹುದು. ಆದರೆ, ನಮ್ಮ ಮನೆಗಳಿಂದಲೇ ರೈತರನ್ನು ಬೆಂಬಲಿಸುವ ಅವಕಾಶವಿದೆ ಎಂದಿರುವ ಅವರು, ತಮ್ಮ ಪಕ್ಷದ ಕಾರ್ಯಕರ್ತರ ಬಳಿ ಒಂದು ದಿನ ಉಪವಾಸವಿರಲು ಮನವಿ ಮಾಡಿದ್ದಾರೆ.
ರೈತರನ್ನು ಬೆಂಬಲಿಸಿದವರು ದೇಶ ವಿರೋಧಿಗಳೇ?
ರೈತರು ನಡೆಸುತ್ತಿರುವ ಚಳವಳಿಯನ್ನು ಕೆಲವರು ದೇಶ ವಿರೋಧಿಯೆಂದು ಕರೆದಿರುವುದನ್ನು ಖಂಡಿಸಿರುವ ಕೇಜ್ರಿವಾಲ್, 2011ರಲ್ಲಿ ನಡೆದ ಅಣ್ಣಾ ಹಜಾರೆಯವರ ಭೃಷ್ಟಾಚಾರ ವಿರೋಧಿ ಚಳವಳಿಯನ್ನು ನೆನಪಿಸಿಕೊಂಡಿದ್ದಾರೆ. ಆಗ ಕಾಂಗ್ರೆಸ್, ಚಳವಳಿಯನ್ನು ದೇಶ ವಿರೋಧಿಯೆಂದು ಟೀಕಿಸಿತ್ತು. ಈಗ ಬಿಜೆಪಿ ದೆಹಲಿ ಚಲೋವನ್ನು ದೇಶ ವಿರೋಧಿಯೆಂದು ಜರಿಯುತ್ತಿದೆ. ಹಾಗಾದರೆ, ದೆಹಲಿ ಚಲೋ ಬೆಂಬಲಿಸಿರುವ ಮಾಜಿ ಸೈನಿಕರು, ಕ್ರೀಡಾಪಟುಗಳು, ಕಲಾವಿದರು, ವೈದ್ಯರು, ವಕೀಲರು, ಉದ್ಯಮಿಗಳು ಕೂಡ ದೇಶ ವಿರೋಧಿಗಳೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
Dilli Chalo | ರೈತರ ಪ್ರತಿಭಟನೆಗೆ ಪಂಜಾಬ್, ಹರ್ಯಾಣದ ಗೃಹಿಣಿಯರ ಬೆಂಬಲ
Published On - 6:28 pm, Sun, 13 December 20