ಕೇಜ್ರಿವಾಲ್ ದೆಹಲಿಯನ್ನು ಕಸದ ತೊಟ್ಟಿಯಾಗಿ ಮಾಡಿದ್ದಾರೆ, ಯಮುನಾ ನೀರನ್ನು ಕಲುಷಿತಗೊಳಿಸಿದ್ದಾರೆ; ಅಮಿತ್ ಶಾ

ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ರ್ಯಾಲಿ ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಟೀಕಿಸಿದ್ದಾರೆ. ಕೇಜ್ರಿವಾಲ್ ದೆಹಲಿಯನ್ನು "ಕಸ ತೊಟ್ಟಿ"ಯನ್ನಾಗಿ ಮಾಡಿ ಯಮುನಾ ನದಿಯನ್ನು ಕಲುಷಿತಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆಗಳ ದಿನಾಂಕಗಳನ್ನು ಘೋಷಿಸಿದಾಗಿನಿಂದ ಎಲ್ಲಾ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ರೋಹಿಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜೇಂದ್ರ ಗುಪ್ತಾ ಅವರನ್ನು ಬೆಂಬಲಿಸಿ ಬೃಹತ್ ಸಭೆಯನ್ನುದ್ದೇಶಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಮಾತನಾಡಿದರು.

ಕೇಜ್ರಿವಾಲ್ ದೆಹಲಿಯನ್ನು ಕಸದ ತೊಟ್ಟಿಯಾಗಿ ಮಾಡಿದ್ದಾರೆ, ಯಮುನಾ ನೀರನ್ನು ಕಲುಷಿತಗೊಳಿಸಿದ್ದಾರೆ; ಅಮಿತ್ ಶಾ
Home Minister Amit Shah

Updated on: Jan 30, 2025 | 5:42 PM

ನವದೆಹಲಿ: ದೆಹಲಿಯ ರೋಹಿಣಿಯಲ್ಲಿ ನಡೆದ ಸಾರ್ವಜನಿಕ ಚುನಾವಣಾ ರ್ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ತೀವ್ರ ದಾಳಿ ನಡೆಸಿದ್ದಾರೆ. ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರದ ವಿರುದ್ಧ ದುರಾಡಳಿತ ಮತ್ತು ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ. ಕಮಲದ ಚಿಹ್ನೆಯ ಮೇಲೆ ಎಷ್ಟು ಬಲವಾಗಿ ಬೆರಳನ್ನು ಒತ್ತಬೇಕೆಂದರೆ ಅದರಿಂದ ಕೇಜ್ರಿವಾಲ್ ಅವರ ‘ಶೀಶ್ ಮಹಲ್’ನ ಗಾಜು ಒಡೆಯಬೇಕು ಎಂದು ಹೇಳಿದ್ದಾರೆ.

“ಕಳೆದ 10 ವರ್ಷಗಳಲ್ಲಿ ಅರವಿಂದ್ ಕೇಜ್ರಿವಾಲ್ ದೆಹಲಿಯನ್ನು ಕಸದ ತೊಟ್ಟಿಯನ್ನಾಗಿ ಮಾಡಿದ್ದಾರೆ. ಯಮುನಾ ನದಿ ಎಂದಿಗಿಂತಲೂ ಹೆಚ್ಚು ಕಲುಷಿತವಾಗಿದೆ ಮತ್ತು ನಗರದ ಮೂಲಸೌಕರ್ಯ ಕುಸಿಯುತ್ತಿದೆ. ದೆಹಲಿಯ ಕಳಪೆ ಒಳಚರಂಡಿ ವ್ಯವಸ್ಥೆ ಮಳೆಗಾಲದಲ್ಲಿ ಹಲವಾರು ಸಾವು-ನೋವುಗಳಿಗೆ ಕಾರಣವಾಗಿದೆ” ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ನಾನೂ ಅದೇ ನೀರು ಕುಡಿದಿದ್ದೇನೆ; ಯಮುನಾ ನದಿ ಕುರಿತ ಕೇಜ್ರಿವಾಲ್ ಆರೋಪಕ್ಕೆ ಪ್ರಧಾನಿ ಮೋದಿ ಆಕ್ರೋಶ

“ಕಳೆದ ಕೆಲವು ವರ್ಷಗಳಲ್ಲಿ ದೆಹಲಿಯಲ್ಲಿ ಮಳೆಯಿಂದಾಗಿ 35ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದು ಬೇರೆಲ್ಲಿಯೂ ಸಂಭವಿಸಿಲ್ಲ. ಆದರೂ ಆಮ್ ಆದ್ಮಿ ಪಕ್ಷ ಇದರ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಬದಲು ನೆಪಗಳನ್ನು ಹೇಳುತ್ತಲೇ ಇದೆ” ಎಂದು ಅವರು ಟೀಕಿಸಿದ್ದಾರೆ.


ದೆಹಲಿಯಲ್ಲಿ 500 ರೂ.ಗೆ ಎಲ್‌ಪಿಜಿ ನೀಡಲಾಗುವುದು. ಹೋಳಿ ಮತ್ತು ದೀಪಾವಳಿಯಂದು ಒಂದು ಸಿಲಿಂಡರ್ ಅನ್ನು ಉಚಿತವಾಗಿ ನೀಡಲಾಗುವುದು. ಬಿಜೆಪಿ ಸರ್ಕಾರ ರಚನೆಯಾದ ನಂತರ, ಪ್ರತಿ ತಿಂಗಳ 5ನೇ ತಾರೀಖಿನ ಪ್ರತಿಯೊಬ್ಬ ಮಹಿಳೆಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ 2,500 ರೂ.ಗಳನ್ನು ನೀಡಲು ನಾವು ನಿರ್ಧರಿಸಿದ್ದೇವೆ. ನಮ್ಮ ಸರ್ಕಾರ ಪ್ರತಿ ಗರ್ಭಿಣಿ ಮಹಿಳೆಗೆ 21,000 ರೂ.ಗಳನ್ನು ನೀಡುತ್ತದೆ. ಎಲ್‌ಪಿಜಿ ಸಿಲಿಂಡರ್ 500 ರೂ.ಗೆ ಲಭ್ಯವಿರುತ್ತದೆ ಮತ್ತು ದೀಪಾವಳಿ ಮತ್ತು ಹೋಳಿಯಲ್ಲಿ ಒಂದು ಸಿಲಿಂಡರ್ ಅನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ