AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದ ಜತೆಗಿನ ಗಡಿ ಪರಿಸ್ಥಿತಿ ಕುರಿತು ಕೇಂದ್ರದ ವಿರುದ್ಧ ಅಸಾದುದ್ದೀನ್ ಓವೈಸಿ ವಾಗ್ದಾಳಿ

ಚೀನಾ ಜತೆಗಿನ ಗಡಿ ಪರಿಸ್ಥಿತಿ ಕುರಿತು ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚೀನಾದ ಜತೆಗಿನ ಗಡಿ ಪರಿಸ್ಥಿತಿ ಕುರಿತು ಕೇಂದ್ರದ ವಿರುದ್ಧ ಅಸಾದುದ್ದೀನ್	ಓವೈಸಿ ವಾಗ್ದಾಳಿ
Asaduddin OwaisiImage Credit source: ANI
Follow us
TV9 Web
| Updated By: ನಯನಾ ರಾಜೀವ್

Updated on: Dec 15, 2022 | 11:10 AM

ಚೀನಾ ಜತೆಗಿನ ಗಡಿ ಪರಿಸ್ಥಿತಿ ಕುರಿತು ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರವು ಜನರನ್ನು ಮತ್ತು ಸಂಸತ್ತನ್ನು ಕತ್ತಲೆಯಲ್ಲಿ ಇರಿಸಿದೆ, ಚೀನಾದ ಸತ್ಯವನ್ನು ಹೊರತರಲು ಏಕೆ ಹೆದರುತ್ತಿದೆ, ಚೀನಾದ ಆಕ್ರಮಣದ ಬಗ್ಗೆ ಸತ್ಯವನ್ನು ಮರೆಮಾಚಲು ಮೋದಿ ಆಸಕ್ತಿ ಏಕೆ ತೋರುತ್ತಿದ್ದಾರೆ ಎಂದು ಓವೈಸಿ ಟ್ವೀಟ್ ಮಾಡಿದ್ದಾರೆ.

ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ಎಲ್​ಎಸಿಯುದ್ದಕ್ಕೂ ಚೀನೀ ಆಕ್ರಮಣದ ಕುರಿತು ಸುದ್ದಿ ತುಣುಕುಗಳನ್ನು ಲಗತ್ತಿಸಿದ್ದಾರೆ. 15ನೇ ಸುತ್ತಿನ ಮಾತುಕತೆಯಲ್ಲಿ ನೀವು ಏನು ಮಾಡಿದ್ದೀರಿ, ಎಲ್ಲಾ ಪಕ್ಷಗಳನ್ನು ಘರ್ಷಣೆ ಸ್ಥಳಕ್ಕೆ ಕೊಂಡೊಯ್ಯಿರಿ ಎಂದರು.

ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನ LAC ಉದ್ದಕ್ಕೂ ಇರುವ ಪ್ರದೇಶವು ಸೂಕ್ಷ್ಮ ವಲಯವಾಗಿದ್ದು, 2006ರಿಂದ ಭಾರತ ಮತ್ತು ಚೀನಾ ಸೇನೆ ಗಸ್ತು ತಿರುಗುತ್ತಿದೆ. ಆದರೆ 2022ರ ಡಿಸೆಂಬರ್ 9 ರಂದು ಚೀನೀ ಸೈನಿಕರು ತವಾಂಗ್ ಸೆಕ್ಟರ್‌ನಲ್ಲಿ LAC ಬಳಿ ಪ್ರವೇಶಿಸಿದ್ದರು.

ಇದರಿಂದ ಕೋಪಗೊಂಡ ಭಾರತೀಯ ಸೈನಿಕರು ಮುನ್ನುಗ್ಗಿದ್ದರು, ಈ ವೇಳೆ ಎರಡೂ ದೇಶಗಳ ಸೈನಿಕರ ನಡುವೆ ಘರ್ಷಣೆ ಉಂಟಾಗಿದೆ. ಭಾರತೀಯ ಸೈನಿಕರು ಚೀನಾ ಸೈನಿಕರ ವಿರುದ್ಧ ತೀವ್ರವಾಗಿ ಹೋರಾಟ ನಡೆಸಿದ್ದರು. ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ತವಾಂಗ್‌ನ ಮುಖಾಮುಖಿ ಪ್ರದೇಶದಲ್ಲಿ ಭಾರತೀಯ ಸೈನಿಕರು ಚೀನಾ ಸೈನಿಕರಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಗಾಯಗೊಂಡಿರುವ ಚೀನಾ ಸೈನಿಕರ ಸಂಖ್ಯೆ ಭಾರತೀಯ ಸೈನಿಕರಿಗಿಂತ ಹೆಚ್ಚಿದೆ.

ಮತ್ತಷ್ಟು ಓದಿ: Jammu-Kashmir: ತವಾಂಗ್ ಮುಖಾಮುಖಿ ಬಳಿಕ ಭಾರತ-ಪಾಕ್ ಗಡಿಯಲ್ಲಿ ಗಸ್ತು ಹೆಚ್ಚಿಸಿದ ಭದ್ರತಾ ಪಡೆ

ಜೂನ್ 15, 2020ರ ಘಟನೆಯ ನಂತರ ಮೊದಲ ಬಾರಿಗೆ ನಡೆದ ಘರ್ಷಣೆ ಇದಾಗಿದೆ. 2020 ರಲ್ಲಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ PLA ಸೈನಿಕರೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದು, ಅನೇಕರು ಗಾಯಗೊಂಡಿದ್ದರು.

ಭಾರತದ ಕಡೆಯಿಂದ ಚೀನಾ ಸೈನಿಕರು ಇಷ್ಟೊಂದು ಪ್ರಬಲ ವಿರೋಧ ಏರ್ಪಡುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಆದರೆ ಈ ಹೋರಾಟದಲ್ಲಿ ಭಾರತೀಯ ಚೀನೀ ಸೈನಿಕರನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಗಿದ್ದಾತೆ. ಈ ಚಕಮಕಿಯಲ್ಲಿ ಚೀನಾ ಸೈನಿಕರು ಭಾರೀ ನಷ್ಟ ಅನುಭವಿಸಿದ್ದಾರೆ.

ಭಾರತ-ಚೀನಾ ಗಡಿಯಲ್ಲಿನ ಪ್ರಕ್ರಿಯೆಯು ಸಂಪೂರ್ಣವಾಗಿ ಸ್ಪಷ್ಟವಾಗಿದೆ. ಎರಡೂ ದೇಶಗಳ ಸೈನಿಕರು ಮುಖಾಮುಖಿಯಾದರೂ ಸಹ ಅವರು ಶಸ್ತ್ರಾಸ್ತ್ರಗಳನ್ನು ಬಳಸುವಂತಿಲ್ಲ ಜೊತೆಗೆ ಜಗಳವಾಡುವಂತಿಲ್ಲ. ಆದರೆ ಒಂದು ವೇಳೆ ನಿಯಮ ಮೀರಿ ಜಗಳ ನಡೆದರೆ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಹಲವು ರೀತಿಯಲ್ಲಿ ಎದುರಾಗುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ