‘ಹೆಮ್ಮೆಯ ಕ್ಷಣ’: ಪುನರ್​ನಿರ್ಮಾಣಗೊಂಡ ಗುಜರಾತ್ ರೈಲ್ವೇ ನಿಲ್ದಾಣದಲ್ಲಿ ಸೆಲ್ಫೀ ಕ್ಲಿಕ್ಕಿಸಿಕೊಂಡ ಅಶ್ವಿನಿ ವೈಷ್ಣವ್

| Updated By: ganapathi bhat

Updated on: Jul 16, 2021 | 6:55 PM

ಗುಜರಾತ್ ಗಾಂಧಿನಗರದ ರೈಲು ನಿಲ್ದಾಣವು ದೇಶದಲ್ಲೇ ಮೊದಲು ಪುನಶ್ಚೇತನಗೊಳಿಸಲ್ಪಟ್ಟ ರೈಲ್ವೇ ನಿಲ್ದಾಣ ಆಗಿದೆ. ಲಕ್ಸುರಿ ಹೋಟೆಲ್, ಪ್ರಾರ್ಥನಾ ಆಲಯ, ಉತ್ತಮ ಲೈಟಿಂಗ್ ವಿನ್ಯಾಸ ಹೊಂದಿರುವ ರೈಲು ನಿಲ್ದಾಣ ಇದಾಗಿದೆ.

‘ಹೆಮ್ಮೆಯ ಕ್ಷಣ’: ಪುನರ್​ನಿರ್ಮಾಣಗೊಂಡ ಗುಜರಾತ್ ರೈಲ್ವೇ ನಿಲ್ದಾಣದಲ್ಲಿ ಸೆಲ್ಫೀ ಕ್ಲಿಕ್ಕಿಸಿಕೊಂಡ ಅಶ್ವಿನಿ ವೈಷ್ಣವ್
ಅಶ್ವಿನಿ ವೈಷ್ಣವ್
Follow us on

ಗಾಂಧಿನಗರ: ಗುಜರಾತ್ ಗಾಂಧಿನಗರ್​ನಲ್ಲಿ ಪುನರ್​ನಿರ್ಮಾಣಗೊಳಿಸಿದ ರೈಲ್ವೇ ನಿಲ್ದಾಣವನ್ನು ಇಂದು (ಜುಲೈ 16) ಉದ್ಘಾಟನೆ ಮಾಡಲಾಗಿದ್ದು, ಹೊಸ ಸ್ವರೂಪ ಪಡೆದಿರುವ ರೈಲು ನಿಲ್ದಾಣದಲ್ಲಿ ಭಾರತದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಸೆಲ್ಫೀ ತೆಗೆದುಕೊಂಡು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಭಿವೃದ್ಧಿ ಹೊಂದಿದ ರೈಲು ನಿಲ್ದಾಣದ ಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ.

ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ರೈಲು ನಿಲ್ದಾಣದ ಟಿಕೆಟ್ ಕೌಂಟರ್ ಸಮೀಪದಲ್ಲಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಹೊಸತಾಗಿ ರೂಪುಗೊಂಡ ರೈಲ್ವೇ ಸ್ಟೇಷನ್​ನನ್ನು ಹೂಗಳಿಂದ ಸಿಂಗರಿಸಲಾಗಿದೆ. ವಿಮಾನ ನಿಲ್ದಾಣದ ಗುಣಮಟ್ಟದಲ್ಲಿ ರೈಲು ನಿಲ್ದಾಣ ಅಭಿವೃದ್ಧಿ ಹೊಂದಿದ್ದು ಸಾರ್ವಜನಿಕರಿಗೆ ಉತ್ತಮ ಅನುಭವ ನೀಡಲಿದೆ.

ಗುಜರಾತ್ ಗಾಂಧಿನಗರದ ರೈಲು ನಿಲ್ದಾಣವು ದೇಶದಲ್ಲೇ ಮೊದಲು ಪುನಶ್ಚೇತನಗೊಳಿಸಲ್ಪಟ್ಟ ರೈಲ್ವೇ ನಿಲ್ದಾಣ ಆಗಿದೆ. ಲಕ್ಸುರಿ ಹೋಟೆಲ್, ಪ್ರಾರ್ಥನಾ ಆಲಯ, ಉತ್ತಮ ಲೈಟಿಂಗ್ ವಿನ್ಯಾಸ ಹೊಂದಿರುವ ರೈಲು ನಿಲ್ದಾಣ ಇದಾಗಿದೆ. ಹೀಗೆ ರೂಪುಗೊಳ್ಳುತ್ತಿರುವ ರೈಲು ನಿಲ್ದಾಣದ ಪೈಕಿ ಇದು ದೇಶದಲ್ಲೇ ಮೊದಲನೆಯದಾಗಿ ಇರಲಿದೆ.

ಈ ರೈಲು ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ವರ್ಚುವಲ್ ವಿಧಾನದ ಮೂಲಕ ಉದ್ಘಾಟಿಸಿದ್ದಾರೆ. ಉದ್ಘಾಟನೆಗೂ ಮುನ್ನ ಸಚಿವರಾದ ಅಶ್ವಿನಿ ವೈಷ್ಣವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ರೈಲು ನಿಲ್ದಾಣವು ಇಡೀ ದೇಶಕ್ಕೆ ಹೆಮ್ಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಶ್ವಿನಿ ವೈಷ್ಣವ್, ಜೂನಿಯರ್ ರೈಲ್ವೇ ಮಿನಿಸ್ಟರ್ ದರ್ಶನ ಜರ್ದೋಶ್ ಅವರೊಂದಿಗೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜೊತೆಗೆ, ಈ ಯೋಜನೆಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ರೈಲು ನಿಲ್ದಾಣದ ಕೆಲವು ಫೋಟೊಗಳನ್ನು ಕೂಡ ಅವರು ಹಂಚಿಕೊಂಡಿದ್ದಾರೆ.

ರೈಲ್ವೇ ಇಲಾಖೆಯ ಟ್ವಿಟರ್ ಖಾತೆಯಲ್ಲಿ ಈ ಮೊದಲು ಗಾಂಧಿನಗರ್ ರೈಲು ನಿಲ್ದಾಣದ ವಿಡಿಯೋ ತುಣುಕನ್ನು ಹಂಚಿಕೊಳ್ಳಲಾಗಿತ್ತು. ರೈಲ್ವೇ ಪ್ಲಾಟ್​ಫಾರಂ ಏರಿಯಾದ ಫರ್ಸ್ಟ್ ಲುಕ್ ಎಂಬಂತೆ 37 ಸೆಕೆಂಡ್​ಗಳ ವಿಡಿಯೋ ಕ್ಲಿಪ್ ಶೇರ್ ಮಾಡಲಾಗಿತ್ತು.

ಇದನ್ನೂ ಓದಿ: ಜವಾಬ್ದಾರಿಯುತ, ಸುರಕ್ಷಿತ ಸಾಮಾಜಿಕ ಜಾಲತಾಣ ವ್ಯವಸ್ಥೆ ಬಗ್ಗೆ ‘ಕೂ’ನಲ್ಲಿ ಪೋಸ್ಟ್; ಐಟಿ ನಿಯಮಗಳಿಗೆ ಬೆಂಬಲ ಸೂಚಿಸಿದ ಅಶ್ವಿನಿ ವೈಷ್ಣವ್

BMRCL: ಬೆಂಗಳೂರು ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಾಗಿ ಅಂಜುಂ ಪರ್ವೇಜ್ ನೇಮಕ