ಒಮ್ಮೆ ಸದ್ದಾಂ ಹುಸೇನ್, ಮತ್ತೊಮ್ಮೆ ಅಮುಲ್ ಬೇಬಿ: ರಾಹುಲ್ ಗಾಂಧಿಯನ್ನು ಗೇಲಿ ಮಾಡಿದ ಹಿಮಾಂತ ಬಿಸ್ವಾ ಶರ್ಮಾ

2011ರಲ್ಲಿ ಅಂದಿನ ಕೇರಳ ಮುಖ್ಯಮಂತ್ರಿ ವಿಎಸ್‌ ಅಚ್ಯುತಾನಂದನ್‌ ಅವರು ರಾಹುಲ್‌ ಗಾಂಧಿ ಅವರನ್ನು ‘ಅಮುಲ್‌ ಬೇಬಿ’ ಎಂದು ಕರೆದಿದ್ದರು. 2019ರಲ್ಲಿ ಕೇರಳದ ವಯನಾಡ್‌ನಿಂದ ರಾಹುಲ್‌ ಗಾಂಧಿ ಅವರನ್ನು ಅಭ್ಯರ್ಥಿಯನ್ನಾಗಿಸಿದಾಗಲೂ ವಿಎಸ್‌ ತಮ್ಮ ಹೇಳಿಕೆಗೆ ಬದ್ಧರಾಗಿದ್ದರು

ಒಮ್ಮೆ ಸದ್ದಾಂ ಹುಸೇನ್, ಮತ್ತೊಮ್ಮೆ ಅಮುಲ್ ಬೇಬಿ: ರಾಹುಲ್ ಗಾಂಧಿಯನ್ನು ಗೇಲಿ ಮಾಡಿದ ಹಿಮಾಂತ ಬಿಸ್ವಾ ಶರ್ಮಾ
ರಾಹುಲ್ ಗಾಂಧಿ- ಹಿಮಂತಚ ಬಿಸ್ವಾ ಶರ್ಮಾ
Follow us
ರಶ್ಮಿ ಕಲ್ಲಕಟ್ಟ
|

Updated on: May 08, 2023 | 6:19 PM

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ (Rahul Gandhi) ಗಡ್ಡ ಬೆಳೆಸಿದ್ದಾಗ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರು ರಾಹುಲ್ ಗಾಂಧಿಯವರ ಲುಕ್ ಬಗ್ಗೆ ಪ್ರತಿಕ್ರಿಯಿಸಿ ಸದ್ದಾಂ ಹುಸೇನ್‌ನಂತೆ ಕಾಣುತ್ತಿದ್ದಾರೆ ಎಂದು ಹೇಳಿದ್ದರು. ಕರ್ನಾಟಕದಲ್ಲಿ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಹಿಮಂತ ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ರಾಹುಲ್ ಗಾಂಧಿ ಒಂದು ದಿನ ಸದ್ದಾಂ ಹುಸೇನ್‌ನಂತೆ ಮತ್ತು ಇನ್ನೊಂದು ದಿನ ಅಮುಲ್ ಬೇಬಿಯಂತೆ ಕಾಣುತ್ತಾರೆ ಎಂದು ಹೇಳಿದ್ದಾರೆ. ಅವರು ಏನು ಬೇಕಾದರೂ ಮಾಡುತ್ತಾರೆ, ಸೋನಿಯಾ ಗಾಂಧಿ (Sonia Gandhi) ಅವರು ಕಳೆದ 20 ವರ್ಷಗಳಿಂದ ರಾಹುಲ್ ಗಾಂಧಿಯನ್ನು ಏನೇನೋ ಮಾಡಲು ಪ್ರಯತ್ನಿಸುತ್ತಿದ್ದಾರೆ.ತಮ್ಮ ಮೇಲೆ ಯಾವುದೇ ಗ್ಯಾರಂಟಿ ಇಲ್ಲದ ವ್ಯಕ್ತಿ, ಅವರು ರಾಜ್ಯಕ್ಕೆ ಏನು ಗ್ಯಾರಂಟಿ ನೀಡುತ್ತಾರೆ ಎಂದು ಹಿಮಂತ ಪ್ರಶ್ನಿಸಿದ್ದಾರೆ.

2011ರಲ್ಲಿ ಅಂದಿನ ಕೇರಳ ಮುಖ್ಯಮಂತ್ರಿ ವಿಎಸ್‌ ಅಚ್ಯುತಾನಂದನ್‌ ಅವರು ರಾಹುಲ್‌ ಗಾಂಧಿ ಅವರನ್ನು ‘ಅಮುಲ್‌ ಬೇಬಿ’ ಎಂದು ಕರೆದಿದ್ದರು. 2019ರಲ್ಲಿ ಕೇರಳದ ವಯನಾಡ್‌ನಿಂದ ರಾಹುಲ್‌ ಗಾಂಧಿ ಅವರನ್ನು ಅಭ್ಯರ್ಥಿಯನ್ನಾಗಿಸಿದಾಗಲೂ ವಿಎಸ್‌ ತಮ್ಮ ಹೇಳಿಕೆಗೆ ಬದ್ಧರಾಗಿದ್ದರು. ರಾಹುಲ್ ಗಾಂಧಿ ಇನ್ನೂ ಅಮುಲ್ ಬೇಬಿ, ಅವರು ಯಾವುದೇ ಬದಲಾವಣೆ ಆಗಿಲ್ಲ ಎಂದು 2019 ರಲ್ಲಿ ವಿಎಸ್ ಹೇಳಿದ್ದರು.

2015ರಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದ ಶರ್ಮಾ, ಕಾಂಗ್ರೆಸ್ ಇಂದು ಕರ್ನಾಟಕಕ್ಕೆ ಗ್ಯಾರಂಟಿ ನೀಡುತ್ತಿದೆ. ಆದರೆ ಗ್ಯಾರಂಟಿ ಕೊಡಲು ನೀವುಯಾರು? ಹಿಮಾಚಲದಲ್ಲೂ ನೀವು ಗ್ಯಾರಂಟಿ ನೀಡಿದ್ದೀರಿ. ರಾಹುಲ್ ಗಾಂಧಿ ಉತ್ತರ ಪ್ರದೇಶದಲ್ಲಿ ಚುನಾವಣೆಯಲ್ಲಿ ಸೋತ ಮತ್ತು ನಂತರ ಕೇರಳಕ್ಕೆ ಓಡಿಹೋದ ವ್ಯಕ್ತಿ ಎಂದಿದ್ದಾರೆ.

ಇದನ್ನೂ ಓದಿ: Manipur Violence: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ: ಜನರ ಪರಿಸ್ಥಿತಿ ಏನು? ಸುಪ್ರೀಂ ಕಳವಳ

ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧದ ಶರ್ಮಾ ಅವರ ವಾಗ್ದಾಳಿಯನ್ನು ಟೀಕಿಸಿದ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಶರ್ಮಾ ಅವರಷ್ಟು ದುರಾಸೆಗಳು ಯಾರಿಗೂ ಇಲ್ಲ. ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷ ತೊರೆದಿದ್ದಾರೆ. ಅವರಿಗೆ ಗುರುತು ನೀಡಿದ್ದ ಪಕ್ಷವನ್ನೇ ಅವರು ತೊರೆದಿದ್ದರು. ಅವರು ಬೆನ್ನುಮೂಳೆಯಿಲ್ಲದ ವ್ಯಕ್ತಿ, ಅವರ ಮೇಲೆ ತನಿಖೆ ಪ್ರಾರಂಭವಾದಾಗ ಅವರು ಬಿಜೆಪಿಯ ಮಡಿಲಿಗೆ ಓಡಿಹೋದರು. ಪಕ್ಷ ಬದಲಿಸಿದ ವ್ಯಕ್ತಿ ಇಂದು ಕಾಂಗ್ರೆಸ್‌ನನ್ನೇ ಪ್ರಶ್ನಿಸುತ್ತಿದ್ದಾರೆ. ಅವರಿಗೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಆರೋಪ ಮಾಡುವ ನೈತಿಕತೆ ಇದೆಯೇ? ಎಂದು ಗುಡುಗಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ