ಗುವಾಹಟಿ: ರಾಹುಲ್ ಗಾಂಧಿ (Rahul Gadhi) ಅವರನ್ನು ಟೀಕಿಸುವ ಭರದಲ್ಲಿ ಅವರಪ್ಪನ ಬಗ್ಗೆ ಹೇಳಿರುವ ಹೇಳಿಕೆಗಳನ್ನು ಅಸ್ಸಾಂ (Assam) ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಶನಿವಾರ ಸಮರ್ಥಿಸಿಕೊಂಡಿದ್ದಾರೆ. ಶರ್ಮಾ ಅವರ ಹೇಳಿಕೆ ಖಂಡಿಸಿದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಪ್ರಧಾನಿ ಮೋದಿ ಅಸ್ಸಾಂ ಸಿಎಂ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ರಾವ್ ಖಂಡನೆಗೆ ಪ್ರತಿಕ್ರಿಯಿಸಿದ ಶರ್ಮಾ, ನನ್ನ ಹೇಳಿಕೆಗೆ ಯಾಕೆ ಇಷ್ಟು ಕೋಪಗೊಂಡಿದ್ದೀರಿ? ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರಶ್ನಿಸಿದ ರಾಹುಲ್ ಗಾಂಧಿ ಬಗ್ಗೆ ಯಾಕೆ ಏನೂ ಹೇಳುತ್ತಿಲ್ಲ ಎಂದು ಕೇಳಿದ್ದಾರೆ . ಉತ್ತರಾಖಂಡದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಹಿಮಂತ ಅವರು ಇತ್ತೀಚೆಗೆ ರಾಹುಲ್ ಗಾಂಧಿಯನ್ನು ಟೀಕಿಸಿದರು. ರಾಹುಲ್ ಅವರು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ನಮ್ಮ ಸೇನೆಯಿಂದ ಪುರಾವೆ ಕೇಳುತ್ತಾರೆ. ಅವರು ರಾಜೀವ್ ಗಾಂಧಿಯವರ ಮಗನೋ ಅಲ್ಲವೋ ಎಂಬುದಕ್ಕೆ ನಾವು ಎಂದಾದರೂ ಪುರಾವೆ ಕೇಳಿದ್ದೇವೆಯೇ? ನಮ್ಮ ಸೇನೆಯಿಂದ ಪುರಾವೆ ಕೇಳಲು ನಿಮಗೆ ಯಾವ ಹಕ್ಕಿದೆ?” ಅವರು ಹೇಳಿದ್ದರು. “ನಮ್ಮ ಸೇನೆಯು ಪಾಕಿಸ್ತಾನದಲ್ಲಿ ದಾಳಿ ನಡೆಸಿದೆ ಎಂದು ಹೇಳಿದರೆ, ಅವರು ಅದನ್ನು ಮಾಡಿದ್ದಾರೆ ಎಂದರ್ಥ, ಇದರಲ್ಲಿ ವಿವಾದ ಏನಿದೆ? ನೀವು ಜನರಲ್ ಬಿಪಿನ್ ರಾವತ್ ಅವರನ್ನು ನಂಬುವುದಿಲ್ಲವೇ? ಅವರು ಸೇನೆಯು ದಾಳಿ ನಡೆಸಿತು ಎಂದು ಹೇಳಿದರೆ ಅದು ಮುಗಿದಿದೆ ಎಂದರ್ಥ. ಇದಕ್ಕೆ ಪುರಾವೆ ಯಾಕೆ ಬೇಕು? ಸೈನಿಕರಿಗೆ ಅಗೌರವ ತೋರಬೇಡಿ. ದೇಶಕ್ಕಾಗಿ ಜನರು ಸಾಯುತ್ತಾರೆ. ಜನರು ಇತರರಿಗಾಗಿ ಬದುಕುವುದಿಲ್ಲ ಆದರೆ ದೇಶಕ್ಕಾಗಿ ಎಂದು ಶರ್ಮಾ ಭಾಷಣದಲ್ಲಿ ಹೇಳಿದ್ದರು.
#WATCH | He (Telangana CM KCR) got agitated by my comment on Congress leader Rahul Gandhi but not by Gandhi’s comment on our Army. This mindset that you can’t criticize the Gandhi family need to be changed: Assam CM Himanta Biswa Sarma pic.twitter.com/URNm0np47e
— ANI (@ANI) February 12, 2022
ರಾಹುಲ್ ಗಾಂಧಿಯ ಅಪ್ಪನ ಬಗ್ಗೆ ಶರ್ಮಾ ಹೇಳಿಕೆಯನ್ನು ಕೆಸಿಆರ್ ಸೇರಿದಂತೆ ಹಲವಾರು ರಾಜಕಾರಣಿಗಳು ಖಂಡಿಸಿದ್ದಾರೆ “ಮೋದಿಜೀ! ಇದು ನಮ್ಮ ಭಾರತೀಯ ಸಂಸ್ಕೃತಿಯೇ? ವೇದಗಳು, ಮಹಾಭಾರತ, ರಾಮಾಯಣ ಮತ್ತು ಭಗವದ್ಗೀತೆಗಳಲ್ಲಿ ಇದನ್ನೇ ಕಲಿಸಲಾಗಿದೆಯೇ? ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾಜಿ ಅವರನ್ನು ಕೇಳುತ್ತಿದ್ದೇನೆ. ಇದು ನಮ್ಮ ಸಂಸ್ಕೃತಿಯೇ? ಒಬ್ಬ ಮುಖ್ಯಮಂತ್ರಿ ಈ ರೀತಿ ಮಾತನಾಡಲು ಸಾಧ್ಯವೇ? ಎಲ್ಲದಕ್ಕೂ ಮಿತಿ ಇದೆ. ನೀವು ಅಹಂಕಾರಿಯೇ? ತಮಾಷೆ ಮಾಡುತ್ತೀರಾ? ಜನರು ಮೌನವಾಗಿರುತ್ತಾರೆ ಎಂದು ನೀವು ಭಾವಿಸುತ್ತೀರಾ?” ಎಂದು ಕೆಸಿಆರ್ ಖಂಡಿಸಿದ್ದರು.
ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಹಿಮಂತ ಅವರನ್ನು ಹೆಸರಿಸದೆ ಅವರ ನಡವಳಿಕೆಯನ್ನು ಖಂಡಿಸಿದ್ದಾರೆ. “ಗಂಭೀರವಾಗಿ ಹೇಳುವುದಾದರೆ, ಒಬ್ಬ ಸಿಎಂ ಕಹಿಯಾದ ಪರಿಣಾಮದ ಆಧಾರದ ಮೇಲೆ ನಿಂದನೀಯ ವೈಯಕ್ತಿಕ ದಾಳಿ ನಡೆಸುವುದನ್ನು ನಿಲ್ಲಿಸಬೇಕು. ನೀವು ಬಯಸಿದ ಉದ್ಯೋಗದೊಂದಿಗೆ ನೀವು ಉತ್ತಮ ಸ್ಥಳದಲ್ಲಿದ್ದೀರಿ, ಆದರೂ ನೀವು ತುಂಬಾ ಕಟುವಾಗಿ ಮತ್ತು ತುಂಬಾ ದ್ವೇಷದಿಂದ ಮಾತನಾಡುತ್ತಿದ್ದೀರಿ. ಇದು ವಿಷಯಲಂಪಟತೆಯನ್ನು ತೋರಿಸುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಹಿಮಂತ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು ನವ ಭಾರತದಲ್ಲಿ ಪ್ರತಿಯೊಬ್ಬರೂ ಉತ್ತರ ಹೇಳಬೇಕಾದವರು ಎಂದು ಹೇಳಿದರು. ಸೇನೆಯನ್ನು ಪ್ರಶ್ನಿಸುವಷ್ಟು ದೊಡ್ಡ ಅಪರಾಧ ಇನ್ನೊಂದಿಲ್ಲ ಎಂಬುದನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು. ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂದು ರಾಹುಲ್ ಗಾಂಧಿ ಬಗ್ಗೆ ಹೇಳಿದ್ದು ಈಗ ಗದ್ದಲ ಸೃಷ್ಟಿಸಿದೆ, ಆದರೆ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ರಾಹುಲ್ ಗಾಂಧಿ ಪ್ರಶ್ನಿಸಿದಾಗ ಇವರೇಕೆ ಸುಮ್ಮನಿದ್ದರು? ಅವರು ಯಾಕೆ ಟ್ವೀಟ್ ಮಾಡುತ್ತಿಲ್ಲ ಎಂದು ಶರ್ಮಾ ಪ್ರಶ್ನಿಸಿದ್ದಾರೆ .
ಗಾಂಧಿಯನ್ನು ಪ್ರಶ್ನಿಸಲಾಗದ ಈ ಮನಸ್ಥಿತಿ ಬದಲಾಗಬೇಕು. ದೇಶ ಪ್ರಜಾಸತ್ತಾತ್ಮಕವಾಗಿರಬೇಕು. ಗಾಂಧಿಯವರನ್ನೂ ಟೀಕಿಸುವ ಧೈರ್ಯ ಜನರಿಗೆ ಇರಬೇಕು. ಅವರು ಸೇನೆ, ಬಿಪಿನ್ ರಾವತ್ ಅವರನ್ನು ಟೀಕಿಸಿದರು. ಅವರ ಕುಟುಂಬ ಸೇನೆಯನ್ನು ಪ್ರಶ್ನಿಸುವ ಸಂಪ್ರದಾಯವನ್ನು ಹೊಂದಿದೆ. ದೇಶ ಬದಲಾಗುತ್ತಿದೆ. ಅವರು ಉತ್ತರಿಸಬೇಕು,’’ ಎಂದು ಅಸ್ಸಾಂ ಮುಖ್ಯಮಂತ್ರಿ ಹೇಳಿದ್ದಾರೆ.
ಇದನ್ನೂ ಓದಿ: ನೀವು ಮತ ಹಾಕುವಾಗ ತಪ್ಪು ಮಾಡಿದರೆ ನಮ್ಮ ರಾಜ್ಯವೂ ಕೇರಳವಾಗುತ್ತದೆ: ಉತ್ತರಪ್ರದೇಶ ಜನರಿಗೆ ಸಿಎಂ ಯೋಗಿ ವಿಡಿಯೋ ಸಂದೇಶ
Published On - 10:31 am, Sun, 13 February 22