ರೂ.163 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಸುಟ್ಟು ಹಾಕಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 18, 2021 | 5:49 PM

ಶನಿವಾರ 802 ಗ್ರಾಂ ಹೆರಾಯಿನ್, 1,205 ಕೆಜಿ ಗಾಂಜಾ, 3ಕೆಜಿ ಓಪಿಯಮ್, 2ಲಕ್ಷಕ್ಕೂ ಹೆಚ್ಚು ಸೈಕೊಟ್ರೋಪಿಕ್ ಮಾತ್ರೆಗಳನ್ನು ಗೊಲಾಘಾಟ್​ನಲ್ಲಿ ಸುಟ್ಟು ಹಾಕಿದ ನಂತರ 3.47 ಕೆಜಿ ಹೆರಾಯಿನ್, 11.88 ಕೆಜಿ ಮಾರ್ಫಿನ್, 103 ಕೆಜಿ ಗಾಂಜಾ, 2.89 ಕೆಜಿ ಮೆತಾಂಪಿಟಮೈನ್ ಹರಳುಗಳು ಮತ್ತಯ 2ಲಕ್ಷಕ್ಕಿಂತ ಹೆಚ್ಚು ಸೈಕೊಟ್ರೋಪಿಕ್ ಮಾತ್ರೆಗಳನ್ನು ಡಿಫುನಲ್ಲಿ ಬೆಂಕಿಗಾಹುತಿ ಮಾಡಿದರು.

ರೂ.163 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಸುಟ್ಟು ಹಾಕಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ
ಕೋಟ್ಯಾಂತರ ರೂಪಾಯಿ ಮೌಲ್ಯದ ಡ್ರಗ್ಸ್​ಗೆ ಕೊಳ್ಳಿಯಿಡುತ್ತಿರುವ ಹಿಮಂತ್ ಬಿಸ್ವ ಶರ್ಮ
Follow us on

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರು ಶನಿವಾರ ಮತ್ತು ರವಿವಾರ ರಾಜ್ಯದ ನಾಲ್ಕು ಬೇರೆ ಬೇರೆ ಭಾಗಗಳಿಗೆ ಭೇಟಿ ನೀಡಿ ಆ ಸ್ಥಳಗಳಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ಒಟ್ಟಾರೆ ರೂ. 163 ಕೋಟಿ ಮೌಲ್ಯದ ಬೇರೆ ಬೇರೆ ಬಗೆಯ ಮಾದಕ ವಸ್ತುಗಳನ್ನು ಬೆಂಕಿಗಾಹುತಿ ಮಾಡಿ ಅಸ್ಸಾಮಿನಲ್ಲಿ ಡ್ರಗ್ಸ್ ದಂಧೆ ನಡೆಯುವುದಕ್ಕೆ ಅವಕಾಶವೇ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಮೇ ತಿಂಗಳಲ್ಲಿ ಅಧಿಕಾರಕ್ಕೆ ವಾಪಸ್ಸು ಬಂದ ಬಿಜೆಪಿ ಸರ್ಕಾರವು ರಾಜ್ಯದ ಕೇಂದ್ರೀಯ ಪ್ರದೇಶದಲ್ಲಿರುವ ದೀಪು, ಗೊಲಾಘಾಟ್, ಬರ್ಹಂಪುರ ಮತ್ತು ಹಜೋಯಿಯಲ್ಲಿ ಅಕ್ರಮ ಡ್ರಗ್ಸ್ ದಂಧೆ ವಿರುದ್ಧ ಅಭಿಯಾನ ನಡೆಸುತ್ತಿದ್ದು ಈ ಸ್ಥಳಗಳಲ್ಲೇ ಶರ್ಮ ಅವರು ಬೃಹತ್ ಮೌಲ್ಯದ ಡ್ರಗ್ಸ್ ಸುಟ್ಟು ಹಾಕಿದ್ದಾರೆ.

‘ಅಕ್ರಮ ಡ್ರಗ್ಸ್ ಮಾರಾಟ ರಾಜ್ಯದಲ್ಲಿ ಒಂದು ಸಾಂಕ್ರಾಮಿಕವಾಗಿ ಮಾರ್ಪಟ್ಟಿದೆ ಅದರಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಅದು ಯುವ ಜನಾಂಗದ ಮೇಲೆ ಮಾರಕ ಪರಿಣಾಮ ಬೀರಿ ಕುಟುಂಬಗಳನ್ನು ಸರ್ವನಾಶ ಮಾಡಿ ಅನೈತಿಕ ಸಾಮಾಜಿಕ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತದೆ,’ ಎಂದು ಶರ್ಮ ರವಿವಾರದಂದು ಬರ್ಹಂಪುರನಲ್ಲಿ ಹೇಳಿದರು.

‘ನಾವು ಅಧಿಕಾರವಹಿಸಿಕೊಂಡ ನಂತರ ಡ್ರಗ್ಸ್ ಪೀಡಿತರಿಗೆ ಮತ್ತು ಅವರ ಕುಟುಂಬಗಳಿಗೆ ಪರಿಹಾರ ಒದಗಿಸುವುದಾಗಿ ಹೇಳಿದ್ದೆವು. ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟವನ್ನು ನಿಲ್ಲಿಸುವುದು ಈ ದಿಶೆಯಲ್ಲಿ ನಮ್ಮ ಮೊದಲ ಪ್ರಯತ್ನವಾಗಿದೆ. ಎರಡನೇಯದ್ದು ಅವು ಸರ್ಕ್ಯುಲೇಟ್​ ಆಗದಂತೆ ತಡೆಯುವುದು ಮತ್ತು ಮೂರನೇಯದ್ದು ಡ್ರಗ್ಸ್ ಪೀಡಿತರಿಗೆ ಪುನರ್​ವಸತಿ ಕಲ್ಪಿಸುವುದು,’ ಎಂದು ಶರ್ಮ ಹೇಳಿದರು.

‘ಮೇ 10 ಮತ್ತು ಜುಲೈ 15 ರ ನಡುವೆ ಪೊಲೀಸರು ನಾರ್ಕೊಟಿಕ್ ಡ್ರಗ್ಸ್ ಮತ್ತು ಸೈಕೊಟ್ರೋಪಿಕ್ ಸಬ್​ಸ್ಟನ್ಸಸ್ ಕಾಯ್ದೆಯಡಿಯಲ್ಲಿ 874 ಪ್ರಕರಣಗಳನ್ನು ದಾಖಲಿಸಿದ್ದಾರೆ ಮತ್ತು 1, 493 ಡ್ರಗ್ ಪೆಡ್ಲರ್​ಗಳನ್ನು ಬಂಧಿಸಿ ಅವರಿಂದ ರೂ.163 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ,’ ಎಂದು ಶರ್ಮ ಹೇಳಿದರು.

27 ಕೆಜಿ ಹೆರಾಯಿನ್, 12,823 ಕೆಜಿ ಗಾಂಜಾ, 41 ಕೆಜಿ ಓಪಿಯಮ್, 78,000 ಕಾಫ್​ ಸಿರಪ್ ಬಾಟಲಿಗಳು, 13 ಲಕ್ಷ ಸೈಕೊಟ್ರೋಪಿಕ್ ಮಾತ್ರೆಗಳು, 3ಕೆಜಿ ಮಾರ್ಫಿನ್, 3ಕೆಜಿ ಮೆತಾಂಪಿಟಮೈನ್ ಹರಳುಗಳು ಮತ್ತು 3,300 ಕೆಜಿ ಪಾಪಿ ಸ್ಟ್ರಾ ಮತ್ತು ರೂ. 1.80 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆಯೆಂದು ಶರ್ಮ ಅವರು ಜುಲೈ 14 ರಂದು ವಿಧಾನ ಸಭೆಗೆ ತಿಳಿಸಿದ್ದರು.

ಶನಿವಾರ 802 ಗ್ರಾಂ ಹೆರಾಯಿನ್, 1,205 ಕೆಜಿ ಗಾಂಜಾ, 3ಕೆಜಿ ಓಪಿಯಮ್, 2ಲಕ್ಷಕ್ಕೂ ಹೆಚ್ಚು ಸೈಕೊಟ್ರೋಪಿಕ್ ಮಾತ್ರೆಗಳನ್ನು ಗೊಲಾಘಾಟ್​ನಲ್ಲಿ ಸುಟ್ಟು ಹಾಕಿದ ನಂತರ 3.47 ಕೆಜಿ ಹೆರಾಯಿನ್, 11.88 ಕೆಜಿ ಮಾರ್ಫಿನ್, 103 ಕೆಜಿ ಗಾಂಜಾ, 2.89 ಕೆಜಿ ಮೆತಾಂಪಿಟಮೈನ್ ಹರಳುಗಳು ಮತ್ತಯ 2ಲಕ್ಷಕ್ಕಿಂತ ಹೆಚ್ಚು ಸೈಕೊಟ್ರೋಪಿಕ್ ಮಾತ್ರೆಗಳನ್ನು ಡಿಫುನಲ್ಲಿ ಬೆಂಕಿಗಾಹುತಿ ಮಾಡಿದರು.

ಇದನ್ನೂ ಓದಿ: Drugs Case ‘ಮೀನು ಹಿಡಿದಿದ್ದಾರೆ, ತಿಮಿಂಗಿಲ ಹಿಡಿಯೋದು ಬಾಕಿ ಇದೆ’ ಎಂದ ಇಂದ್ರಜಿತ್ ಲಂಕೇಶ್