Drugs Case ‘ಮೀನು ಹಿಡಿದಿದ್ದಾರೆ, ತಿಮಿಂಗಿಲ ಹಿಡಿಯೋದು ಬಾಕಿ ಇದೆ’ ಎಂದ ಇಂದ್ರಜಿತ್ ಲಂಕೇಶ್

ಮೀನು ಹಿಡಿದಿದ್ದಾರೆ, ತಿಮಿಂಗಿಲ ಹಿಡಿಯೋದು ಬಾಕಿ ಇದೆ. ಸ್ಯಾಂಡಲ್​ವುಡ್​ನ ನಟಿಯರು ಡ್ರಗ್ ಪೆಡ್ಲರ್​ಗಳಷ್ಟೇ ಅಲ್ಲ, ಡ್ರಗ್ಸ್ ದಂಧೆಯಲ್ಲಿ ಇನ್ನೂ ಹಲವರು ಇದ್ದಾರೆ ಎಂದು ಸಿಸಿಬಿ ವಿಚಾರಣೆಗೆ ಬಂದಿದ್ದ ವೇಳೆ ಇಂದ್ರಜಿತ್ ಲಂಕೇಶ್ ಹೇಳಿಕೆ ನೀಡಿದ್ದಾರೆ.

Drugs Case ‘ಮೀನು ಹಿಡಿದಿದ್ದಾರೆ, ತಿಮಿಂಗಿಲ ಹಿಡಿಯೋದು ಬಾಕಿ ಇದೆ’ ಎಂದ ಇಂದ್ರಜಿತ್ ಲಂಕೇಶ್
ನಿರ್ದೇಶಕ ಇಂದ್ರಜಿತ್ ಲಂಕೇಶ್
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Jan 28, 2021 | 3:31 PM

ಬೆಂಗಳೂರು: ‘ಮೀನು ಹಿಡಿದಿದ್ದಾರೆ, ತಿಮಿಂಗಿಲ ಹಿಡಿಯೋದು ಬಾಕಿ ಇದೆ’ ಎಂದು ಬೆಂಗಳೂರಿನಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಡ್ರಗ್ಸ್ ಕೇಸ್ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಇಂದ್ರಜಿತ್ ಲಂಕೇಶ್​ಗೆ ನಿನ್ನೆ ಸಿಸಿಬಿ ನೋಟೀಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಇಂದ್ರಜಿತ್ ಆಗಮಿಸಿದ್ದರು. ಆದ್ರೆ ಇಂದು ವಿಚಾರಣೆ ನಡೆದಿಲ್ಲ. ಬೇರೊಂದು ದಿನ ನಿಗದಿ ಮಾಡಿ ವಿಚಾರಣೆಗೆ ಬರುವಂತೆ ಸೂಚಿಸುತ್ತೇವೆಂದು ಸಿಸಿಬಿ ತಿಳಿಸಿದೆ.

ಈ ವೇಳೆ ಮಾತನಾಡಿದ ಇಂದ್ರಜಿತ್ ಲಂಕೇಶ್​ ಮೀನು ಹಿಡಿದಿದ್ದಾರೆ, ತಿಮಿಂಗಿಲ ಹಿಡಿಯೋದು ಬಾಕಿ ಇದೆ. ಸ್ಯಾಂಡಲ್​ವುಡ್​ನ ನಟಿಯರು ಡ್ರಗ್ ಪೆಡ್ಲರ್​ಗಳಷ್ಟೇ ಅಲ್ಲ, ಡ್ರಗ್ಸ್ ದಂಧೆಯಲ್ಲಿ ಇನ್ನೂ ಹಲವರು ಇದ್ದಾರೆ ಎಂದು ಹೇಳಿದ್ರು.

ಡಿಸಿಪಿ ಬಸವರಾಜ್ ನಿನ್ನೆ ಕರೆ ಮಾಡಿ ಕರೆದ್ರು. ನಾನು ಕಳೆದ 6 ತಿಂಗಳಿನಿಂದ ಪೊಲೀಸರಿಗೆ ಸಹಕಾರ ನೀಡಿದ್ದೇನೆ. ತನಿಖೆಯಲ್ಲಿ ಕೋಟ್ಯಾಂತರ ಮೌಲ್ಯದ ಡ್ರಗ್ ವಶಪಡಿಸಿಕೊಂಡಿದ್ದಾರೆ. ಸಣ್ಣ ಮೀನನ್ನ ಹಿಡಿದಿದ್ದಾರೆ ದೊಡ್ಡ ತಿಮಿಂಗಿಲ ಹಿಡಿಯೋದು ಬಾಕಿ ಇದೆ. ಪೊಲೀಸರು ತನಿಖೆ ಮಾಡ್ತಿದ್ದಾರೆ ಇನ್ನೂ ಚುರುಕುಗೊಳಿಸ್ತಾರೆ. ನನಗೂ ಹಲವು ವಿಷಯಗಳು ಬಂದಿವೆ. ಒಬ್ಬ ವ್ಯಕ್ತಿಯಾಗಿ, ನಿರ್ದೇಶಕನಾಗಿ ನಾನು ಮಾಹಿತಿಯನ್ನ ಕೊಡಬಹುದಷ್ಟೆ.

ಸ್ಯಾಂಡಲ್​ವುಡ್​ನ ನಟಿಯರು ಡ್ರಗ್ ಪೆಡ್ಲರ್​ಗಳಷ್ಟೇ ಅಲ್ಲ, ಡ್ರಗ್ಸ್ ದಂಧೆಯಲ್ಲಿ ಇನ್ನೂ ಹಲವರು ಇದ್ದಾರೆ. ಈ ಹಿಂದೆ ಪೊಲೀಸರ ಕೈಗೆ ಸಿಕ್ಕಿದ್ದವರು ಈಗ ಆರಾಮಾಗಿದ್ದಾರೆ. ರಾಜಕಾರಣಿಗಳು, ನಿರ್ದೇಶಕ, ನಿರ್ಮಾಪಕರ ಮಕ್ಕಳ ಹೆಸರು ಈ ಕೇಸ್​​ನಲ್ಲಿ ಕೇಳಿ ಬಂದಿದೆ. ಇದು ರಾಜಕೀಯ ವಿಚಾರವಲ್ಲ, ಸದನದಲ್ಲಿ ಚರ್ಚೆ ಆಗಬೇಕು. ವೈಯಕ್ತಿಕವಾಗಿ ನಾನು ಯಾರ ಮೇಲೂ ಆರೋಪ ಮಾಡ್ತಿಲ್ಲ ಎಂದು ನಗರ ಪೊಲೀಸ್​ ಆಯುಕ್ತರ ಕಚೇರಿಯಲ್ಲಿ ಇಂದ್ರಜಿತ್ ಲಂಕೇಶ್ ಹೇಳಿದ್ರು.

ಸರಿಯಾದ ರೀತಿಯಲ್ಲಿ ತನಿಖೆ ಆದರೆ ಹೆಣಗಳು ಕೂಡ ಎದ್ದು ಕೂರಲಿವೆ -ಇಂದ್ರಜಿತ್​ ಲಂಕೇಶ್​

Published On - 3:30 pm, Thu, 28 January 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ