ತೆಲುಗು ಚಿತ್ರರಂಗದ ಸ್ವಜನ ಪಕ್ಷಪಾತ ನೀತಿಗೆ ದಚ್ಚು ಡಿಚ್ಚಿ, ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ದೂರು ಸಲ್ಲಿಸಿದ ರಾಬರ್ಟ್ ನಿರ್ಮಾಪಕರು
ತೆಲುಗು ಚಿತ್ರರಂಗದ ಸ್ವಜನ ಪಕ್ಷಪಾತ ನೀತಿ ವಿರುದ್ಧ ನಟ ದರ್ಶನ್ ಸಿಡಿದೆದ್ದಿದ್ದಾರೆ. ಆಂಧ್ರದಲ್ಲಿ ತೆಲುಗು ಸಿನಿಮಾ ರಿಲೀಸ್ ಆದ್ರೆ ಕನ್ನಡ ಸಿನಿಮಾಗಳಿಗೆ ಅವಕಾಶವೇ ಸಿಗೋದಿಲ್ಲ. ತೆಲುಗು ಸಿನಿಮಾ ರಿಲೀಸ್ ಆದ ದಿನ ಕನ್ನಡ ಸಿನಿಮಾ ರಿಲೀಸ್ ಮಾಡುವಂತಿಲ್ಲ. ತೆಲುಗು ಚಿತ್ರರಂಗದ ಹೊಸ ನೀತಿಯಿಂದ ದರ್ಶನ್ ಕೆಂಡಾಮಂಡಲರಾಗಿದ್ದಾರೆ.
ಬೆಂಗಳೂರು: ಕೊರೊನಾ ಬಳಿಕ ಥಿಯೇಟರ್ಗಳಲ್ಲಿ ಸಿನಿಮಾ ರಿಲೀಸ್ ಆಗುವಷ್ಟರಲ್ಲಿ ಮತ್ತೊಂದು ಕುತ್ತು ಎದುರಾಗಿದೆ. ತೆಲುಗು ಚಿತ್ರರಂಗದ ಸ್ವಜನ ಪಕ್ಷಪಾತ ನೀತಿ ವಿರುದ್ಧ ನಟ ದರ್ಶನ್ ಸಿಡಿದೆದ್ದಿದ್ದಾರೆ. ಆಂಧ್ರದಲ್ಲಿ ತೆಲುಗು ಸಿನಿಮಾ ರಿಲೀಸ್ ಆದ್ರೆ ಕನ್ನಡ ಸಿನಿಮಾಗಳಿಗೆ ಅವಕಾಶವೇ ಸಿಗೋದಿಲ್ಲ. ತೆಲುಗು ಸಿನಿಮಾ ರಿಲೀಸ್ ಆದ ದಿನ ಕನ್ನಡ ಸಿನಿಮಾ ರಿಲೀಸ್ ಮಾಡುವಂತಿಲ್ಲ. ತೆಲುಗು ಚಿತ್ರರಂಗದ ಇಂತಹ ಹೊಸ ನೀತಿಯಿಂದ ದರ್ಶನ್ ಕೆಂಡಾಮಂಡಲರಾಗಿದ್ದಾರೆ. ಹೀಗಾಗಿ ನಟ ದರ್ಶನ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ಈಗಲೇ ಸಮಸ್ಯೆಗಳನ್ನ ಬಗೆಹರಿಸಬೇಕು ಎಂದು ಮನವಿ ಮಾಡಿದರು.
ರಾಬರ್ಟ್ ಸಿನಿಮಾ ತೆಲುಗಿನಲ್ಲಿ ರಿಲೀಸ್ಗೆ ಸಮಸ್ಯೆಯಾಗಬಾರದು. ಸಮಸ್ಯೆ ಉಂಟಾಗದಂತೆ ರಿಲೀಸ್ಗೆ ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಗೂ ತಿಳಿಸಿ. ಈಗಲೇ ಸಮಸ್ಯೆಗಳನ್ನ ಬಗೆಹರಿಸಬೇಕು. ಈಗಲೇ ಸಮಸ್ಯ ಬಗೆಹರಿಯದಿದ್ದರೆ ಮುಂದೆ ಮತ್ತಷ್ಟು ಯುವ ಪ್ರತಿಭೆಗಳ ಸಿನಿಮಾಗಳಿಗೂ ತೊಂದರೆಯಾಗಲಿದೆ ಎಂದು ದರ್ಶನ್ ಚಲನಚಿತ್ರ ವಾಣಿಜ್ಯ ಮಂಡಳಿ ನಡೆದ ಚರ್ಚೆ ವೇಳೆ ಗಮನ ಸೆಳೆದಿದ್ದಾರೆ. ಇದೇ ವೇಳೆ ರಾಬರ್ಟ್ ಸಿನಿಮಾ ನಿರ್ಮಾಪಕರು ಈ ಬಗ್ಗೆ ಅಧಿಕೃತವಾಗಿ ಮಂಡಳಿಗೆ ದೂರು ಸಲ್ಲಿಸಿದರು.
ನಟ ದರ್ಶನ್ ಜೊತೆ ನಿರ್ಮಾಪಕರು, ನಿರ್ದೇಶಕರು ಸಾಥ್ ನೀಡಿದರು. ರಾಬರ್ಟ್ ರಿಲೀಸ್ ಸಮಸ್ಯೆ ಗೊತ್ತಾದ ತಕ್ಷಣ ವಾಣಿಜ್ಯ ಮಂಡಳಿಗೆ ಪೊಗರು ನಿರ್ಮಾಪಕ ಹಾಗೂ ಕೋಟಿಗೊಬ್ಬ3 ನಿರ್ಮಾಪಕ ಸೂರಪ್ಪ ಬಾಬು ಕೂಡ ಆಗಮಿಸಿದರು. ಕನ್ನಡ ಚಿತ್ರರಂಗದ ಹಿರಿಯರು ಮತ್ತು ಮಂಡಳಿಯ ಸದಸ್ಯರು ಇದೀಗ ಚರ್ಚೆ ನಡೆಸಿದರು. ಇಂದು ಯಾವ ರೀತಿ ಬೆಳವಣಿಗೆ ಆಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ. ಭಾನುವಾರ ಸ್ಯಾಂಡಲ್ವುಡ್ ನಿರ್ಮಾಪಕರು ಚೆನ್ನೈನಲ್ಲಿರುವ ಸೌತ್ ಇಂಡಿಯಾ ಫಿಲ್ಮ್ ಚೇಂಬರ್ ಜತೆ ಸಭೆ ನಡೆಸಿ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.
ಮಾರ್ಚ್ 11ರಂದು ರಾಬರ್ಟ್ ಸಿನಿಮಾ ರಿಲೀಸ್ ಮಾಡಲು ನಿರ್ಧಾರ ಮಾಡಲಾಗಿತ್ತು. ತೆಲುಗಿಗೆ ಡಬ್ ಆಗಿರುವ ರಾಬರ್ಟ್ ಸಿನಿಮಾವನ್ನು ಆಂಧ್ರದಲ್ಲಿ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸಿತ್ತು. ಆದ್ರೆ ಮಾರ್ಚ್ 11ರಂದು ತೆಲುಗಿನ 2 ಚಿತ್ರಗಳು ರಿಲೀಸ್ ಆಗಲಿವೆ. ಹೀಗಾಗಿ ರಾಬರ್ಟ್ ಚಿತ್ರ ರಿಲೀಸ್ಗೆ ಅಡ್ಡಿ ಉಂಟಾಗಿದೆ. ತೆಲುಗು ಸಿನಿಮಾ ರಿಲೀಸ್ ದಿನ ಕನ್ನಡ ಸಿನಿಮಾ ರಿಲೀಸ್ ಮಾಡದಂತೆ ರೂಲ್ಸ್ ಮಾಡಲಾಗಿದೆ. ಕನ್ನಡದಿಂದ ತೆಲುಗಿಗೆ ಡಬ್ ಆಗಿರುವ ರಾಬರ್ಟ್ ಸಿನಿಮಾ ರಿಲೀಸ್ಗೆ ಆಂಧ್ರದಲ್ಲಿ ಅಡ್ಡಿ ಉಂಟಾಗಿದೆ. ಹೀಗಾಗಿ ನಟ ದರ್ಶನ್ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಅವರು ಇಲ್ಲಿಗೆ ಬರಬಹುದು, ನಾವು ಅಲ್ಲಿಗೆ ಹೋಗಬಾರದಾ? ತೆಲುಗು ಚಿತ್ರರಂಗದ ಹೊಸ ನೀತಿ ಬಗ್ಗೆ ಚರ್ಚೆ ನಡೆಸ್ತೇವೆ. ತೆಲುಗು ಚಿತ್ರರಂಗದ ಸಿನಿಮಾ ನಮ್ಮಲ್ಲಿ ರಿಲೀಸ್ ಮಾಡ್ತಾರೆ. ಆದರೆ ಕನ್ನಡ ಸಿನಿಮಾ ಅಲ್ಲಿ ರಿಲೀಸ್ ಮಾಡಲು ಬಿಡುತ್ತಿಲ್ಲ. ಅವರು ಇಲ್ಲಿಗೆ ಬರಬಹುದು, ನಾವು ಅಲ್ಲಿಗೆ ಹೋಗಬಾರದಾ. ಮುಂದಿನ ದಿನಗಳಲ್ಲಿ ಯುವ ಪ್ರತಿಭೆಗಳಿಗೆ ಸಮಸ್ಯೆಯಾಗಲಿದೆ. ಹೀಗಾಗಿ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ನಾವು ಫಿಲ್ಮ್ ಚೇಂಬರ್ನಲ್ಲಿ ಈ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಸ್ಯಾಂಡಲ್ವುಡ್ ನಟ ದರ್ಶನ್ ತಿಳಿಸಿದ್ರು.
ಟಾಲಿವುಡ್ನಲ್ಲಿ ಮಾರ್ಚ್-11 ಕ್ಕೆ ರಿಲೀಸ್ ಪ್ಲಾನ್ ಆಗಿರೋ ಸಿನಿಮಾಗಳು ಶ್ರೀಕಾರಂ, ಗಾಲಿ ಸಂಪತ್, ಜಾತಿ ರತ್ನಲು ಸೇರಿದಂತೆ ಕೆಲವು ಸಿನಿಮಾಗಳು ಮಾರ್ಚ್ -11 ಕ್ಕೆ ರಿಲೀಸ್ ಆಗಲು ಸಿದ್ಧವಾಗಿವೆ. ಸದ್ಯ ಬಿಗ್ ಸ್ಟಾರ್ಗಳ ಸಿನಿಮಾ ರಿಲೀಸ್ಗೆ ಇನ್ನೂ ಪ್ಲಾನ್ ಆಗಿಲ್ಲ. ಹೀಗಾಗಿ ಸಹಜವಾಗಿಯೇ ರಾಬರ್ಟ್ ರಿಲೀಸ್ಗೆ ಆಗುತ್ತಿರುವ ಸಮಸ್ಯೆ ಏನು ಅನ್ನೋದೆ ತಿಳಿಯುತ್ತಿಲ್ಲ. ಹಾಗಾಗಿ ಈ ಸಮಸ್ಯೆಗೆ ಹೇಗೆ ಪರಿಹಾರ ಸಿಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
‘ತೆಲುಗಿನಲ್ಲಿ ಯಾವುದೇ ಸಿನಿಮಾ ರಿಲೀಸ್ ಇದ್ರೂ.. ಕನ್ನಡ ಚಿತ್ರಗಳ ಬಿಡುಗಡೆಗೆ ಅವಕಾಶ ನೀಡ್ತಾ ಇಲ್ಲ’
Published On - 12:48 pm, Fri, 29 January 21