AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸ್ಸಾಂ: ಮನೆಯಲ್ಲಿ ಮಗುವನ್ನು ಬಿಟ್ಟು ನಿಷೇಧಿತ ಉಗ್ರ ಸಂಘಟನೆಗೆ ಸೇರಿದ ದಂಪತಿ

ಮನೆಯಲ್ಲಿ ಮಗುವನ್ನು ಬಿಟ್ಟು ದಂಪತಿ ನಿಷೇಧಿತ ಉಗ್ರ ಸಂಘಟನೆಗೆ ಸೇರಿರುವ ಮಾಹಿತಿ ಲಭ್ಯವಾಗಿದೆ. ಅಸ್ಸಾಂನ ತಿನ್ಸುಕಿಯಾದ ದಂಪತಿ ನಿಷೇಧಿತ ಉಗ್ರ ಸಂಘಟನೆಯಾದ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್-ಇಂಡಿಪೆಂಡೆಂಟ್(ULFA-I)ಗೆ ಸೇರಿದ್ದಾರೆ ಎಂದು ಹೇಳಲಾಗುತ್ತಿದೆ.

ಅಸ್ಸಾಂ: ಮನೆಯಲ್ಲಿ ಮಗುವನ್ನು ಬಿಟ್ಟು ನಿಷೇಧಿತ ಉಗ್ರ ಸಂಘಟನೆಗೆ ಸೇರಿದ ದಂಪತಿ
ಉಗ್ರರುImage Credit source: Adobe Stock
ನಯನಾ ರಾಜೀವ್
|

Updated on:May 12, 2024 | 12:10 PM

Share

ಮನೆಯಲ್ಲಿ ನಾಲ್ಕು ವರ್ಷದ ಮಗುವನ್ನು ಬಿಟ್ಟು ದಂಪತಿ ನಿಷೇಧಿತ ಉಗ್ರ ಸಂಘಟನೆ(Terrorist Organisation) ಗೆ ಸೇರಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ. ಅಸ್ಸಾಂನ ತಿನ್ಸುಕಿಯಾದ ದಂಪತಿ ನಿಷೇಧಿತ ಉಗ್ರ ಸಂಘಟನೆಯಾದ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್-ಇಂಡಿಪೆಂಡೆಂಟ್(ULFA-I)ಗೆ ಸೇರ್ಪಡೆಗೊಂಡಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಅವರು ತಮ್ಮ ಮನೆಯನ್ನು ಬಿಟ್ಟು ಹೋಗಿದ್ದಾರೆ. ದಂಪತಿಯನ್ನು ಮಮತಾ ನಿಯೋಗ್ ಮತ್ತು ಆಕೆಯ ಪತಿ ಅಚ್ಯುತ್ ನಿಯೋಗ್ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅವರು ತಮ್ಮ ಮಗಳನ್ನು ತಿನ್ಸುಕಿಯಾ ಜಿಲ್ಲೆಯ ದಿರಾಕ್ ಕಪಟೋಲಿ ಗ್ರಾಮದಲ್ಲಿ ಆಕೆಯ ಅಜ್ಜಿಯರೊಂದಿಗೆ ಬಿಟ್ಟಿದ್ದಾರೆ ಎಂದು ವರದಿಯಾಗಿದೆ. ನಾವು ಮೊದಲು ಇಡೀ ವಿಷಯವನ್ನು ತನಿಖೆ ಮಾಡಬೇಕು ಎಂದು ಪೊಲೀಸರು ಹೇಳಿದ್ದಾರೆ.

ಮತ್ತಷ್ಟು ಓದಿ: ಭಾರತದಲ್ಲಿ ಉಗ್ರ ಸಂಘಟನೆಯು ಸುವ್ಯವಸ್ಥಿತ ಜಾಲಗಳ ಮೂಲಕ ಹಣ ಸಂಗ್ರಹಿಸಿದೆ: ಎಫ್‌ಎಟಿಎಫ್ ವರದಿ

ಅಸ್ಸಾಂ ಸಂಘರ್ಷದಲ್ಲಿ ಸಶಸ್ತ್ರ ಹೋರಾಟದ ಮೂಲಕ ಸ್ಥಳೀಯ ಅಸ್ಸಾಮಿ ಜನರಿಗೆ ಅಸ್ಸಾಂನ ಪ್ರತ್ಯೇಕ ಸ್ವತಂತ್ರ ರಾಜ್ಯವನ್ನು ರೂಪಿಸಲು ಸಶಸ್ತ್ರ ಹೋರಾಟದಲ್ಲಿ ತೊಡಗಲು ಯುವಕರ ಗುಂಪೊಂದು ಅಸ್ಸಾಂನ ಶಿವಸಾಗರ್‌ನಲ್ಲಿ 7 ಏಪ್ರಿಲ್ 1979 ರಂದು ಉಲ್ಫಾವನ್ನು ಸ್ಥಾಪಿಸಿತು. ಉಲ್ಫಾ ಮುಖ್ಯವಾಗಿ ಅಸ್ಸಾಂನಲ್ಲಿ ಕಾರ್ಯನಿರ್ವಹಿಸುತ್ತದೆ. 1990 ರಲ್ಲಿ ಭಾರತ ಸರ್ಕಾರವು ಇದನ್ನು ಭಯೋತ್ಪಾದಕ ಸಂಘಟನೆ ಎಂದು ಉಲ್ಲೇಖಿಸಿ ನಿಷೇಧಿಸಿತು.

ರಾಷ್ಟ್ರೀಯ ಸುದ್ದುಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:09 pm, Sun, 12 May 24