Assam Earthquake: ಅಸ್ಸಾಂನಲ್ಲಿ 5.1 ತೀವ್ರತೆಯ ಭೂಕಂಪ

ಅಸ್ಸಾಂನ ಮೋರಿಗಾಂವ್ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಭೂಕಂಪ(Earthquake)ದ ಅನುಭವವಾಗಿದೆ. ತೀವ್ರತೆ ರಿಕ್ಟರ್ ಮಾಪಕದಲ್ಲಿ 5.1 ಎಂದು ದಾಖಲಾಗಿದೆ. ಗುವಾಹಟಿ ಮತ್ತು ರಾಜ್ಯದ ಇತರ ಭಾಗಗಳಲ್ಲಿಯೂ ಕಂಪನದ ಅನುಭವವಾಗಿದೆ. ಭೂಕಂಪನವು ಬೆಳಗಿನ ಜಾವ 2.25 ಕ್ಕೆ 16 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.

Assam Earthquake: ಅಸ್ಸಾಂನಲ್ಲಿ 5.1 ತೀವ್ರತೆಯ ಭೂಕಂಪ
ಭೂಕಂಪ
Image Credit source: Hindustan Times

Updated on: Feb 27, 2025 | 8:12 AM

ಗುವಾಹಟಿ, ಫೆಬ್ರವರಿ 27: ಅಸ್ಸಾಂನ ಮೋರಿಗಾಂವ್ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಭೂಕಂಪ(Earthquake)ದ ಅನುಭವವಾಗಿದೆ. ತೀವ್ರತೆ ರಿಕ್ಟರ್ ಮಾಪಕದಲ್ಲಿ 5.1 ಎಂದು ದಾಖಲಾಗಿದೆ. ಗುವಾಹಟಿ ಮತ್ತು ರಾಜ್ಯದ ಇತರ ಭಾಗಗಳಲ್ಲಿಯೂ ಕಂಪನದ ಅನುಭವವಾಗಿದೆ. ಭೂಕಂಪನವು ಬೆಳಗಿನ ಜಾವ 2.25 ಕ್ಕೆ 16 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.

ಅಸ್ಸಾಂ ಭಾರತದಲ್ಲಿ ಅತಿ ಹೆಚ್ಚು ಭೂಕಂಪ ಪೀಡಿತ ಪ್ರದೇಶಗಳಲ್ಲಿ ಒಂದಾಗಿರುವುದರಿಂದ ಅಲ್ಲಿ ಭೂಕಂಪಗಳು ಸಾಮಾನ್ಯ. ಇದು ಭೂಕಂಪನ ವಲಯ V ರಲ್ಲಿ ಬರುತ್ತದೆ, ಅಂದರೆ ಇಲ್ಲಿ ಬಲವಾದ ಕಂಪನಗಳ ಅಪಾಯ ಹೆಚ್ಚು.

ಇತ್ತೀಚಿನ ವರ್ಷಗಳಲ್ಲಿ, ಈ ಪ್ರದೇಶವು ಹಲವಾರು ಪ್ರಮುಖ ಭೂಕಂಪಗಳಿಗೆ ತುತ್ತಾಗಿದೆ, ಉದಾಹರಣೆಗೆ 1950 ರ ಅಸ್ಸಾಂ-ಟಿಬೆಟ್ ಭೂಕಂಪ (ತೀವ್ರತೆ 8.6) ಮತ್ತು 1897 ರ ಶಿಲ್ಲಾಂಗ್ ಭೂಕಂಪ (ತೀವ್ರತೆ 8.1) , ಇವೆರಡೂ ಇತಿಹಾಸದಲ್ಲಿ ಅತ್ಯಂತ ಮಾರಕ ಭೂಕಂಪಗಳಲ್ಲಿ ಸೇರಿವೆ.

ಇದುವರೆಗೆ ಯಾವುದೇ ಆಸ್ತಿಪಾಸ್ತಿ ನಷ್ಟ ಅಥವಾ ಸಾವುನೋವು ಸಂಭವಿಸಿದ ಬಗ್ಗೆ ಯಾವುದೇ ಸುದ್ದಿ ಬಂದಿಲ್ಲ ಎಂದು ಒಡಿಶಾ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಂಗಾಳಕೊಲ್ಲಿಯಲ್ಲಿ ಭೂಕಂಪದ ಕೇಂದ್ರಬಿಂದು ಇದ್ದ ಕಾರಣ ಅದರ ಪರಿಣಾಮ ಹೆಚ್ಚು ಇರಲಿಲ್ಲ ಎಂದು ಅವರು ಹೇಳಿದರು. ಒಡಿಶಾದ ಪಾರಾದೀಪ್, ಪುರಿ, ಬೆರ್ಹಾಂಪುರ ಮತ್ತು ಇತರ ಕೆಲವು ಸ್ಥಳಗಳಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಅವರು ಹೇಳಿದರು.

ಮತ್ತಷ್ಟು ಓದಿ: Video: ವ್ಯಾನವಾಟುವಿನಲ್ಲಿ ಪ್ರಬಲ ಭೂಕಂಪ, ವಿಡಿಯೋ ಇಲ್ಲಿದೆ

5 ರ ತೀವ್ರತೆಯ ಭೂಕಂಪವನ್ನು ಮಧ್ಯಮ ತೀವ್ರತೆ ಎಂದು ಪರಿಗಣಿಸಲಾಗುತ್ತದೆ. ಇದು ಶಬ್ದವನ್ನುಂಟು ಮಾಡುತ್ತದೆ ಹಾಗೆಯೇ ಮನೆಯೊಳಗಿನ ವಸ್ತುಗಳಿಗೆ ಸಣ್ಣ ಹಾನಿಯಾಗಬಹುದು.

ಭೂಕಂಪಗಳನ್ನು ರಿಕ್ಟರ್ ಮಾಪಕದಲ್ಲಿ ಅಳೆಯಲಾಗುತ್ತದೆ. ಇದನ್ನು ರಿಕ್ಟರ್ ಮ್ಯಾಗ್ನಿಟ್ಯೂಡ್ ಟೆಸ್ಟ್ ಮಾಪಕ ಎಂದು ಕರೆಯಲಾಗುತ್ತದೆ. ಭೂಕಂಪಗಳನ್ನು ರಿಕ್ಟರ್ ಮಾಪಕದಲ್ಲಿ 1 ರಿಂದ 9 ರವರೆಗಿನ ಪ್ರಮಾಣದಲ್ಲಿ ಅಳೆಯಲಾಗುತ್ತದೆ. ಭೂಕಂಪದ ಸಮಯದಲ್ಲಿ ಭೂಮಿಯ ಒಳಗಿನಿಂದ ಬಿಡುಗಡೆಯಾಗುವ ಶಕ್ತಿಯ ತೀವ್ರತೆಯನ್ನು ಇದರಿಂದ ಅಳೆಯಲಾಗುತ್ತದೆ. ಈ ತೀವ್ರತೆಯಿಂದ ಭೂಕಂಪದ ತೀವ್ರತೆಯನ್ನು ಅಂದಾಜಿಸಲಾಗುತ್ತದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ