Sign In

By signing in or creating an account, you agree with Associated Broadcasting Company's Terms & Conditions and Privacy Policy.

Earthquake: ಬಂಗಾಳಕೊಲ್ಲಿಯಲ್ಲಿ 5.1 ತೀವ್ರತೆಯ ಭೂಕಂಪ, ಕೋಲ್ಕತ್ತಾದಲ್ಲೂ ನಡುಗಿದ ಭೂಮಿ

ಬಂಗಾಳಕೊಲ್ಲಿಯಲ್ಲಿ ಇಂದು ಬೆಳಗಿನ ಜಾವ 5.1 ತೀವ್ರತೆಯ ಭೂಕಂಪ ಸಂಭವಿಸಿದೆ. ಕೋಲ್ಕತ್ತಾ ಮತ್ತು ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿ ಪ್ರಕಾರ ಬೆಳಗ್ಗೆ 6.10ಕ್ಕೆ ಭೂಕಂಪ ಸಂಭವಿಸಿದೆ. 91 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪನವು ನಿವಾಸಿಗಳಲ್ಲಿ ಕ್ಷಣಿಕ ಭೀತಿಯನ್ನು ಉಂಟುಮಾಡಿದ್ದರೂ, ಯಾವುದೇ ಹಾನಿ ಅಥವಾ ಸಾವುನೋವುಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

Earthquake: ಬಂಗಾಳಕೊಲ್ಲಿಯಲ್ಲಿ 5.1 ತೀವ್ರತೆಯ ಭೂಕಂಪ, ಕೋಲ್ಕತ್ತಾದಲ್ಲೂ ನಡುಗಿದ ಭೂಮಿ
ಭೂಕಂಪImage Credit source: Firstpost
Follow us
ನಯನಾ ರಾಜೀವ್
|

Updated on: Feb 25, 2025 | 9:20 AM

ಬಂಗಾಳಕೊಲ್ಲಿಯಲ್ಲಿ ಇಂದು ಬೆಳಗಿನ ಜಾವ 5.1 ತೀವ್ರತೆಯ ಭೂಕಂಪ ಸಂಭವಿಸಿದೆ. ಕೋಲ್ಕತ್ತಾ ಮತ್ತು ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿ ಪ್ರಕಾರ ಬೆಳಗ್ಗೆ 6.10ಕ್ಕೆ ಭೂಕಂಪ ಸಂಭವಿಸಿದೆ. 91 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ.

ಭೂಕಂಪನವು ನಿವಾಸಿಗಳಲ್ಲಿ ಕ್ಷಣಿಕ ಭೀತಿಯನ್ನು ಉಂಟುಮಾಡಿದ್ದರೂ, ಯಾವುದೇ ಹಾನಿ ಅಥವಾ ಸಾವುನೋವುಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಯುವತಿಯೊಬ್ಬಳು ನಿದ್ರೆಯಿಂದ ಎಚ್ಚರಗೊಂಡು ಹಾಸಿಗೆಯ ಮೇಲೆ ಕುಳಿತಿದ್ದಾಗ ತಲೆ ಸುತ್ತುತ್ತಿರುವಂತೆ ಅನಿಸಿತು, ಮೊದಲಿಗೆ ತನಗೆ ತಲೆ ಸುತ್ತುತ್ತಿರಬಹುದು ಎಂದು ಭಾವಿಸಿದೆ ಆದರೆ ಭೂಕಂಪದ ಶಬ್ದ ಕೇಳಿದಾಗ ಮನೆಯಿಂದ ಹೊರಗೆ ಓಡಿಹೋದೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಸೋಮವಾರ ದೆಹಲಿ-ಎನ್‌ಸಿಆರ್‌ನಲ್ಲಿ ಭೂಕಂಪನದ ಅನುಭವವಾಗಿತ್ತು. ಕಳೆದ ಏಳು ದಿನಗಳಲ್ಲಿ ದೆಹಲಿಯಲ್ಲಿ ಮೂರು ಬಾರಿ ಭೂಕಂಪ ಸಂಭವಿಸಿದೆ. ಈ ಪ್ರದೇಶವು ಭೂಕಂಪ ಅಪಾಯದ ಕೆಂಪು ವಲಯದಲ್ಲಿದೆ. ಜನರು ಭಯಭೀತರಾಗದಂತೆ ಮನವಿ ಮಾಡಲಾಗಿದೆ.

ಮತ್ತಷ್ಟು ಓದಿ: ತೆಲಂಗಾಣದಲ್ಲಿ ಪ್ರಬಲ ಭೂಕಂಪ, ವಿಡಿಯೋ ಇಲ್ಲಿದೆ

ಬಂಗಾಳದ ಜಲ್ಪೈಗುರಿಯ ಪಶ್ಚಿಮ ಭಾಗಗಳು ಮತ್ತು ಕೂಚ್ ಬೆಹಾರ್‌ನ ಉತ್ತರ ಜಿಲ್ಲೆಗಳು ಭೂಕಂಪನ ವಲಯ V ರಲ್ಲಿವೆ. ಈ ಎರಡು ಜಿಲ್ಲೆಗಳ ಉಳಿದ ಭಾಗಗಳು ಡಾರ್ಜಿಲಿಂಗ್, ಉತ್ತರ ದಿನಾಜ್‌ಪುರ, ದಕ್ಷಿಣ ದಿನಾಜ್‌ಪುರ, ಮಾಲ್ಡಾ, 24 ಉತ್ತರ ಪರಗಣಗಳು ಮತ್ತು 24 ದಕ್ಷಿಣ ಪರಗಣಗಳು ಜಿಲ್ಲೆಗಳೊಂದಿಗೆ ವಲಯ IV ರಲ್ಲಿ ಬರುತ್ತವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ