Mahakumbh: ಮಹಾಕುಂಭದಲ್ಲಿ 45 ದಿನದಲ್ಲಿ 66 ಕೋಟಿಗೂ ಹೆಚ್ಚು ಭಕ್ತರಿಂದ ಪುಣ್ಯ ಸ್ನಾನ
ಜನವರಿ 13ರಂದು ಪ್ರಾರಂಭವಾದ ಮಹಾಕುಂಭ ಮೇಳ ಮಹಾ ಶಿವರಾತ್ರಿಯ ದಿನವಾದ ಇಂದು ಕೊನೆಗೊಂಡಿದೆ. ಮಹಾಕುಂಭ ಮೇಳದಲ್ಲಿ ಒಟ್ಟು ಸ್ನಾನ ಮಾಡುವವರ ಸಂಖ್ಯೆ ಚೀನಾ ಮತ್ತು ಭಾರತವನ್ನು ಹೊರತುಪಡಿಸಿ ಎಲ್ಲಾ ದೇಶಗಳ ಜನಸಂಖ್ಯೆಯನ್ನು ಮೀರಿದೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ. ಮಹಾಶಿವರಾತ್ರಿಯ ದಿನವಾದ ಇಂದು 1.44 ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ಪ್ರಯಾಗರಾಜ್ (ಫೆಬ್ರವರಿ 26): ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆಯಾದ ಮಹಾಕುಂಭ ಮೇಳವು ಇಂದು ಮಹಾಶಿವರಾತ್ರಿ ಸ್ನಾನದೊಂದಿಗೆ ಮುಕ್ತಾಯಗೊಂಡಿದೆ. ಮಹಾಕುಂಭದಲ್ಲಿ 5 ಪವಿತ್ರ ಸ್ನಾನಗಳು ನಡೆದವು. ಅವುಗಳಲ್ಲಿ ಮೂರು ಅಮೃತ ಸ್ನಾನಗಳು. ಜನವರಿ 14ರಂದು ಮಕರ ಸಂರಾಂತಿ, ಜನವರಿ 29ರಂದು ಮೌನಿ ಅಮಾವಾಸ್ಯೆ ಮತ್ತು ಫೆಬ್ರವರಿ 3ರಂದು ವಸಂತ ಪಂಚಮಿ ಅಮೃತ ಸ್ನಾನಗಳು. ಮಹಾಕುಂಭ ಮೇಳದ ಕೊನೆಯ ದಿನವಾದ ಇಂದು 1.44 ಕೋಟಿ ಜನರು ಪುಣ್ಯಸ್ನಾನ ಮಾಡಿದ್ದಾರೆ. ಈ 45 ದಿನಗಳಲ್ಲಿ ಒಟ್ಟು 66 ಕೋಟಿಗೂ ಹೆಚ್ಚು ಜನ ತ್ರಿವೇಣಿ ಸಂಗಮದಲ್ಲಿ ತೀರ್ಥ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos