ಮಹಾ ಶಿವರಾತ್ರಿಯಂದೇ ಬಾಡೂಟ ಸವಿದ ಜನರು
ರಾಮನಗರ ಜಿಲ್ಲೆಯ ಮಂಗಾಡಹಳ್ಳಿ ಗ್ರಾಮದಲ್ಲಿ ಮಹಾಶಿವರಾತ್ರಿಯಂದು ವಿಶೇಷ ಬಾಡೂಟದ ಆಚರಣೆ ನಡೆಯಿತು. ಚನ್ನಪ್ಪಸ್ವಾಮಿ ದೇವರಿಗೆ ನೈವೇದ್ಯವಾಗಿ ನೂರಾರು ಕೆಜಿ ಮಟನ್ ಮತ್ತು ಚಿಕನ್ ಬಳಸಿ ತಯಾರಿಸಿದ ಬಾಡೂಟವನ್ನು ಗ್ರಾಮಸ್ಥರು ಸವಿದಿದ್ದಾರೆ. ಇದು ಹಲವು ವರ್ಷಗಳಿಂದ ನಡೆಯುತ್ತಿರುವ ವಿಶಿಷ್ಟ ಪದ್ಧತಿಯಾಗಿದೆ. ಅಕ್ಕಪಕ್ಕದ ಗ್ರಾಮಗಳ ಜನರು ಕೂಡ ಭರ್ಜರಿ ಊಟ ಸವಿದಿದ್ದಾರೆ.
ರಾಮನಗರ, ಫೆಬ್ರವರಿ 26: ದೇಶದೆಲ್ಲೆಡೆ ಇಂದು ಮಹಾ ಶಿವರಾತ್ರಿ (Maha Shivratri) ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಈ ವೇಳೆ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಮಂಗಾಡಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಬಾಡೂಟ ಸವಿದಿದ್ದಾರೆ. ಗ್ರಾಮದ ಚನ್ನಪ್ಪಸ್ವಾಮಿ ದೇವರಿಗೆ ಗ್ರಾಮಸ್ಥರು ಬಾಡೂಟ ನೈವೇದ್ಯ ಇಟ್ಟಿದ್ದಾರೆ. ಕಳೆದ ಹಲವು ವರ್ಷಗಳಿಂದ ಇದೇ ರೀತಿ ಶಿವರಾತ್ರಿ ಆಚರಣೆ ಮಾಡುತ್ತಿದ್ದಾರೆ. ಊಟಕ್ಕೆ ನೂರಾರು ಕೆಜಿ ಮಟನ್, ಚಿಕನ್ ಬಳಕೆ ಮಾಡಲಾಗಿದ್ದು, ಮಟನ್ ಸಾರು, ಬೋಟಿ ಗೊಜ್ಜು, ಚಿಕನ್ ಚಾಪ್ಸ್, ರಾಗಿ ಮುದ್ದೆ ಮಾಡಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Feb 26, 2025 10:48 PM
Latest Videos