Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಲಿಸುವ ಬೈಕ್​ ಮೇಲೆಯೇ ರೊಮ್ಯಾನ್ಸ್: ಪ್ರೇಮಿಗಳ ಹುಚ್ಚಾಟದ ವಿಡಿಯೋ ವೈರಲ್

ಚಲಿಸುವ ಬೈಕ್​ ಮೇಲೆಯೇ ರೊಮ್ಯಾನ್ಸ್: ಪ್ರೇಮಿಗಳ ಹುಚ್ಚಾಟದ ವಿಡಿಯೋ ವೈರಲ್

Prajwal Kumar NY
| Updated By: ಗಂಗಾಧರ​ ಬ. ಸಾಬೋಜಿ

Updated on: Feb 26, 2025 | 8:58 PM

ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಯುವತಿಯನ್ನು ಬುಲೆಟ್ ಬೈಕ್​​ನ ಪೆಟ್ರೋಲ್ ಟ್ಯಾಂಕ್ ಮೇಲೆ ಹಿಮ್ಮುಖವಾಗಿ ಕೂರಿಸಿಕೊಂಡು ಯುವಕ ಬೈಕ್ ಚಾಲನೆ ಮಾಡಿದ್ದಾನೆ. ಆ ಮೂಲಕ ನಡು ರಸ್ತೆಯಲ್ಲೇ ಯುವಕ-ಯುವತಿ ಹುಚ್ಚಾಟ ಪ್ರದರ್ಶನ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಗಳೂರು, ಫೆಬ್ರವರಿ 26: ಸಿನಿಮಾ ಸ್ಟೈಲ್​ನಲ್ಲಿ ಪ್ರೇಯಸಿಯನ್ನ ಬೈಕ್ ಮೇಲೆ ಉಲ್ಟಾ ಕೂರಿಸಿಕೊಂಡು ಯುವಕ ಚಾಲನೆ ಮಾಡಿರುವಂತಹ ಘಟನೆ ನಗರದ ಸರ್ಜಾಪುರ (Sarjapura) ರಸ್ತೆಯಲ್ಲಿ ನಡೆದಿದೆ. ಆ ಮೂಲಕ ನಡು ರಸ್ತೆಯಲ್ಲೇ ಯುವಕ-ಯುವತಿ ಹುಚ್ಚಾಟ ಪ್ರದರ್ಶನ ಮಾಡಿದ್ದಾರೆ. ಬುಲೆಟ್ ಬೈಕ್​ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಉಲ್ಟಾ ಕೂರಿಸಿಕೊಂಡು ಅಪಾಯಕಾರಿ ಚಾಲನೆ ಮಾಡಲಾಗಿದೆ. ತಮಿಳುನಾಡು ನಂಬರ್ ಪ್ಲೇಟ್​ ಇದೆ. ಸದ್ಯ ವಿಡಿಯೋ ವೈರಲ್ ಆಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.