ಇತ್ತೀಚೆಗಷ್ಟೇ ಖೇಲ್ ರತ್ನ ಪ್ರಶಸ್ತಿಗೆ ಇದ್ದ ರಾಜೀವ್ಗಾಂಧಿ (Rajiv Gandhi) ಹೆಸರನ್ನು ತೆಗೆದು, ಅದಕ್ಕೆ ಹಾಕಿ ಮಾಂತ್ರಿಕ ಧ್ಯಾನ್ ಚಂದ ಹೆಸರಿಡಲಾಗಿತ್ತು. ಇದೀಗ ಅಸ್ಸಾಂನ ಒರಾಂಗ್ನಲ್ಲಿರುವ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ (Orang National Park) ದ ಹೆಸರನ್ನು ಬದಲಿಸಲು ಅಸ್ಸಾಂ ಸರ್ಕಾರ (Assam Government) ನಿರ್ಧರಿಸಿದೆ. ಇಲ್ಲಿನ ನ್ಯಾಶನಲ್ ಪಾರ್ಕ್ಗೆ ಇರುವ ರಾಜೀವ್ ಗಾಂಧಿ ಎಂಬ ಹೆಸರನ್ನು ತೆಗೆದು, ಒರಾಂಗ್ ನ್ಯಾಶನಲ್ ಪಾರ್ಕ್ ಎಂದು ನಾಮಕರಣ ಮಾಡಲು ಬುಧವಾರ ಅಸ್ಸಾಂ ಕ್ಯಾಬಿನೆಟ್ ನಿರ್ಣಯ ಅಂಗೀಕಾರ ಮಾಡಿದೆ.
ಅತಿ ಹೆಚ್ಚು ಸಂಖ್ಯೆಯಲ್ಲಿ ರಾಯಲ್ ಬೆಂಗಾಲಿ ಹುಲಿಗಳನ್ನು ಹೊಂದಿರುವ ಒರಾಂಗ್ ರಾಷ್ಟ್ರೀಯ ಉದ್ಯಾನಕ್ಕೆ 2005ರಲ್ಲಿ ರಾಜೀವ್ ಗಾಂಧಿ ಹೆಸರನ್ನು ಇಡಲಾಗಿತ್ತು. ಇತ್ತೀಚೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದ ಆದಿವಾಸಿ ಮತ್ತು ಚಹಾ ಬುಡಕಟ್ಟು ಜನಾಂಗದವರು, ಒರಾಂಗ್ ರಾಷ್ಟ್ರೀಯ ಉದ್ಯಾನವನಕ್ಕಿರುವ ರಾಜೀವ್ ಗಾಂಧಿ ಹೆಸರನ್ನು ತೆಗೆಯಬೇಕು. ಇದು ಸಮುದಾಯದ ಪರವಾದ ಆಗ್ರಹ ಎಂದು ಹೇಳಿದ್ದರು. ಈ ಒರಾಂಗ್ದೊಂದಿಗೆ ಆದಿವಾಸಿ ಮತ್ತು ಬುಡಕಟ್ಟು ಜನಾಂಗಕ್ಕೆ ಭಾವನಾತ್ಮಕ ಬೆಸುಗೆ ಇದೆ. ಹಾಗಾಗಿ ಅವರ ಬೇಡಿಕೆಯನ್ನು ಪೂರೈಸುವ ಸಲುವಾಗಿ ರಾಜೀವ್ ಗಾಂಧಿ ಹೆಸರನ್ನು ತೆಗೆಯಲು ನಿರ್ಧರಿಸಲಾಗಿದೆ ಎಂದು ಅಸ್ಸಾಂ ಸಂಸದೀಯ ವ್ಯವಹಾರಗಳ ಸಚಿವ ಪಿಜುಶ್ ಹಜಾರಿಕಾ ತಿಳಿಸಿದ್ದಾರೆ.
ಬ್ರಹ್ಮಪುತ್ರ ನದಿಯ ಉತ್ತರ ಭಾಗದ ದಡದಲ್ಲಿರುವ ಒರಾಂಗ್ ರಾಷ್ಟ್ರೀಯ ಉದ್ಯಾನವನ ಸುಮಾರು 78.80 ಎಕರೆ ವಿಸ್ತೀರ್ಣದಲ್ಲಿದೆ. ಅಸ್ಸಾಂನ ಅತ್ಯಂತ ಹಳೇ ಅರಣ್ಯ ಸರಂಕ್ಷಿತ ಪ್ರದೇಶವಾಗಿದೆ. ಮೊದಲು 1985ರಲ್ಲಿ ವನ್ಯಜೀವಿ ಅಭಯಾರಣ್ಯ ಎಂದು ಗುರುತಿಸಲಾಗಿತ್ತು. ನಂತರ 1999ರಲ್ಲಿ ರಾಷ್ಟ್ರೀಯ ಉದ್ಯಾನವನ್ನಾಗಿ ಪರಿವರ್ತಿಸಲಾಗಿದೆ. 2005ರ ಆಗಸ್ಟ್ನಲ್ಲಿ, ಅಂದಿನ ತರುಣ್ ಗೊಗೊಯಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಒರಾಂಗ್ ನ್ಯಾಶನಲ್ ಪಾರ್ಕ್ಗೆ ರಾಜೀವ್ ಗಾಂಧಿ ಹೆಸರನ್ನು ಇಟ್ಟಿತ್ತು. ಆಗಲೇ ಸ್ಥಳೀಯ ಸಮುದಾಯಗಳಿಂದ ವಿರೋಧ ವ್ಯಕ್ತವಾಗಿತ್ತು.
ಇದನ್ನೂ ಓದಿ: ಕೆಲಸದ ಒತ್ತಡವು ಪುರುಷರಿಗಿಂತ ಮಹಿಳೆಯರಲ್ಲಿ ಹೃದಯಾಘಾತ, ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ: ವರದಿ
Dengue: ಮುಂಬೈನಲ್ಲಿ ಏರಿಕೆಯಾದ ಡೆಂಗ್ಯೂ ಪ್ರಕರಣ, ಆಗಸ್ಟ್ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆಯಲ್ಲಿ ಹೆಚ್ಚಳ