ಕರೀಂಗಂಜ್ ಜಿಲ್ಲೆಗೆ ಶ್ರೀಭೂಮಿ ಎಂದು ಮರುನಾಮಕರಣ ಮಾಡಿದ ಅಸ್ಸಾಂ ಸರ್ಕಾರ

|

Updated on: Nov 19, 2024 | 9:15 PM

ಅಸ್ಸಾಂ ಸರ್ಕಾರ ಕರೀಂಗಂಜ್ ಜಿಲ್ಲೆಗೆ ಶ್ರೀಭೂಮಿ ಎಂದು ಮರುನಾಮಕರಣ ಮಾಡಿ ಅದರ ಹೆಸರನ್ನು ಬದಲಾಯಿಸಿದೆ. 'ಶ್ರೀ ಭೂಮಿ' ರವೀಂದ್ರನಾಥ ಟ್ಯಾಗೋರ್​ ಅವರಿಂದ ಅನುಮೋದಿಸಲ್ಪಟ್ಟ ಹೆಸರು. ರವೀಂದ್ರನಾಥ್ ಟ್ಯಾಗೋರ್​ ಗೌರವಾರ್ಥ ಶ್ರೀ ಭೂಮಿ ಎಂಬ ಹೆಸರನ್ನು ಇಡಲಾಗಿದೆ.

ಕರೀಂಗಂಜ್ ಜಿಲ್ಲೆಗೆ ಶ್ರೀಭೂಮಿ ಎಂದು ಮರುನಾಮಕರಣ ಮಾಡಿದ ಅಸ್ಸಾಂ ಸರ್ಕಾರ
ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ
Follow us on

ಕೊಲ್ಕತ್ತಾ: ರವೀಂದ್ರನಾಥ ಟ್ಯಾಗೋರ್ ಅವರ ಗೌರವಾರ್ಥ ಕರೀಂಗಂಜ್ ಜಿಲ್ಲೆಯನ್ನು ಶ್ರೀಭೂಮಿ ಎಂದು ಮರುನಾಮಕರಣ ಮಾಡಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ರವೀಂದ್ರನಾಥ ಟ್ಯಾಗೋರ್ ಅವರನ್ನು ಗೌರವಿಸಲು ಅಸ್ಸಾಂ ರಾಜ್ಯದ ಕರೀಂಗಂಜ್ ಜಿಲ್ಲೆಯನ್ನು ಶ್ರೀಭೂಮಿ ಎಂದು ಮರುನಾಮಕರಣ ಮಾಡಲಾಗುವುದು ಎಂದು ಇಂದು ಘೋಷಿಸಿದರು.

“100 ವರ್ಷಗಳ ಹಿಂದೆ ಖ್ಯಾತ ಕವಿ ರವೀಂದ್ರನಾಥ ಟ್ಯಾಗೋರ್ ಅವರು ಅಸ್ಸಾಂನ ಆಧುನಿಕ ಕರೀಂಗಂಜ್ ಜಿಲ್ಲೆಯನ್ನು ‘ಶ್ರೀಭೂಮಿ’- ಮಾತಾ ಲಕ್ಷ್ಮಿಯ ನಾಡು ಎಂದು ಬಣ್ಣಿಸಿದ್ದಾರೆ. ಇಂದು ಅಸ್ಸಾಂ ಕ್ಯಾಬಿನೆಟ್ ನಮ್ಮ ಜನರ ಈ ಬಹುಕಾಲದ ಬೇಡಿಕೆಯನ್ನು ಈಡೇರಿಸಿದೆ” ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅಸ್ಸಾಂನಲ್ಲಿ ಹಳಿ ತಪ್ಪಿದ ಎಕ್ಸ್​ಪ್ರೆಸ್​​ ರೈಲಿನ 8 ಬೋಗಿಗಳು

ಕರೀಂಗಂಜ್ ಅನ್ನು ಶ್ರೀಭೂಮಿ ಎಂದು ಮರುನಾಮಕರಣ ಮಾಡುವ ನಿರ್ಧಾರವು ಈ ಜಿಲ್ಲೆಯ ಜನರ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳುವ ಚಿತ್ರವನ್ನು ಅಸ್ಸಾಂ ಮುಖ್ಯಮಂತ್ರಿ ಹಂಚಿಕೊಂಡಿದ್ದಾರೆ.


ಕೇಂದ್ರ ಸರ್ಕಾರವು ಸೆಪ್ಟೆಂಬರ್‌ನಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿ ಪೋರ್ಟ್ ಬ್ಲೇರ್ ಅನ್ನು ಶ್ರೀ ವಿಜಯಪುರಂ ಎಂದು ಮರುನಾಮಕರಣ ಮಾಡಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ