ನಿಲ್ಲಿಸಿದ್ದ ಸ್ಕೂಟಿಯಿಂದ ಬುಸ್​ಗುಟ್ಟುತ್ತಾ ಹೊರಬಂದ ವಿಷಕಾರಿ ಹಾವು

ನಿಲ್ಲಿಸಿದ್ದ ಸ್ಕೂಟಿಯಿಂದ ಬುಸ್​ಗುಟ್ಟುತ್ತಾ ಹೊರಬಂದ ವಿಷಕಾರಿ ಹಾವು

ಸುಷ್ಮಾ ಚಕ್ರೆ
|

Updated on: Nov 19, 2024 | 10:44 PM

ನಮ್ಮ ಸುತ್ತಮುತ್ತಲಿನ ಸ್ಥಳಗಳಲ್ಲಿ ಕೆಲವೊಮ್ಮೆ ಕಾಡು ಪ್ರಾಣಿಗಳು ಕೂಡ ಸಂಚರಿಸುತ್ತವೆ. ಹೀಗಾಗಿ, ನಾವು ಎಚ್ಚರಿಕೆಯಿಂದ ಇರಬೇಕಾದುದು ಅಗತ್ಯ. ಮನೆಯ ಹೊರಗೆ ಪಾರ್ಕ್ ಮಾಡಿದ್ದ ಸ್ಕೂಟಿಯ ಮುಂಭಾಗದಲ್ಲಿ ಹಾವೊಂದು ಬುಸುಗುಟ್ಟುತ್ತಾ ಮಲಗಿತ್ತು. ಇದರಿಂದ ವಾಹನ ಸವಾರರು ಭಯಗೊಂಡರು. ಸ್ಥಳೀಯರ ನೆರವಿನಿಂದ ಗಾಡಿಯಿಂದ ಹಾವನ್ನು ಹೊರತೆಗೆಯಲಾಯಿತು.

ಮನೆಯ ಹೊರಗೆ ಪಾರ್ಕ್ ಮಾಡಿದ್ದ ಸ್ಕೂಟಿಯ ಮುಂಭಾಗದಲ್ಲಿ ಹಾವೊಂದು ಬುಸುಗುಟ್ಟುತ್ತಾ ಮಲಗಿತ್ತು. ಇದರಿಂದ ವಾಹನ ಸವಾರರು ಭಯಗೊಂಡರು. ಸ್ಥಳೀಯರ ನೆರವಿನಿಂದ ಗಾಡಿಯಿಂದ ಹಾವನ್ನು ಹೊರತೆಗೆಯಲಾಯಿತು. ಸುಮಾರು ಒಂದು ಗಂಟೆಯ ಪ್ರಯತ್ನದ ನಂತರ ಸ್ಕ್ರೂ ಡ್ರೈವರ್ ಸಹಾಯದಿಂದ ಸ್ಕೂಟರ್ ನ ಮುಂಭಾಗವನ್ನು ತೆಗೆಯಲಾಯಿತು. ಆದರೆ ಹಾವು ಹೊರಬರದ ಕಾರಣ ಸ್ಕೂಟರ್‌ನಿಂದ ಹಾವನ್ನು ಹೊರತರಲು ಹರಸಾಹಸ ಪಡಬೇಕಾಯಿತು. ಸುಮಾರು ಒಂದು ಗಂಟೆ ನಂತರ ಹಾವನ್ನು ಸ್ಕೂಟರ್‌ನಿಂದ ಹೊರತೆಗೆದು ಸಾಯಿಸಲಾಯಿತು. ಈ ವಿಷಕಾರಿ ಹಾವು ಕಾಳಿಂಗ ಸರ್ಪಕ್ಕಿಂತ ಅಪಾಯಕಾರಿ ಎನ್ನುತ್ತಾರೆ ಸ್ಥಳೀಯರು. ತೆಲಂಗಾಣದ ಗದ್ವಾಲ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ