Daily Devotional: ಅರಳಿ ಮರದ ಎಲೆ ದೀಪದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯ ತಿಳಿಯಿರಿ

Daily Devotional: ಅರಳಿ ಮರದ ಎಲೆ ದೀಪದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯ ತಿಳಿಯಿರಿ

ವಿವೇಕ ಬಿರಾದಾರ
|

Updated on: Nov 20, 2024 | 7:03 AM

ಅಶ್ವತ್ಥಮರ (ಅರಳಿ) ಮರ ಹಿಂದೂ ಧರ್ಮದಲ್ಲಿ ಬಹಳ ಪವಿತ್ರವಾದ ವೃಕ್ಷ. ಅರಳಿ ಮರವನ್ನು ಅಶ್ವತ್ಥ ಮರ, ಬೋಧಿ ವೃಕ್ಷ, ಚೈತನ್ಯ, ವಾಸುದೇವ, ವಿಶ್ವ ಮರ ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ. ಅರಳಿ ಮರದ ಎಲೆ ದೀಪದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ಅಶ್ವತ್ಥ ಮರ (ಅರಳಿ) ಮರ ಹಿಂದೂ ಧರ್ಮದಲ್ಲಿ ಬಹಳ ಪವಿತ್ರವಾದ ವೃಕ್ಷ. ಅರಳಿ ಮರವನ್ನು ಅಶ್ವತ್ಥ ಮರ, ಬೋಧಿ ವೃಕ್ಷ, ಚೈತನ್ಯ, ವಾಸುದೇವ, ವಿಶ್ವ ಮರ ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ. ಹಿಂದೂ, ಬೌದ್ಧ ಧರ್ಮಗಳಲ್ಲಿ ಅರಳಿ ಮರವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಬುದ್ಧನು ಈ ಮರದ ಕೆಳಗೆ ಕುಳಿತು ಜ್ಞಾನೋದಯವನ್ನು ಪಡೆದನು. ಭಗವಾನ್ ವಿಷ್ಣುವಿನ ರೂಪವೆಂದು ಅರಳಿ ಮರವನ್ನು ಪರಿಗಣಿಸಲಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ, ಬ್ರಹ್ಮ, ವಿಷ್ಣು, ಭಗವಾನ್‌ ಶಿವರು ಅರಳಿ ಮರದಲ್ಲಿ ನೆಲೆಸಿದ್ದಾರೆ. ಅರಳಿ ಮರದ ಎಳೆಯ ಎಲೆ ತಾಮ್ರವರ್ಣದ್ದಾಗಿರುತ್ತದೆ. ಅರಳಿ ಮರದ ಎಲೆ ದೀಪದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.