ಜಮೀನು ವಿವಾದ; ತೆಲಂಗಾಣದಲ್ಲಿ ಬಿಆರ್​ಎಸ್​ ನಾಯಕಿಯ ಗಂಡನಿಗೆ ಸುತ್ತಿಗೆಯಿಂದ ಹೊಡೆದ ಯುವಕ

ಜಮೀನು ವಿವಾದ; ತೆಲಂಗಾಣದಲ್ಲಿ ಬಿಆರ್​ಎಸ್​ ನಾಯಕಿಯ ಗಂಡನಿಗೆ ಸುತ್ತಿಗೆಯಿಂದ ಹೊಡೆದ ಯುವಕ

ಸುಷ್ಮಾ ಚಕ್ರೆ
|

Updated on: Nov 19, 2024 | 7:10 PM

ತೆಲಂಗಾಣದ ನಿಜಾಮಾಬಾದ್‌ನಲ್ಲಿ ಜಮೀನು ವಿವಾದದಿಂದ ಕೋಪಗೊಂಡ ರಿಕ್ಷಾ ಚಾಲಕ ಬಿಆರ್‌ಎಸ್ ನಾಯಕಿಯ ಪತಿಗೆ ಸುತ್ತಿಗೆಯಿಂದ ಹೊಡೆದು, ಹಲ್ಲೆ ನಡೆಸಿದ್ದಾನೆ. ಸೋಮವಾರ ನಿಜಾಮಾಬಾದ್‌ನ ಸ್ಥಳೀಯ ಕಾರ್ಪೊರೇಟರ್ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಚಂದ್ರಶೇಖರ್ ಅವರ ತಲೆಗೆ ತೀವ್ರ ಗಾಯಗಳಾಗಿವೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು.

ಹೈದರಾಬಾದ್: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ರಿಕ್ಷಾ ಚಾಲಕನೊಬ್ಬ ನಿಜಾಮಾಬಾದ್ ಪುರಸಭೆಯ ಮಾಜಿ ಮೇಯರ್ ಪತಿ ಹಾಗೂ ಬಿಆರ್​ಎಸ್​ ನಾಯಕಿ ದಂಡು ನೀತು ಕಿರಣ್ ಅವರ ಪತಿ ದಂಡು ಚಂದ್ರಶೇಖರ್ ಮೇಲೆ ಸುತ್ತಿಗೆಯಿಂದ ಅಮಾನುಷವಾಗಿ ಹಲ್ಲೆ ನಡೆಸಿರುವುದು ಕಂಡುಬಂದಿದೆ. ಸೋಮವಾರ ನಿಜಾಮಾಬಾದ್‌ನ ಸ್ಥಳೀಯ ಕಾರ್ಪೊರೇಟರ್ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಚಂದ್ರಶೇಖರ್ ಅವರ ತಲೆಗೆ ತೀವ್ರ ಗಾಯಗಳಾಗಿವೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ