ಇವತ್ತು ದೇಶವೇನೇದರೂ ಉಳಿದಿದ್ದರೆ ಅದು ಬಿಜೆಪಿ ಮತ್ತು ಆರೆಸ್ಸೆಸ್ನಿಂದ ಮಾತ್ರ: ಅಶೋಕ
ಬಿಜೆಪಿ ಮತ್ತು ಆರೆಸ್ಸೆಸ್ ದೇಶಭಕ್ತರ ಪಕ್ಷಗಳು ಅದರೆ ದೇಶವನ್ನು ಇಬ್ಭಾಗ ಮಾಡಿದ್ದು ಕಾಂಗ್ರೆಸ್, ಈ ಪಕ್ಷದ ನಾಯಕರು ಬಾಯಿತೆಗೆದರೆ ವಿಷ, ಕಾರ್ಕೋಟಕ ವಿಷ ಅಂತಾರಲ್ಲ ಅಂಥ ವಿಷ, ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ ಪಟಾಕಿ ಸಿಡಿಸುವ ಸಂಸ್ಕೃತಿ ಕಾಂಗ್ರೆಸ್ ಪಕ್ಷದ್ದು ಎಂದು ಅಶೋಕ ಹೇಳಿದರು.
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಟಿವಿ9 ಪ್ರತಿನಿಧಿಯೊಂದಿಗೆ ಮಾತಾಡಿದ ವಿರೋಧ ಪಕ್ಷದ ನಾಯಕ ಅರ್ ಅಶೋಕ ಅವರು ಬಿಜೆಪಿ ಮತ್ತು ಆರೆಸ್ಸೆಸ್ ಬಗ್ಗೆ ಕೇವಲವಾಗಿ ಮಾತಾಡಿರುವ ಮಲ್ಲಿಕಾರ್ಜುನ ಖರ್ಗೆ ವಯಸ್ಸಾಗ್ತಾ ರೆಬೆಲ್ ಥರ ಆಡುತ್ತಿದ್ದಾರೆ, ಇವತ್ತು ದೇಶವೇನಾದರೂ ಉಳಿದಿದ್ದರೆ ಅದು ಬಿಜೆಪಿ ಮತ್ತು ಆರೆಸ್ಸೆಸ್ನಿಂದ, ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಒಗ್ಗೂಡಿಸುತ್ತಿದ್ದಾರೆ, ಕಾಂಗ್ರೆಸ್ ಪಕ್ಷದವರಿಗೆ ಪುನಃ ದೇಶದ ಅಧಿಕಾರವೇನಾದರೂ ಸಿಕ್ಕಿದ್ದರೆ ಪಾಕಿಸ್ತಾನ ಮಾಡಿಬಿಡುತ್ತಿದ್ದರು ಎಂದು ಹೇಳಿದರು
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಡವರಿಗೆ ಒಂದು ಸೈಟು ಸಹ ಕೊಡದ ಸಿದ್ದರಾಮಯ್ಯಗೆ ಮೈಸೂರಲ್ಲಿ 14 ಸೈಟು ಬೇಕು: ಅಶೋಕ
Published on: Nov 19, 2024 07:07 PM
Latest Videos