ಬಡವರಿಗೆ ಒಂದು ಸೈಟು ಸಹ ಕೊಡದ ಸಿದ್ದರಾಮಯ್ಯಗೆ ಮೈಸೂರಲ್ಲಿ 14 ಸೈಟು ಬೇಕು: ಅಶೋಕ

ಬಡವರಿಗೆ ಒಂದು ಸೈಟು ಸಹ ಕೊಡದ ಸಿದ್ದರಾಮಯ್ಯಗೆ ಮೈಸೂರಲ್ಲಿ 14 ಸೈಟು ಬೇಕು: ಅಶೋಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 19, 2024 | 5:28 PM

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸೇರಿ ಕರ್ನಾಟಕವನ್ನು ಪಾಕಿಸ್ತಾನ ಮಾಡಹೊರಟಿದ್ದಾರೆ, ಕುಕ್ಕರ್​ ಬ್ರ್ಯಾಂಡಿನ ಜನರನ್ನು ಇವರು ತಮ್ಮ ಸಹೋದರರು ಎನ್ನುತ್ತಾರೆ, ಹಾಗಾಗೇ ದೇವಸ್ಥಾನ, ಶಾಲಾ ಅವರಣ ಹೀಗೆ ಸಿಕ್ಕ ಸಿಕ್ಕ ಜಾಗವನ್ನೆಲ್ಲ ವಕ್ಫ್ ಬೋರ್ಡ್ ಹೆಸರಿಗೆ ಬರೆದುಕೊಳ್ಳುವಂತೆ ಜಮೀರ್ ಅಹ್ಮದ್​ಗೆ ಹೇಳಿದ್ದಾರೆ ಎಂದು ಅಶೋಕ ಹೇಳಿದರು.

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ರೈತರ ಪರ ಹೋರಾಟ ಮುಂದುವರಿಸಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ತರಾಟೆಗೆ ತೆಗೆದುಕೊಂಡರು. ಸಿದ್ದರಾಮಯ್ಯ ಚಿಕ್ಕಬಳ್ಳಾಪುರದಲ್ಲಿ ಬಡವರಿಗೆ ಒಂದು ಸೈಟನ್ನೂ ಕೊಡಲಿಲ್ಲ, ಆದರೆ ಡಾ ಕೆ ಸುಧಾಕರ್ ಕೊಡಬೇಕೆಂದಿದ್ದ 20,000 ಸೈಟುಗಳನ್ನು ಕಿತ್ತುಕೊಂಡರು, ಕರ್ನಾಟಕ ಇತಿಹಾಸದಲ್ಲಿ ದಾಖಲೆಯ 800 ಎಕರೆ ಜಮೀನನ್ನು ಕಂದಾಯ ಸಚಿವನಾಗಿದ್ದ ತಾನೇ ಸೈಟುಗಳಿಗಾಗಿ ಮಂಜೂರು ಮಾಡಿದ್ದು ಎಂದು ಅಶೋಕ ಹೇಳಿದರು. ಬಡವರಿಗೆ ಒಂದೂ ಸೈಟು ಕೊಡದ ಸಿದ್ದರಾಮಯ್ಯಗೆ ಮಾತ್ರ ಮೈಸೂರಲ್ಲಿ ದೊಡ್ಡ ಸೈಜಿನ 14 ಸೈಟುಗಳು ಬೇಕು ಎಂದು ಅವರು ಗೇಲಿ ಮಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸರ್ಕಾರೀ ಶಾಲೆ ಅವರಣದಲ್ಲಿ ಮಸೀದಿ ಕಟ್ಟಿರುವುದು ವಕ್ಫ್ ಬೋರ್ಡ್ ದುರಹಂಕಾರವಲ್ಲದೆ ಮತ್ತೇನು? ಅಶೋಕ