ಬೆಳಗ್ಗೆ ತಮ್ಮ ಮೇಲೆ ರೇಗಿದ್ದ ಮುಡಾ ಹಿಂದಿನ ಆಯುಕ್ತ ಮಧ್ಯಾಹ್ನ ಊಟಕ್ಕೆ ಬಂದಾಗ ಮಾಧ್ಯಮದವರು ಮುಗಿಬಿದ್ದರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಯನ್ನೊಳಗೊಂಡ ಮುಡಾ ಪ್ರಕರಣದ ಬಗ್ಗೆ ಮಾತಾಡಿದ ನಟೇಶ್ ವಿಚಾರಣೆ ಜಾರಿಯಲ್ಲಿರುವುದರಿಂದ ಏನನ್ನೂ ಹೇಳಲಾಗದು, ಸಿಎಂ ಪತ್ನಿಯವರಿಗೆ ತಮ್ಮ ಅವಧಿಯಲ್ಲಿ ಸೈಟು ಅಲಾಟ್ ಆಗಿರೋದು ನಿಜ, ಕಾಯ್ದೆ ಮತ್ತು ನಿಯಮಾವಳಿಗಳ ಬಗ್ಗೆ ಅಧಿಕಾರಗಳ ದೃಷ್ಟಿಕೋನ ಭಿನ್ನವಾಗಿರುತ್ತದೆ ಎಂದು ನಟೇಶ್ ಹೇಳಿದರು.
ಮೈಸೂರು: ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅಂತ ಪ್ರಾಯಶಃ ಇದನ್ನೇ ಹೇಳೋದು. ಇಂದು ಲೋಕಾಯುಕ್ತ ಕಚೇರಿಗೆ ಬಂದ ಹಿಂದಿನ ಮುಡಾ ಆಯುಕ್ತ ಡಿಬಿ ನಟೇಶ್ ತನ್ನ ಆಗಮನದ ವಿಡಿಯೋ ಮಾಡುತ್ತಿದ್ದ ಮಾಧ್ಯಮದವರ ಮೇಲೆ ಡ್ಯಾನ್ಸ್ ಮಾಡ್ತಾ ಇದ್ದೀನಾ? ಕಾಮನ್ ಸೆನ್ಸ್ ಇಲ್ವಾ ಅಂತ ರೇಗಿದ್ದರು. ನಟೇಶ್ ಬೆಳಗಿನ ವಿಚಾರಣೆ ಮುಗಿಸಿಕೊಂಡು ಮಧ್ಯಾಹ್ನದ ಊಟಕ್ಕೆಂದು ಬಂದಾಗ ಅವರಿಗಾಗಿ ಕಾಯುತ್ತಿದ್ದ ಮಿಡಿಯಾದವರು ಮುಗಿಬಿದ್ದರು. ನೀವು ಮಾತಾಡಿದ್ದು ತಪ್ಪಲ್ವಾ? ಯಾಕೆ ಕಾಮನ್ ಸೆನ್ಸ್ ಅಂತ ಇಲ್ಲ ಹೇಳಿದ್ದು ಅಂತ ಎಲ್ಲರೂ ಕೇಳಲಾರಂಭಿಸಿದಾಗ ಕಕ್ಕಾಬಿಕ್ಕಿಯಾದ ನಟೇಶ್ ಮೊದಲು ನಿರುತ್ತರರಾದರೂ ನಂತರ ಸಾವರಿಸಿಕೊಂಡು ಏನೇನೋ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಲೋಕಾಯುಕ್ತ ಕಚೇರಿಗೆ ಆಗಮಿಸಿದ ಹಿಂದಿನ ಮುಡಾ ಆಯುಕ್ತ ನಟೇಶ್ ಮಾಧ್ಯಮಗಳ ಮೇಲೆ ಕಿಡಿ ಕಾರಿದರು
Latest Videos