ಸಿದ್ದರಾಮಯ್ಯ ತನಗೆ ನಿವೇಶನಗಳು ಬೇಡವೆಂದಿದ್ದರು ಎಂದ ಮುಡಾ ಮಾಜಿ ಅಧ್ಯಕ್ಷ ಧ್ರುವಕುಮಾರ್

ಸಿದ್ದರಾಮಯ್ಯ ತನಗೆ ನಿವೇಶನಗಳು ಬೇಡವೆಂದಿದ್ದರು ಎಂದ ಮುಡಾ ಮಾಜಿ ಅಧ್ಯಕ್ಷ ಧ್ರುವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on:Nov 19, 2024 | 1:55 PM

ತಾನು ಮುಡಾ ಅಧ್ಯಕ್ಷನಾಗುವ ಮೊದಲು ಸಹ 50: 50 ಅನುಪಾತದಲ್ಲಿ ಸೈಟು ಹಂಚಿಕೆ ಜಾರಿಯಲ್ಲಿದ್ದರೂ ತನ್ನ ಅವಧಿಯಲ್ಲಿ ಹಾಗೆ ಮಾಡಿಲ್ಲ, ಆದರೆ ನಿವೇಶನಗಳಿಗೆ ಭಾರೀ ಬೇಡಿಕೆ ಇದ್ದ ಕಾರಣ ರೈತರಿಂದ ಜಮೀನು ಸ್ವಾಧೀನ ಮಾಡಿಕೊಂಡು ಅವರಿಗೆ ಎಕರೆಗೆ 5 ಲಕ್ಷ ರೂ ನಿರ್ಧಾರ ಮಾಡಿದ್ದರೂ ರೈತರು ಮುಂದೆ ಬರಲಿಲ್ಲ ಎಂದು ಧ್ರುವಕುಮಾರ್ ಹೇಳಿದರು.

ಮೈಸೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಿ ಧ್ರುವಕುಮಾರ್ ತಮ್ಮ ಹೇಳಿಕೆಯನ್ನು ತಿರಚಿದರಾ ಎಂಬ ಅನುಮಾನ ಮೂಡುತ್ತಿದೆ. ಸಿದ್ದರಾಮಯ್ಯ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ 3.14 ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡ ಮುಡಾ, ಸೂಕ್ತ ಸ್ಥಳದಲ್ಲಿ ಬದಲೀ ನಿವೇಶನ ನೀಡುವ ಪ್ರಸ್ತಾಪವನ್ನು ತೆಗೆದುಕೊಂಡು ಸಿದ್ದರಾಮಯ್ಯ ಬಳಿ ಹೋದಾಗ, ತಾನು ಮುಖ್ಯಮಂತ್ರಿಯಾಗಿರುವುದರಿಂದ ಮುಡಾ ವ್ಯವಹಾರದಲ್ಲಿ ಭಾಗಿಯಾಗಲ್ಲ, ತನಗೆ ನಿವೇಶನಗಳು ಬೇಡ ಎಂದಿದ್ದರಂತೆ. ಆದರೆ, ಪಾರ್ವತಿ ಸಿದ್ದರಾಮಯ್ಯ ಬದಲೀ ನಿವೇಶನಗಳಿಗಾಗಿ ಒತ್ತಾಯಿಸುತ್ತಿದ್ದಾರೆ ಎಂದು ಹಿಂದೆ ಧ್ರುವಕುಮಾರ್ ಹೇಳಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮೈಸೂರು ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಸಂಬಂಧಿಗೆ ಇಡಿ ಡ್ರಿಲ್​

Published on: Nov 19, 2024 01:54 PM