Bypoll results: ವಿಧಾನಸಭಾ ಉಪಚುನಾವಣೆಯಲ್ಲಿ 13 ಸ್ಥಾನಗಳ ಪೈಕಿ ಇಂಡಿಯಾ ಬಣಕ್ಕೆ 10 ಸೀಟು, ಬಿಜೆಪಿಗೆ 2

|

Updated on: Jul 13, 2024 | 7:42 PM

ಡೆಹ್ರಾದಲ್ಲಿ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರ ಪತ್ನಿ ಕಮಲೇಶ್ ಠಾಕೂರ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು, ಅಲ್ಲಿ ಅವರು ಬಿಜೆಪಿಯ ಹೋಶ್ಯಾರ್ ಸಿಂಗ್ ವಿರುದ್ಧ 9,399 ಮತಗಳ ಅಂತರದಿಂದ ಗೆದ್ದಿದ್ದಾರೆ. ನಲಗಢ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹರ್ದೀಪ್ ಸಿಂಗ್ ಬಾವಾ ಅವರು ಬಿಜೆಪಿಯ ಕೆಎಲ್ ಠಾಕೂರ್ ಅವರನ್ನು 8,990 ಮತಗಳ ಅಂತರದಿಂದ ಸೋಲಿಸಿದ್ದಾರೆ.

Bypoll results: ವಿಧಾನಸಭಾ ಉಪಚುನಾವಣೆಯಲ್ಲಿ 13 ಸ್ಥಾನಗಳ ಪೈಕಿ ಇಂಡಿಯಾ ಬಣಕ್ಕೆ 10 ಸೀಟು, ಬಿಜೆಪಿಗೆ 2
ಇಂಡಿಯಾ ಬಣ
Follow us on

ದೆಹಲಿ ಜುಲೈ 13: ಏಳು ರಾಜ್ಯಗಳಾದ್ಯಂತ ಶನಿವಾರ ನಡೆದ 13 ವಿಧಾನಸಭಾ ಸ್ಥಾನಗಳ ಉಪಚುನಾವಣೆ (Assembly Bypoll results) ಮತ ಎಣಿಕೆಯಾಗಿ ಫಲಿತಾಂಶ ಪ್ರಕಟವಾದಾಗ ಇಂಡಿಯಾ ಬಣ (INDIA bloc) 10 ಸ್ಥಾನಗಳನ್ನು ಗಳಿಸಿದೆ. ಅದೇ ವೇಳೆ ಬಿಜೆಪಿ (BJP) ಎರಡು ಕ್ಷೇತ್ರಗಳಲ್ಲಿ ಮತ್ತು ಪಕ್ಷೇತರ ಅಭ್ಯರ್ಥಿಯೊಬ್ಬರು ಒಂದು ಕ್ಷೇತ್ರ ಗೆದ್ದುಕೊಂಡಿದ್ದಾರೆ. ಜುಲೈ 10 ರಂದು ಚುನಾವಣೆ ನಡೆದ ವಿಧಾನಸಭಾ ಕ್ಷೇತ್ರಗಳಲ್ಲಿ, ಹಿಮಾಚಲ ಪ್ರದೇಶದ ಡೆಹ್ರಾ ಮತ್ತು ನಲಗಢ್ ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದುಕೊಂಡಿತು. ಹಮೀರ್‌ಪುರದಲ್ಲಿ ಬಿಜೆಪಿ ಗೆದ್ದು ಬೀಗಿದೆ.

ಡೆಹ್ರಾದಲ್ಲಿ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರ ಪತ್ನಿ ಕಮಲೇಶ್ ಠಾಕೂರ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು, ಅಲ್ಲಿ ಅವರು ಬಿಜೆಪಿಯ ಹೋಶ್ಯಾರ್ ಸಿಂಗ್ ವಿರುದ್ಧ 9,399 ಮತಗಳ ಅಂತರದಿಂದ ಗೆದ್ದಿದ್ದಾರೆ. ನಲಗಢ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹರ್ದೀಪ್ ಸಿಂಗ್ ಬಾವಾ ಅವರು ಬಿಜೆಪಿಯ ಕೆಎಲ್ ಠಾಕೂರ್ ಅವರನ್ನು 8,990 ಮತಗಳ ಅಂತರದಿಂದ ಸೋಲಿಸಿದ್ದಾರೆ. ಆದಾಗ್ಯೂ, ಹಮೀರ್‌ಪುರ ಕ್ಷೇತ್ರದಲ್ಲಿ ಬಿಜೆಪಿಯ ಆಶಿಶ್ ಶರ್ಮಾ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನಾಯಕ ಪುಷ್ಪಿಂದರ್ ವರ್ಮಾ ಅವರನ್ನು 1,571 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಫೆಬ್ರವರಿ 27 ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಆರು ಕಾಂಗ್ರೆಸ್ ಬಂಡುಕೋರರೊಂದಿಗೆ ಆಗ ಸ್ವತಂತ್ರ ಶಾಸಕರಾಗಿದ್ದ ಹೊಶ್ಯಾರ್ ಸಿಂಗ್, ಆಶಿಶ್ ಶರ್ಮಾ ಮತ್ತು ಕೆಎಲ್ ಠಾಕೂರ್ ಅವರು ಮತ ಚಲಾಯಿಸಿದ ನಂತರ ಮೂರು ವಿಧಾನಸಭಾ ಸ್ಥಾನಗಳು ಖಾಲಿಯಾದವು. ಅವರು ಮಾರ್ಚ್ 23 ರಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ತಮ್ಮ ರಾಜೀನಾಮೆಗಳನ್ನು ಅಂಗೀಕರಿಸುವಂತೆ ಸ್ಪೀಕರ್‌ಗೆ ನಿರ್ದೇಶನ ನೀಡುವಂತೆ ಹಿಮಾಚಲ ಪ್ರದೇಶ ಹೈಕೋರ್ಟ್‌ಗೆ ಮನವಿ ಮಾಡಿದರು.

ಉತ್ತರಾಖಂಡದಲ್ಲಿ ಎರಡು ಸ್ಥಾನಗಳಿಗೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಲಖಪತ್ ಸಿಂಗ್ ಬುಟೋಲಾ ಬದರಿನಾಥ್‌ನಿಂದ ಗೆದ್ದು, ಬಿಜೆಪಿಯ ರಾಜೇಂದ್ರ ಸಿಂಗ್ ಭಂಡಾರಿ ಅವರನ್ನು 5,224 ಮತಗಳ ಅಂತರದಿಂದ ಸೋಲಿಸಿದರು. ಮಂಗಳೂರ್ ಕ್ಷೇತ್ರವನ್ನು ಖಾಜಿ ಮೊಹಮ್ಮದ್ ನಿಜಾಮುದ್ದೀನ್ ಅವರು ಬಿಜೆಪಿಯ ಕರ್ತಾರ್ ಸಿಂಗ್ ಭದಾನ ಅವರನ್ನು 422 ಮತಗಳಿಂದ ಸೋಲಿಸಿದರು.

ಮೂರು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ರಾಜೇಂದ್ರ ಸಿಂಗ್ ರಾಜೀನಾಮೆ ನೀಡಿ ಮಾರ್ಚ್‌ನಲ್ಲಿ ಬುಜೆಪಿ ಸೇರಿದ ನಂತರ ಬದರಿನಾಥ್ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು. ಅಕ್ಟೋಬರ್ 2023 ರಲ್ಲಿ ಬಿಎಸ್ಪಿ ಶಾಸಕ ಸರ್ವಂತ್ ಕರೀಂ ಅನ್ಸಾರಿ ನಿಧನರಾದ ನಂತರ ಮಂಗಳೂರಿನಲ್ಲಿ ಮತದಾನ ನಡೆಯಿತು. ಅವರು 2012 ಮತ್ತು 2022 ರಲ್ಲಿ ಎರಡು ಬಾರಿ ಸ್ಥಾನವನ್ನು ಗೆದ್ದಿದ್ದರು.

ಇಂಡಿಯಾ ಬ್ಲಾಕ್‌ನ ಪಾಲುದಾರ ಆಮ್ ಆದ್ಮಿ ಪಾರ್ಟಿ (ಎಎಪಿ), ಪಂಜಾಬ್‌ನ ಜಲಂಧರ್ ಪಶ್ಚಿಮದಿಂದ ಮೊಹಿಂದರ್ ಭಗತ್ ಅವರನ್ನು ಕಣಕ್ಕಿಳಿಸಿದ್ದು ಅವರು ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಶೀತಲ್ ಅಂಗುರಾಲ್ ಅವರನ್ನು 37,325 ಮತಗಳ ಅಂತರದಿಂದ ಸೋಲಿಸಿದರು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ನಾಲ್ಕು ವಿಧಾನಸಭಾ ಸ್ಥಾನಗಳನ್ನು ಗೆದ್ದಿದೆ. ಅದರ ಅಭ್ಯರ್ಥಿಗಳಾದ ಕೃಷ್ಣ ಕಲ್ಯಾಣಿ ರಾಯಗಂಜ್‌ನಿಂದ, ಮುಕುತ್ ಮಣಿ ಅಧಿಕಾರಿ ರಣಘಾಟ್ ದಕ್ಷಿಣದಿಂದ, ಮಧುಪರ್ಣ ಠಾಕೂರ್ ಬಾಗ್ಡಾದಿಂದ ಮತ್ತು ಸುಪ್ತಿ ಪಾಂಡೆ ಮಾಣಿಕ್ತಾಲಾದಿಂದ ಗೆದ್ದಿದ್ದಾರೆ.

ಬೆಳಗ್ಗೆಯಿಂದಲೇ ಇಂಡಿಯಾ ಬಣ ಮುನ್ನಡೆ ಸಾಧಿಸಿತ್ತು. ಈ ನಾಲ್ಕು ವಿಧಾನಸಭಾ ಸ್ಥಾನಗಳಿಗೆ ಜುಲೈ 10 ರಂದು ಉಪಚುನಾವಣೆ ನಡೆದಿತ್ತು. ಈ ಮಧ್ಯೆ, ತಮಿಳುನಾಡಿನ ವಿಕ್ರವಾಂಡಿ ವಿಧಾನಸಭಾ ಕ್ಷೇತ್ರದಲ್ಲಿ ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ) ನಾಯಕ ಅಣ್ಣಿಯೂರ್ ಶಿವ ಗೆದ್ದಿದ್ದಾರೆ. ಅಣ್ಣಿಯುರ್ ಶಿವ ಅವರು ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಅಭ್ಯರ್ಥಿ ಅನ್ಬುಮಣಿ ಸಿ ಅವರನ್ನು 67,00 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದರು.

ಇದನ್ನೂ ಓದಿ: ವಿಧಾನಸಭೆ ಉಪಚುನಾವಣೆಯಲ್ಲಿ ಇಂಡಿಯಾ ಬಣ ಮೇಲುಗೈ; ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಸೋಲಲಿದೆ: ಕಾಂಗ್ರೆಸ್

ಬಿಜೆಪಿ ಮಧ್ಯಪ್ರದೇಶದ ಅಮರವಾರ ಕ್ಷೇತ್ರವನ್ನು ಸಹ ಗೆದ್ದುಕೊಂಡಿತು, ಅಲ್ಲಿ ಅದರ ಅಭ್ಯರ್ಥಿ ಕಮಲೇಶ್ ಪ್ರತಾಪ್ ಶಾ ಅವರು ಕಾಂಗ್ರೆಸ್ ಪಕ್ಷದ ಧೀರನ್ ಶಾ ಅವರನ್ನು 3,027 ಮತಗಳ ಅಂತರದಿಂದ ಸೋಲಿಸಿದ್ದಾರೆ. ಬಿಹಾರದ ರುಪೌಲಿ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಶಂಕರ್ ಸಿಂಗ್ ಅವರು ಜನತಾ ದಳ (ಯುನೈಟೆಡ್) ಅಭ್ಯರ್ಥಿ ಕಲಾಧರ್ ಮಂಡಲ್ ಅವರನ್ನು 8,246 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ